ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ವ್ಯಾಪ್ತಿಯ ಜನ್ನತ್ ನಗರದಲ್ಲಿ ಸೋಮವಾರ ಟಗರಿನ ಮೇಲೆ ಹತ್ತ ಇಪ್ಪತ್ತು ನಾಯಿಗಳ ಗುಂಪು ದಾಳಿ ಮಾಡಿದ ಘಟನೆ ಜರುಗಿದೆ.
ಘಟನೆಯ ವಿವರ:
ಜನ್ನತ ನಗರದ ನಿವಾಸಿ ಮುಸ್ತಾಕ್ ಅಹಮ್ಮದ ಮರದಾನಿ ಎಂಬುವವರಿಗೆ ಸೇರಿದ ಟಗರು ನಾಯಿಗಳ ದಾಳಿಗೆ ತುತ್ತಾಗಿದೆ ಟಗರಿನ ಮಾಲಿಕರು ಅದನ್ನು ಮೇಯಿಸಿಕೊಂಡು ಬಂದು ಮನೆಯ ಹೊರಗಡೆ ಕಟ್ಟಿದ್ದ ಇದೇ ವೇಳೆಗೆ ಸುಮಾರು ಹತ್ತ ಇಪ್ಪತ್ತು ನಾಯಿಗಳ ಗುಂಪೊಂದು ಎಕಾಏಕಿ ದಾಳಿ ಮಾಡಿ ಎಲ್ಲೆಂದರಲ್ಲಿ ಕಚ್ಚಿ ಎಳೆದಾಟಿ ಕೊಂದು ಹಾಕಿದೆ ನಾಯಿಗಳ ಸದ್ದು ಕೇಳಿ ಎದ್ದು ಬಡಿಗೆ ಹಿಡಿದುಕೊಂಡು ಬರುತ್ತಿದ್ದಂತೆ ನಾಯಿಗಳು ಒಡಿ ಹೋಗಿವೆ ಅಂದಾಜು 30 ಸಾವಿರ ರೂ ಬೆಲೆ ಬಾಳುವ ಟಗರನ್ನು ಕಳೆದುಕೊಂಡು ಮಾಲಿಕ ಕಣ್ಣೀರು ಹಾಕುತ್ತಿದ್ದಾರೆ.
ಪಾಲಕರ ಆತಂಕ:
ಜನ್ನತ್ ನಗರದಲ್ಲಿನ ಈ ಘಟನೆಯಿಂದ ಪಾಲಕರು ಆತಂಕಗೊಂಡಿದ್ದಾರೆ ಜನ್ನತ್ ನಗರದಲ್ಲಿಯೇ ಸುಮಾರು 30 ಕ್ಕೂ ಹೆಚ್ಚು ಬಿದಿ ನಾಯಿಗಳಿದ್ದು ಮಕ್ಕಳು ಆಟವಾಡುತ್ತಿರುವಾಗ ನಾಯಿಗಳು ದಾಳಿ ಮಾಡುವ ಭೀತಿ ಪಾಲಕರನ್ನು ಕಾಡುತ್ತಿದೆ.
ಪುರಸಭೆಯವರು ಅನಾಹುತ ಸಂಭವಿಸುವ ಮೊದಲೇ ಬಿದಿ ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು ಪತ್ರಿನಿತ್ಯವೂ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ನಾಯಿಗಳ ದಾಳಿಯ ಬಗ್ಗೆ ವರದಿ ಆಗುತ್ತಿದ್ದು, ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಲಯವು ಬಿದಿ ನಾಯಿಗಳ ನಿರ್ವಹಣೆಗೆ ಆದೇಶ ಮಾಡಿದ್ದು ಪುರಸಭೆಯವರು ಕೊಡಲೇ ಪಟ್ಟಣದ್ಯಾಂತ್ಯ ಬಿದಿನಾಯಿಗಳನ್ನು ನಿಯಂತ್ರಿಸಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಝಾಕೀರ ಹುಸೇನ್ ಹವಾಲ್ದಾರ
ಸಮಾಜಿಕ ಕಾರ್ಯಕರ್ತ
