ಗದಗ: ಮುಂಡರಗಿ ಪೂಜ್ಯರು ಸಾಹಿತ್ಯದಲ್ಲಿ ಕೃಷಿ ಮಾಡದ ಕ್ಷೇತ್ರವಿಲ್ಲ. ವಚನ ಸಾಹಿತ್ಯ, ಧರ್ಮ ಸಾಹಿತ್ಯ, ಮಕ್ಕಳ ಸಾಹಿತ್ಯ, ಪ್ರವಾಸ ಸಾಹಿತ್ಯ ಹೀಗೆ ವಿವಿಧ ರಂಗಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು, ಪೂಜ್ಯರ ವಚನಗಳು ಇಂದು ಯುವಕರಿಗೆ ಮಾರ್ಗದರ್ಶನ ನೀಡುವ ಆಯಾಮವಾಗಿದೆ ಎಂದು ಎ.ವೈ.ನವಲಗುಂದ ಅವರು ಹೇಳಿದರು.
ಮುಂಡರಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೂಜ್ಯರ ವಚನಗಳಲ್ಲಿ ಮಾನವೀಯ ಮೌಲ್ಯಗಳು ಜೀವನ ಮೌಲ್ಯಗಳು ಧಾರ್ಮಿಕ ಮೌಲ್ಯಗಳು ನೈತಿಕ ಮೌಲ್ಯಗಳು ಇದ್ದು ಜನಸಾಮಾನ್ಯರ ಬದುಕನ್ನ ಹಸನ ಮಾಡುವ ಸಾಹಿತ್ಯವಾಗಿದೆ. ಪೂಜ್ಯರ ಸಾಹಿತ್ಯವನ್ನು ಕುರಿತು ಡಾ. ತಿಪ್ಪೇರುದ್ರಸ್ವಾಮಿ ಹಾಗೂ ಡಾ. ಆರ್ ಸಿ ಹಿರೇಮಠರು ಬಹುಮುಖ ವ್ಯಕ್ತಿತ್ವದ ಅಧ್ಯಾತ್ಮದ ಅಧ್ಯಯನದ ಆಳ ಹೊಂದಿದ ಪೂಜ್ಯರು ಎಂದು ವರ್ಣಿಸಿದ್ದಾರೆ ಎಂದು ದತ್ತಿ ಉಪನ್ಯಾಸ ನಿಡಿದರು.
ಕಾರ್ಯಕ್ರಮವನ್ನು ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ. ವಿ. ಕುಲಕರ್ಣಿಯವರು ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ ಆರ್ ಎಲ್ ಪೊಲೀಸ್ ಪಾಟೀಲ್ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಆಡಳಿತಾಧಿಕಾರಿಗಳಾದ ಡಾ. ಬಿ. ಜಿ. ಜವಳಿಯವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡರಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ ಎಂ ಜಿ ಗಚ್ಚಣ್ಣವರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ ಸಾ ಪ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಆರ್. ವಾಯ್. ಪಾಟೀಲ್, ಕೃಷ್ಣ ಸಾಹುಕಾರ, ಲಿಂಗರಾಜ ಡಾವಣಗೇರಿ, ಎಸ್ ಕೆ ಹೊಳೆಯಣ್ಣವರ, ಮುತ್ತೂರಮಠರವರು ಉಪಸ್ಥಿತರಿದ್ದರು.