ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ನಾಕಾದಲ್ಲಿ ಕಳೆದ ತಿಂಗಳು ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ಸಮಗ್ರ ರೈತ ಸಂಘಟನೆಗಳು ಹೋರಾಟ ನಡೆಸಿದ ಸಂದರ್ಭದಲ್ಲಿ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಜೀಯವರ ಭಾವಚಿತ್ರಗಳಿಗೆ ಅವಮಾನ ಮಾಡಿರುವುದನ್ನು ಡಿಎಸ್ಎಸ್ ಉಗ್ರವಾಗಿ ಖಂಡಿಸುತ್ತದೆ ಎಂದು ಮುಖಂಡರಾದ ಸುರೇಶ ನಂದೆಣ್ಣವರ ಮತ್ತು ಕೊಟ್ಟೆಪ್ಪ ವರದಿ, ಫಕ್ಕೀರೇಶ ಮ್ಯಾಟನವರ ಆಕ್ರೋಶ ವ್ಯಕ್ತಪಡಿಸಿದರು.
ಅವರು ಗುರುವಾರ ಪತ್ರಿಕಾ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ,
ವರದಿ : ಪರಮೇಶ ಎಸ್ ಲಮಾಣಿ.
ರೈತರ ಹೋರಾಟದ ಸಂದರ್ಭದಲ್ಲಿ ರಾಷ್ಟ್ರ ಪಿತಾಮಹ ಮಹಾತ್ಮ ಗಾಂಧಿಜೀ ಮತ್ತು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಹೋರಾಟ ಪ್ರಾರಂಭಿಸಿದರು. ಆದರೆ ಹೋರಾಟದ ಸಂದರ್ಭದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಗಾಂಧಿಜೀ ಅವರ ಭಾವಚಿತ್ರಗಳಿಗೆ ಅವಮಾನ ಮಾಡಿದ್ದು ಖಂಡನೀಯ.
ಹೋರಾಟದ ವ್ಯಾವಸ್ಥಾಪಕರು ಮಂಜುನಾಥ ಮಾಗಡಿ ಮತ್ತು ಬಾವಚಿತ್ರಗಳಿಗೆ ಅವಮಾನ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನವೆಂಬರ್ 7 ರಂದು ಅಸ್ಪೃಶ್ಯತಾ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಸಲಾಗಿತ್ತು. ಆದರೆ ಪೊಲೀಸರು ಕೇವಲ ಎಪ್ಐಆರ್ ದಾಖಲಿಸಿಕೊಂಡಿದ್ದು, ಇದುರುವರೆಗೂ ಅವರನ್ನು ಬಂಧಿಸುವದಾಗಲಿ ಅಥವಾ ಕಾನೂನು ಕ್ರಮ ಜರುಗಿಸಲಾಗಲಿ ಮಾಡದೆ ಕಾಲಹರಣ ಮಾಡುತ್ತಿದ್ದಾರೆ ಇದನ್ನು ಡಿಎಸ್ಎಸ್ ಸಹಿಸುವುದಿಲ್ಲ. ಒಂದು ವಾರದೊಳಗಾಗಿ ಕಾನೂನು ಕಠಿಣ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಅದೇ ರೀತಿ ಆದರಹಳ್ಳಿಯ ಗವಿಮಠದ ಡಾ.ಕುಮಾರ ಮಹಾರಾಜರು ದಲಿತರು ಅಸ್ಪೃಶ್ಯತಾ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿರುವುದು ಜನಾಂಗಕ್ಕೆ ಬಗೆದ ಅನ್ಯಾಯ ಮತ್ತು ದ್ರೋಹವಾಗಿದೆ ಇದೇ ಸ್ವಾಮೀಜಿಯವರು ಎಕೆ.47 ಗನ್ ಖರೀದಿಸಲು ಒಡಾಡುತ್ತಿರುವುದು ಈ ಸುದ್ದಿ ಪ್ರಚಲಿತದಲ್ಲಿದೆ. ಅವರನ್ನು ಈ ಕೊಡಲೇ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸುರೇಶ್ ನಂದೆಣ್ಣವರ, ಕೋಟೆಪ್ಪ ವರ್ದಿ, ಫಕೀರೇಶ ಮ್ಯಾಟನ್ನವರ್, ಡಿ ಬಿ ಫಕ್ಕೀರಪ್ಪ, ರಮೇಶ್ ಅಡುಗಿಮನಿ, ರಾಮಪ್ಪ ಗಡದವರ, ನಾಗರಾಜ್ ನಂದೆಣ್ಣವರ, ಜಗದೀಶ್ ಹುಲಗಮ್ಮನವರ್, ಫಕ್ಕೀರೇಶ ನಂದೆಣ್ಣವರ, ಮಾರ್ತಾಂಡಪ್ಪ ಗಾಳೆಪ್ಪನವರ, ಮಹಾಂತೇಶ್ ಕರಬಸಪ್ಪನವರ,ಅನೀಲ ನಂದೆಣ್ಣವರ, ಬಸವರಾಜ ಹರಿಜನ, ಇದ್ದರು.
