ಶಿರಹಟ್ಟಿ, ಜೂನ್ ೨೪ — ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರು ತಮ್ಮ ತಾಯಿ ಹಾಗೂ ದೊಡ್ಡಮ್ಮನ ನೆನಪಿಗಾಗಿ ಶರಣ ಸಾಹಿತ್ಯ ಪರಿಷತ್ತಿಗೆ (ಶಸಾಪ) ರೂ. 25,000 ದತ್ತಿನಿಧಿ ಚೆಕ್ಕನ್ನು ನೀಡಿದರು.
ಶಿರಹಟ್ಟಿ ಶಸಾಪ ಅಧ್ಯಕ್ಷ ಎಂ.ಕೆ. ಲಮಾಣಿ ಹಾಗೂ ಜಿಲ್ಲಾ ಕಾರ್ಯದರ್ಶಿ ಬೂದಪ್ಪ ಅಂಗಡಿಯವರು ಉಪಸ್ಥಿತರಿದ್ದರು.
ದತ್ತಿನಿಧಿ ಚೆಕ್ ನೀಡಿದ ವೇಳೆ ಮಾತನಾಡಿದ ಎಸ್.ಎಸ್. ಪಾಟೀಲ, “ಶರಣರು ಸಾರಿದ ತತ್ತ್ವ, ಸಾಹಿತ್ಯ, ಹಾಗೂ ಸಾಮಾಜಿಕ ದಾರ್ಶನಿಕತೆ ಹೊಸ ಪೀಳಿಗೆಗೆ ಪಠ್ಯವಾಗಬೇಕು. ತಾಯಿಯವರ ನೆನಪಿನಲ್ಲಿ ಈ ದಾನ ಮಾಡಿರುವುದು ನನ್ನ ಜೀವನದ ಒಂದು ಸಾರ್ಥಕ ಘಳಿಗೆ,” ಎಂದು ತಿಳಿಸಿದರು.
ಶಸಾಪ ಶಿರಹಟ್ಟಿ ಘಟಕವು ಇಂತಹ ದತ್ತಿನಿಧಿಗಳನ್ನು ಬಳಸಿಕೊಂಡು ಸಾಹಿತ್ಯ ಸಮ್ಮೇಳನ, ವಚನ ವಾಚನ, ಶಿಬಿರ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ಸುಕವಾಗಿದೆ ಎಂದು ಅಧ್ಯಕ್ಷ ಎಂ.ಕೆ. ಲಮಾಣಿ ಹೇಳಿದರು.