ಕೋಟ್ಯಾನುಕೋಟಿ ಭಕ್ತರನ್ನ ಹೊಂದಿರೋ ಆರಾಧ್ಯ ದೇವರು ತಿರುಪತಿ ಶ್ರೀ ವೆಂಕಟೇಶ್ವರ. ಪ್ರತಿನಿತ್ಯವೂ ವೆಂಕಟೇಶ್ವರನ ಸನ್ನಿಧಿಗೆ ಭಕ್ತರಿಂದ ಅನೇಕ ರೂಪದಲ್ಲಿ ಕಾಣಿಕೆ ಹರಿದು ಬರುತ್ತೆ.ಆ ರೀತಿ ಬರುವ ಕಾಣಿಕೆಯಲ್ಲಿ ಭಕ್ತರು, ನಗದು, ಬಂಗಾರ, ಬೆಳ್ಳಿ, ವಜ್ರ, ವೈಡುರ್ಯಗಳನ್ನೂ ಸಮರ್ಪಿಸಿದ್ದುಂಟು.
ಹೀಗೆ ಭಕ್ತರು ಸಮರ್ಪಿಸಿದ ಚಿನ್ನವನ್ನ, ಅಲ್ಲಿನ TTD ಹೊರಗುತ್ತಿಗೆ ನೌಕರನೊಬ್ಬ ಬರೊಬ್ಬರಿ ಅರ್ಧ ಕೆಜಿ ಚಿನ್ನ ಕದಿಯಲು ಯತ್ನಿಸಿದ್ದಾನೆ.
ವೀರಶೆಟ್ಟಿ ಪೆಂಚಲಯ್ಯ ಎಂಬಾತ ಚಿನ್ನವನ್ನು ಕದ್ದಿರೋ TTD ಯ ಹೊರಗುತ್ತಿಗೆ ನೌಕರನಾಗಿದ್ದಾನೆ. ಈಗಾಲೇ ಈತನನ್ನ. ಬಂಧಿಸಲಾಗಿದ್ದು, ಶ್ರೀವಾರಿ ಪರಕಾಮಣಿಯ ಸಂಗ್ರಹಾಲಯದಿಂದ ಚಿನ್ನ ಕದಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.

ಕಳೆದ 2 ವರ್ಷಗಳಿಂದ ಕಾಣಿಕೆ ಹುಂಡಿ ಹಣ ಎಣಿಸುವ ಮತ್ತು ವಿಂಗಡಿಸುವ ಕೆಲಸದಲ್ಲಿ ತೊಡಗಿದ್ದನು. ಚಿನ್ನದ ಸಂಗ್ರಹಣಾ ಕೊಠಡಿಯಲ್ಲಿಟ್ಟಿದ್ದ ಚಿನ್ನಾಭರಣವನ್ನ ಈತ ಕದಿಯುತ್ತಿದ್ದ. ಎರೆಡು ದಿನಗಳ ಹಿಂದೆ ಶನಿವಾರ ಚಿನ್ನದ ಬಿಸ್ಕತ್ ಕದಿಯುವಾಗ ಸಿಕ್ಕಿಬಿದ್ದಿದ್ದಾನೆ.