9
ತುಮಕೂರ:ಕೃಷಿ ಹೊಂಡದಲ್ಲಿ ತನ್ನ ಯೂಟ್ಯೂಬ್ ಗೆ ವಿಡಿಯೋ ಹಾಕುವ ಸಲುವಾಗಿ, ಸೋಡಿಯಂ ಮೆಟಲ್ ಬಳಸಿ ಸ್ಫೋಟ ಮಾಡಿದ್ದ ಡ್ರೋನ್ ಪ್ರತಾಪ್ ಗೆ ನ್ಯಾಯಾಲಯ ಬಿಗ್ ಶಾಕ್ ಕೊಟ್ಟಿದೆ. ತುಮಕೂರು ಜಿಲ್ಲೆಯ ಮಿಡಿಗೇಶಿ ಪೊಲೀಸರು ಡೋನ್ ಪ್ರತಾಪ್ನ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಇದೀಗ ಡಿ.26 ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಮಧುಗಿರಿ ತಾಲೂಕಿನ JMFC ಕೋರ್ಟ್ ಆದೇಶ ಹೊರಡಿಸಿದೆ.