ಗದಗ(ಶಿರಹಟ್ಟಿ): ವರದಕ್ಷಿಣೆ ಎಂಬ ಭೂತ ಇನ್ನೂ ಮಹಿಳೆಯರ ಜೀವವನ್ನು ಬಲಿಪಡೆಯುತ್ತಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಇಲ್ಲೊಂದು ಗ್ರಾಮದಲ್ಲಿ ಇನ್ನೂ ಹೆಚ್ಚು ವರದಕ್ಷಿಣೆಯ ಹಣವನ್ನು ತೆಗೆದುಕೊಂಡು ಬಾ ಎಂದು ಮಹಿಳೆಗೆ ಮನೆಯವರು ಎಲ್ಲರೂ ಸೇರಿಕೊಂಡು ಕಿರುಕುಳ ಕೊಡುತ್ತಿದ್ದರು.
ವರದಿ: ಪರಮೇಶ ಲಮಾಣಿ.
ಹಣ ತರದೇ ಇರುವ ಕಾರಣಕ್ಕೆ ಮಹಿಳೆಯನ್ನು ಕೊಲೆ ಮಾಡಿ ಮೃತ ದೇಹವನ್ನು ಬೇರೊಬ್ಬರ ಮನೆಯ ನೀರಿನ ಟ್ಯಾಂಕ್ ನಲ್ಲಿ ಹಾಕಿರುವ ಘಟನೆ ನೆಡೆದಿದೆ.
ಹೌದು…..! ನಾವು ಈಗ ಹೇಳುತ್ತಿರುವುದು ಶಿರಹಟ್ಟಿ ತಾಲೂಕಿನ ಮಜ್ಜೂರ ತಾಂಡಾದ ಹೊರ ವಲಯದಲ್ಲಿರುವ ನಾರಾಯಣ ಲಕ್ಷ್ಮಣ ತುಳಸಿಮನಿಯವರ ಸಂಪಿ (ಟ್ಯಾಂಕ್) ನಲ್ಲಿ ಪ್ರಿಯಾಂಕಾ ಮಹಾಂತೇಶ ಲಮಾಣಿ ಎಂಬ ಮಹಿಳೆಯ ಶವ ಪತ್ತೆಯಾಗಿದೆ.
ಮೃತ ಮಹಿಳೆಯ ಕುಟುಂಬಸ್ಥರು ನೇರವಾಗಿ ಗಂಡ ಹಾಗೂ ಅವರ ಕುಟುಂಬಸ್ಥರು ವಿರುದ್ಧ ಆರೋಪ ಮಾಡಿ ಶಿರಹಟ್ಟಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪೊಲೀಸ್ ಸಬ್ ಇನಸ್ಪೆಕ್ಟರ್ ಈರಪ್ಪ ರಿತ್ತಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸುತ್ತಿದ್ದಾರೆ. ಅಲ್ಲದೆ ಘಟನೆ ನೆಡೆದ ಸ್ಥಳಕ್ಕೆ ಸ್ವತಃ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ರೋಹನ್ ಜಗದೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದರು.
ಶಿರಹಟ್ಟಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದ್ದು, ಘಟನೆ ಬಗ್ಗೆ ಪರಿಶೀಲನೆ ನಡೆಸಿದ ಪೋಲಿಸರು ತನಿಖೆ ಕೈಗೊಂಡಿದ್ದಾರೆ.
