ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಶಿರಸಿಯ ಹಲವು ಕಡೆಗಳಲ್ಲಿ ಭಾನುವಾರ ಭೂಕಂಪನದ ವರದಿಯಾಗಿದ್ದು, ಸ್ಥಳೀಯರಯರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಸುಮಾರು 3 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಹೇಳಲಾಗುತ್ತಿದೆ.
ಕುಮಟಾ-ಶಿರಸಿ ನಡುವೆ ರಾಷ್ಟ್ರೀಯ ಹೆದ್ದಾರಿ ಕೆಲಸ ನಡೆಯುತ್ತಿದ್ದು, ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು ಕೊರೆಯುತ್ತಿರುವುದರಿಂದ ಬಂಡೆ ಕಲ್ಲುಗಳನ್ನು ಸಿಡಿಸಿರಬಹುದು ಎಂದು ಕೆಲವರು ಭಾವಿಸಿದ್ದು, ಇನ್ನೂ ಕೆಲವರು ಇದು ಭೂಕಂಪನವೇ ಎಂದು ಭಾವಿಸಿದ್ದಾರೆ.
ಇದಕ್ಕೆ ಸಂಭಂದಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಸುದ್ದಿಗಳು ಹರಿದಾಡುತ್ತಿದ್ದು, ಸ್ಥಳಿಯರು ಭಯಭೀತರಾಗಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ. ಹಾಗಾಗಿ ಸಂಬಂಧಪಟ್ಟ ಇಲಾಖೆಯವರು ಇದನ್ನು ದೃಡಪಡಿಸಬೇಕಾಗಿದೆ.
ಆದರೆ ಭೂ ವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ವರದಿಯ ಪ್ರಕಾರ ಸಂಜೆ ಭಾರತೀಯ ಕಾಲಮಾನ 6.45.32 ಸೆಂಕೆಡಗಳ ಸಮಯದಲ್ಲಿ ಬಂಗಾಲಕೊಲ್ಲಿಯಲ್ಲಿ 4.7ರಿಕ್ಟರ್ ಮಾಪನದಲ್ಲಿ ಭೂಮಿ ಕಂಪಿಸಿದ ವರದಿಯಾಗಿದೆ.