
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಮನ್ವೆಲ್ತ್ ಆಫ್ ಡೊಮಿನಿಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಡೊಮಿನಿಕಾ ಅವಾರ್ಡ್ ಆಫ್ ಹಾನರ್ ನೀಡಿ ಗೌರವಿಸಲಾಗುವುದು ಎಂದು ಪ್ರಕಟಿಸಿದೆ.
“ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಡೊಮಿನಿಕಾಗೆ ನೀಡಿದ ಕೊಡುಗೆಗಳು ಮತ್ತು ಭಾರತ ಮತ್ತು ಡೊಮಿನಿಕಾ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವ ಅವರ ಸಮರ್ಪಣೆಯನ್ನು ಗುರುತಿಸಿ ಕಾಮನ್ವೆಲ್ತ್ ಆಫ್ ಡೊಮಿನಿಕಾ ತನ್ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ಡೊಮಿನಿಕಾ ಪ್ರಶಸ್ತಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಿದೆ” ಎಂದು ಡೊಮಿನಿಕಾ ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಫೆಬ್ರವರಿ 2021 ರಲ್ಲಿ, ಭಾರತವು ಡೊಮಿನಿಕಾಗೆ 70,000 ಡೋಸ್ ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆಯನ್ನು ಪೂರೈಸಿತು.
2024 ರ ನವೆಂಬರ್ 19 ರಿಂದ 21 ರವರೆಗೆ ಗಯಾನಾದ ಜಾರ್ಜ್ಟೌನ್ನಲ್ಲಿ ನಡೆಯಲಿರುವ ಭಾರತ-ಕ್ಯಾರಿಕಾಮ್ ಶೃಂಗಸಭೆಯಲ್ಲಿ ಡೊಮಿನಿಕಾ ಅಧ್ಯಕ್ಷ ಸಿಲ್ವಾನಿ ಬರ್ಟನ್ ಅವರು ಪ್ರಧಾನಿ ಮೋದಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.