ಶಿರಹಟ್ಟಿ: ದಸರಾ ಕ್ರೀಡಾ ಕೂಟಗಳು ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ತೋರಿಸಲು ಉತ್ತಮ ವೇದಿಕೆಯಾಗಿದೆ ಎಲ್ಲರೂ ದಸರಾ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳಿ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಾಲೂಕ ಪಂಚಾಯತಿ ಶಿರಹಟ್ಟಿ ಸನ್ 2025- 26ನೇ ಸಾಲಿನ ಶಿರಹಟ್ಟಿ ತಾಲೂಕ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನಾ ಸಮಾರಂಭವನ್ನು ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಶಿರಹಟ್ಟಿ ಸುದ್ದಿ:ಪರಮೇಶ ಲಮಾಣಿ
ಕ್ರೀಡೆಯಲ್ಲಿ ಸೋಲು–ಗೆಲುವು ಇದ್ದೇ ಇದೆ. ಇಲ್ಲಿಗೆ ಬಂದ ಎಲ್ಲರಿಗೂ ಗೆಲ್ಲಲು ಸಾಧ್ಯವಿಲ್ಲ. ಸೋತವರು ತಮ್ಮ ತಪ್ಪು ತಿದ್ದಿಕೊಂಡು ಮುಂದಿನ ಬಾರಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪಿಎಸ್ಐ ಚೆನ್ನಯ್ಯ, ಶರಣು ಗೋಗೇರಿ ಯುವ ಸಬಲೀಕರಣ ಕ್ರೀಡಾ ಇಲಾಖೆ ಗದಗ,ಫಕ್ಕೀರೇಶ ರಟ್ಟಿಹಳ್ಳಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನಾಗರಾಜ್ ಲಕ್ಕುಂಡಿ ನಗರ ಘಟಕದ ಅಧ್ಯಕ್ಷರು, ಮುಖಂಡರಾದ ರಾಮಣ್ಣ ಕಂಬಳಿ, ಅಕ್ಬರ್ ಸಾಬ್ ಯಾದಗಿರಿ ಪರಶುರಾಮ್ ಡಂಕಬಳ್ಳಿ, ಮಲ್ಲಿಕಾರ್ಜುನ್ ಕಬಾಡಿ, ಶ್ರೀಮತಿ ನಂದಾ ಪಲ್ಲೆದ, ರವಿ ಲಮಾಣಿ, ಎಂ ಡಿ ತಳ್ಳಳ್ಳಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿರಹಟ್ಟಿ, ಸುನಿಲ್ ಲಮಾಣಿ, ರಾಜು ಲಮಾಣಿ ಹಾಗೂ ಕ್ರೀಡಾ ಅಭಿಮಾನಿಗಳು ಕ್ರೀಡಾಪಟುಗಳು ಉಪಸ್ಥಿತರಿದ್ದರು.