ಗದಗ: ಆಗಸ್ಟ್ 24 ರಂದು ಗದಗದಲ್ಲಿ ಜಿಲ್ಲಾ ದ್ವಿತೀಯ ಕದಳಿ ಮಹಿಳಾ ಸಮ್ಮೇಳನ ಜರುಗಲಿದೆ ಎಂದು ಜಿಲ್ಲಾಧ್ಯಕ್ಷೆ ಸುಧಾ ಹುಚ್ಚಣ್ಣವರ ತಿಳಿಸಿದರು. ಬುಧವಾರ ಗದಗನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಈ ಕುರಿತು ಮಾತನಾಡಿದರು.
ಸಮ್ಮೇಳನದ ಅಂಗವಾಗಿ ಬೆಳಿಗ್ಗೆ ರಾಷ್ಟ್ರ ಧ್ವಜಾರೋಹಣವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ನೆರವೇರಿಸಲಿದ್ದು, ಪರಿಷತ್ ಧ್ವಜಾರೋಹಣವನ್ನು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ ಅವರು ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ಶರಣ ಚಿಂತಕರು ಕೆ.ಎಚ್. ಬೇಲೂರ, ಮಾಜಿ ಜಿಲ್ಲಾಧ್ಯಕ್ಷರು ಡಾ. ಶಿವಪ್ಪ ಕುರಿ ಹಾಗೂ ಡಾ. ಶರಣು ಗೋಗೇರಿ, ಶರಣ ಚಿಂತಕಿ ಲಲಿತಾ ಕೆರಿಮನಿ (ಲಕ್ಷೇಶ್ವರ), ಡಾ. ಎಸ್.ಸಿ. ಚವಡಿ (ಮುಳಗುಂದ) ಸೇರಿದಂತೆ ಅನೇಕರು ವಹಿಸಿಕೊಳ್ಳಲಿದ್ದಾರೆ ಎಂದು ಸುಧಾ ಹುಚ್ಚಣ್ಣವರ ವಿವರಿಸಿದರು.
ಈ ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಮ.ನಿ.ಪ್ರ. ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದು, ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ (ಐ.ಎ.ಎಸ್ ನಿವೃತ್ತ) ಡಾ. ಸಿ. ಸೋಮಶೇಖರ ವಹಿಸಲಿದ್ದಾರೆ.
ಸಮ್ಮೇಳನದ ಪ್ರಾಸ್ತಾವಿಕ ಭಾಷಣವನ್ನು ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ಸುಧಾ ಎಸ್. ಹುಚ್ಚಣ್ಣವರ ಮಾಡಲಿದ್ದು, ಸ್ಮರಣ ಸಂಚಿಕೆಯನ್ನು ವಿ.ಪ. ಸದಸ್ಯ ಎಸ್.ವಿ. ಸಂಕನೂರ ಬಿಡುಗಡೆಗೊಳಿಸಲಿದ್ದಾರೆ.
ಈ ವೇಳೆ ಜಿಲ್ಲೆಯ ಏಳು ತಾಲೂಕುಗಳಿಂದ ಆಯ್ಕೆಯಾದ ಮಹಿಳೆಯರಿಗೆ “ಶಿವಶರಣೆ ಮುಕ್ತಾಯಕ್ಕ ಪ್ರಶಸ್ತಿ” ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.
ಚಿಂತನಾಗೋಷ್ಠಿ ಭಾಗ – 1
ಚಿಂತನಾಗೋಷ್ಠಿಯ ಮೊದಲ ಅಧಿವೇಶನದಲ್ಲಿ ಪೂಜ್ಯ ಶಿವಶರಣೆ ಡಾ. ನೀಲಮ್ಮ ತಾಯಿ ಸಾನಿಧ್ಯ ವಹಿಸಲಿದ್ದು, ಅಧ್ಯಕ್ಷತೆಯನ್ನು ಡಾ. ಅರ್ಜುನ ಗೋಳಸಂಗಿ ವಹಿಸಲಿದ್ದಾರೆ.”ವಚನ ಸಾಹಿತ್ಯಕ್ಕೆ ಗದಗ ಜಿಲ್ಲೆಯ ಮಠಮಾನ್ಯಗಳ ಕೊಡುಗೆ” ಕುರಿತು ಸಿದ್ದು ಯಾಪಲಪರವಿ ಉಪನ್ಯಾಸ ನೀಡಲಿದ್ದಾರೆ.”12ನೇ ಶತಮಾನದ ಆಲಕ್ಷಿತ ವಚನಕಾರ್ತಿಯರು” ಎಂಬ ವಿಷಯದ ಕುರಿತು ಡಾ. ವಿಜಯಲಕ್ಷ್ಮಿ ಗೇಟಿಯವರು ಮಾತನಾಡಲಿದ್ದಾರೆ.
