ತುಮಕೂರು: ಏನಾದರೊಂದು ಸುದ್ದಿಯಲ್ಲಿರುವ ಮಾಜಿ ಬಿಗ್‌ಬಾಸ್ ಸ್ಪರ್ಧಿ ಡೋನ್ ಪ್ರತಾಪ್ ಈ ಬಾರಿ ಪೊಲೀಸರ ಅತಿಥಿಯಾಗಿ ಸುದ್ದಿಗೊಳಗಾಗಿದ್ದಾರೆ.
ಜಮೀನಿನಲ್ಲಿರುವ ಕೃಷಿ ಹೊಂಡದ ನೀರಿನೊಳಗೆ ಕೈಯಲ್ಲಿ ಯಾವದೋ ವಸ್ತುವನ್ನ ಹಿಡಿದು ಎಸೆಯುತ್ತಾನೆ. ಅದು ನೀರಿನೊಳಗೆ ಬಿದ್ದ ತಕ್ಷಣ ಬಾಂಬ್ ಬ್ಲಾಸ್ಟ್ ಆದ ರೀತಿಯಲ್ಲಿ ಜೋರಾಗಿ ಸಿಡಿಯುತ್ತೆ. ಈ ವಿಡಿಯೋವನ್ನ ಡ್ರೋನ್ ಪ್ರತಾಪ್ ತಮ್ಮ ಯೂಟೂಬ್ ನಲ್ಲಿ ಹಂಚಿಕೊಂಡಿದ್ದು, ಇದೇ ಇದೀಗ ಮುಳುವಾಗಿದೆ.
ಹೌದು, ಡ್ರೋನ್ ಪ್ರತಾಪ್ ಕೈಯಲ್ಲಿ ಹಿಡಿದು ಎಸೆದಿರುವ ವಸ್ತು, ಸೋಡಿಯಂ ಕೆಮಿಕಲ್ ನಿಂದ ಕೂಡಿದ್ದಾಗುದೆ. ಇದನ್ನೇ ನೀರಿನಲ್ಲಿ ಎಸೆದು ಬ್ಲಾಸ್ಟ್ ಮಾಡಿದ್ದ ಪ್ರತಾಪ್ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳಿಂದ ಟೀಕೆಗೆ ಒಳಗಾಗಿದ್ದಾರೆ.
ಈ ಸಂಬಂಧ ಇಂದು ತುಮಕೂರು ಜಿಲ್ಲೆಯ ಮಿಡಿಗೇಶಿ ಪೊಲೀಸರು ಡೋನ್ ಪ್ರತಾಪ್‌ನ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.