ಭೂಮಿಯು ಪೂರ್ವಕ್ಕೆ ವಾಲಿರುವುದರಿಂದ ನಾವು ಬೇಸಿಗೆ, ಮಳೆ ಮತ್ತು ಚಳಿಗಾಲಗಳನ್ನು ಅನುಭವಿಸುತ್ತೇವೆ ಎಂದು ವಿಜ್ಞಾನಿಗಳು ಮನಗಂಡಿದ್ದಾರೆ. ಈರೀತಿ ಭೂಮಿ ತನ್ನ ಅಕ್ಷೆಯಲ್ಲಿ ವಾಲಿರಲು ಕಾರಣ, ಥಿಯಾ ಎಂಬ ಮಂಗಳನ ಗಾತ್ರದ ವಸ್ತುವಿನೊಂದಿಗಿನ ಉಂಟಾದ ಘರ್ಷಣೆಯಿಂದಾಗಿ ವಾಲಿದೆ ಎಂದು ಅಧ್ಯನ ತಿಳಿಸುತ್ತದೆ.
ಆದರೆ ಈಗ ಹೊಸ ಅಧ್ಯನದ ಪ್ರಕಾರ ಭೂಮಿಯು ಕೇವಲ 17 ವರ್ಷಗಳಲ್ಲಿ 31.5 ಇಂಚುಗಳಷ್ಟು ಹೆಚ್ಚು ಪೂರ್ವಕ್ಕೆ ವಾಲಿದೆ. ಅಂದರೆ ಇದು ಯಾವುದೇ ಕ್ಷುದ್ರಗ್ರಹಗಳು, ಸೌರ ಜ್ವಾಲೆಗಳು ಅಥವಾ ಯಾವುದೇ ಕಾಸ್ಮಿಕ್ ವಿದ್ಯಮಾನದಿಂದಲ್ಲ. ಕಾರಣ? ಮಾನವರು ಭೂಮಿಯ ಆಳದಲ್ಲಿರುವ ಶತಕೋಟಿ ಟನ್ ಅಂತರ್ಜಲವನ್ನು ಪಂಪ್ ಮಾಡಿ ಮರುಹಂಚಿಕೆ ಮಾಡುತ್ತಿರುವುದು.
ಸಿಯೋಲ್ ನ್ಯಾಷನಲ್ ಯೂನಿವರ್ಸಿಟಿಯ ಭೂಭೌತ ಶಾಸ್ತ್ರಜ್ಞ ಕಿ-ವೀನ್ ಸಿಯೊ ನೇತೃತ್ವದ ಅಧ್ಯಯನವು ಈ ಬೃಹತ್ ಅಂತರ್ಜಲ ಬಳಕೆಯು ಭೂಮಿಯ ವಾಲಲು ಕಾರಣವಾಗಿದೆ ಎಂದು ಬಹಿರಂಗಪಡಿಸಿದೆ. “ಅಂತರ್ಜಲದ ಮರುಹಂಚಿಕೆಯು ತಿರುಗುವ ಧ್ರುವದ ಚಲನೆಯ ಮೇಲೆ ಅತಿದೊಡ್ಡ ಪರಿಣಾಮ ಬೀರುತ್ತದೆ” ಎಂದು ಎಸ್ಇಒ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜ್ಞಾನಿಗಳು ಅಂದಾಜಿಸಿದಂತೆ, 1993 ರಿಂದ 2010 ರ ನಡುವೆ 2,150 ಗಿಗಾಟನ್ ಅಂತರ್ಜಲವನ್ನು (ಸಮುದ್ರ ಮಟ್ಟವನ್ನು 0.24 ಇಂಚುಗಳಷ್ಟು ಹೆಚ್ಚಿಸಲು ಬೇಕಾಗುವಷ್ಟು) ಪಂಪ್ ಮಾಡಿ ಜಾಗತಿಕವಾಗಿ ಸ್ಥಳಾಂತರಿಸಲಾಗಿದೆ ಎಂದು ಅಂದಾಜಿಸಿದ್ದಾರೆ. ಅಂದರೆ, 1 ಗಿಗಾಟನ್ ತೂಕ ಭೂಮಿಯ ಮೇಲೆ ವಾಸಿಸುವ ಒಟ್ಟಾರೆ ಮಾನವರ ತೂಕಕ್ಕಿಂತ ಹೆಚ್ಚಾಗುತ್ತದೆ.
ಈ ವಾಲುವಿಕೆಯು ಋತುಗಳನ್ನು ಬದಲಾಯಿಸುವುದಿಲ್ಲವಾದರೂ, ಇದು ಜಾಗತಿಕ ಹವಾಮಾನ ವೈಪರಿತ್ಯಗಳ ಮೇಲೆ ಪ್ರಭಾವ ಬೀರಬಹುದು. ಇದೇ ವಿಚಾರವಾಗಿ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ವಿಜ್ಞಾನಿ ಸುರೇಂದ್ರ ಅಧಿಕಾರಿ ಈ ಬದಲಾವಣೆಗಳು ಗ್ರಹದ ಸೂಕ್ಷ್ಮ ಸಮತೋಲನದ ಮೇಲೆ ಅನಿರೀಕ್ಷಿತ ಪರಿಣಾಮಗಳನ್ನು ಬೀರಬಹುದು ಎಂದು ಎಚ್ಚರಿಸಿದ್ದಾರೆ.
ಮೂಲತಃ ಜೂನ್ 2023 ರಲ್ಲಿ ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್ನಲ್ಲಿ ಪ್ರಕಟವಾದ ಈ ಸಂಶೋಧನೆಯು ಒಂದು ವರ್ಷದ ನಂತರವೂ ಹೆಚ್ಚು ಗಮನ ಸೆಲೆಯುತ್ತಿದೆ. ಇದು ಮಾನವ ಕ್ರಿಯೆಗಳು ಭೂಮಿಯ ಮೇಲೆ ಯಾವರೀತಿ ಅಡ್ಡ ಪರಿಣಾಮಗಳನ್ನು ಬೀರಬಲ್ಲವು ಎಂಬುದನ್ನು ವಿವರಿಸುತ್ತದೆ.