ಗೃಹ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಭಾರತವು ಸೈಬರ್ ವಂಚನೆಯಿಂದ ಸುಮಾರು ₹11,333 ಕೋಟಿ ಕಳೆದುಕೊಂಡಿದೆ.
ಸ್ಟಾಕ್ ಟ್ರೇಡಿಂಗ್ ವಂಚನೆಗಳು ₹4,636 ಕೋಟಿ ನಷ್ಟ ಉಂಟುಮಾಡಿ ಅತಿದೊಡ್ಡ ಪಾಲನ್ನು ಹೊಂದಿದ್ದರೆ,ಹೂಡಿಕೆ ಆಧಾರಿತ ವಂಚನೆಗಳು ₹3,216 ಕೋಟಿ ನಷ್ಟಕ್ಕೆ ಕಾರಣವಾಗಿವೆ.
‘ಡಿಜಿಟಲ್ ಬಂಧನ’ ವಂಚನೆಗೆ ಸಂಬಂಧಿಸಿದಂತೆ 63,000ಕ್ಕೂ ಹೆಚ್ಚು ದೂರುಗಳು ಬಂದಿದ್ದು, ₹1,616 ಕೋಟಿ ನಷ್ಟವಾಗಿದೆ.