ಚಿಂತನಾಗೋಷ್ಠಿ ಭಾಗ – 2
ಮತ್ತೊಂದು ಅಧಿವೇಶನದಲ್ಲಿ ಅಧ್ಯಕ್ಷತೆಯನ್ನು ಪ್ರೋ. ಸೋಮರೆಡ್ಡಿ ಬಸಾಪೂರ ವಹಿಸಲಿದ್ದಾರೆ.ಉಪನ್ಯಾಸಕರಾಗಿ ಸಿದ್ದಣ್ಣ ಜಕಬಾಳ ಭಾಗವಹಿಸಲಿದ್ದು, “ಜಾನಪದ ಸಾಹಿತ್ಯದಲ್ಲಿ ಬಸವೇಶ್ವರರು” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ಸಮಾರೋಪ ಸಮಾರಂಭ
ಸಾಯಂಕಾಲ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಬೈರನಹಟ್ಟಿಯ ಶ್ರೀ ಶಾಂತಲಿಂಗ ಮಹಾಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.ಅಧ್ಯಕ್ಷತೆಯನ್ನು ಮಾಜಿ ಶಾಸಕ ಡಿ.ಆರ್. ಪಾಟೀಲ ವಹಿಸಲಿದ್ದು, ಸಮಾರೋಪ ನುಡಿಗಳನ್ನು ಸುಶೀಲ ಸೋಮಶೇಖರ ನೀಡಲಿದ್ದಾರೆ.
ಇತಿಹಾಸದ ನೆನಪು
1919ರಲ್ಲಿ ಲಕ್ಷ್ಮೇಶ್ವರದಲ್ಲಿ ಮೊದಲ ಕದಳಿ ಮಹಿಳಾ ಸಮ್ಮೇಳನ ನಡೆದಿತ್ತು. ಶತಮಾನಕ್ಕಿಂತ ಹೆಚ್ಚು ಕಾಲದ ನಂತರ, 2025ರಲ್ಲಿ ಮತ್ತೊಮ್ಮೆ ಗದಗದಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಶರಣ ಸಾಹಿತ್ಯ ಪರಿಷತ್ತನ್ನು ಸುತ್ತೂರು ಮಠದ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸ್ಥಾಪಿಸಿದ್ದರು. ಶರಣರ ಮೌಲ್ಯಗಳನ್ನು ಸಮಾಜಕ್ಕೆ ಬಿತ್ತರಿಸಿ ಸಮಾಜ ಸುಧಾರಣೆಯ ದಾರಿಯಲ್ಲಿ ಸಾಗಿಸಲು ಈ ಪರಿಷತ್ತು ಅಸ್ತಿತ್ವಕ್ಕೆ ಬಂದಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕೆ.ಎ. ಬಳಿಗೇರ,ಪ್ರೊ.ಎಸ್.ಆರ್.ಬಸಾಪೂರ, ಸೀತಾ ಬಸಾಪೂರ, ಸುಖನ್ಯ ಸಾಲಿ, ಪ್ರತಿಭಾ ಹೊಸಮನಿ, ಸುಲೋಚನಾ ಐಹೋಳೆ, ಅಶ್ವಿನಿ ಅಂಕಲಕೋಟಿ, ಎಸ್.ಎಂ. ಮರಿಗೌಡ್ರ, ಶೇಖಣ್ಣ ಕವಳಿಕಾಯಿ, ಪ್ರಕಾಶ ಅಸುಂಡಿ, ಪ್ರೇಮಾ ಮೇಟಿ, ಐ.ಬಿ. ಬೆನಕೋಪ್ಪ, ಎಂ.ಕೆ. ಲಮಾಣಿ, ಅಶೋಕ ಹಾದಿ, ಬೂದಪ್ಪ ಅಂಗಡಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.