29
ಬೆಂಗಳೂರು: ಮಂಗಳವಾರ ಬೆಂಗಳೂರಿನ ರಾಜಾಜಿನಗರದ ಇವಿ ಎಲೆಕ್ಟ್ರಿಕ್ ಬೈಕ್ ಶೋ ರೂಂ ಅಗ್ನಿ ಆಕಸ್ಮಿಕದಲ್ಲಿ ಮೃತಪಟ್ಟ ಅಕೌಂಟೆಂಟ್ ಪ್ರಿಯಾ, ಬುಧವಾರ (ನವೆಂಬರ್ 19) ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಆದರೆ ವಿಧಿಯಾಟ ಬೆಂಕಿಯ ಕೆನ್ನಾಲೆಗೆ ಸುಟ್ಟು ಭಸ್ಮವಾಗಿದ್ದಾಳೆ.
ಘಟನೆ ತಿಳಿದು ರಾಜಾಜಿನಗರ ಪೊಲೀಸ್ ಠಾಣೆ ಬಳಿ ಬಂದ ಪ್ರಿಯಾ ತಂದೆ, “ನಾಳೆ ಅವಳ ಬರ್ತಡೇ ಇತ್ತು, ಇವತ್ತು ಮಗಳನ್ನ ಕಳೆದುಕೊಂಡಿದ್ದೇವೆ. ಬರ್ತ್‌ಡೇಗೆ ಹೊಸ ಬಟ್ಟೆ ಕೊಡಿಸಿದ್ದೆ. ನಾವು ಓಕಳೀಪುರಂನಲ್ಲಿ ವಾಸವಿರೋದು. ನನ್ನ ಮಗಳು ಅಕೌಂಟೆಂಟ್ ಆಗಿ ಇಲ್ಲಿ 3 ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ಆದರೆ ಇದೀಗ ನಮ್ಮ ಜೊತೆಗೆ ಮಗಳು ಇಲ್ಲಾ ಅಂತಾ ಗೋಗರೆದಿದ್ದಾರೆ.