ಗದಗ : ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ, ನೆಹರು ಯುವ ಕೇಂದ್ರ, ಗದಗ ಯುವ ಸಂಘಗಳ ಒಕ್ಕೂಟ, ಗದಗ, ಲಾಯನ್ಸ್ ಶಿಕ್ಷಣ ಸಂಸ್ಥೆ, ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ೨೦೨೪-೨೫ ನೇ ಸಾಲಿನ ಜಿಲ್ಲಾ ಮಟ್ಟದ ಯುವ ಜನೋತ್ಸವವನ್ನು ದಿ : ೦೪/೧೨/೨೦೨೪ ರ ಬುಧವಾರ ಬೆಳಿಗ್ಗೆ ೧೦.೦೦ ಗಂಟೆಗೆ ಲಾಯನ್ಸ್ ಶಾಲೆ ಆವರಣ, ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯ, ಮುಂಡರಗಿ ರಸ್ತೆ, ಗದಗದಲ್ಲಿ ಜರುಗಿಸಲು ನಿರ್ಧರಿಸಲಾಗಿದೆ.
ಉತ್ಸವದಲ್ಲಿ ಘನ ಉಪಸ್ಥಿತಿಯನ್ನು ಶ್ರೀ. ಬಸವರಾಜ ಹೊರಟ್ಟಿ, ಸನ್ಮಾನ್ಯ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು, ಕರ್ನಾಟಕ ಸರಕಾರ, ಬೆಂಗಳೂರು ಇವರು ವಹಿಸಿಕೊಳ್ಳುತ್ತಾರೆ. ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರ ಖಾತೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಡಾ. ಎಚ್. ಕೆ. ಪಾಟೀಲರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ. ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳು, ಹಾಗೂ ಸಂಸದರು ಹಾವೇರಿ, ಶ್ರೀ ಸಲೀಂ ಅಹ್ಮದ್, ಸರ್ಕಾರಿ ಮುಖ್ಯ ಸಚೇತರು ಹಾಗೂ ಶಾಸಕರು ವಿಧಾನ ಪರಿಷತ್ತು, ಶ್ರೀ. ಜಿ. ಎಸ್. ಪಾಟೀಲ, ಅಧ್ಯಕ್ಷರು, ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು, ಹಾಗೂ ಶಾಸಕರು ರೋಣ, ಶ್ರೀ. ಪಿ. ಸಿ. ಗದ್ದಿಗೌಡರ, ಸಂಸದರು ಬಾಗಲಕೋಟೆ, ಶ್ರೀ. ಎಸ್. ವ್ಹಿ. ಸಂಕನೂರ, ಶಾಸಕರು ವಿಧಾನ ಪರಿಷತ್ತು, ಶ್ರೀ ಪ್ರದೀಪ ಶೆಟ್ಟರ, ಶಾಸಕರು ವಿಧಾನ ಪರಿಷತ್ತು,ಶ್ರೀ. ಸಿ. ಸಿ. ಪಾಟೀಲ, ಶಾಸಕರು ನರಗುಂದ, ಡಾ. ಚಂದ್ರು ಲಮಾಣಿ, ಶಾಸಕರು ಶಿರಹಟ್ಟಿ ವಹಿಸಿಕೊಳ್ಳಲಿದ್ದಾರೆ.
ಶ್ರೀ ಅಕ್ಬರಸಾಬ ಬಬರ್ಜಿ, ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಗದಗ ಬೇಟಗೇರಿ, ಶ್ರೀ. ರಂದೀಪ್ ಡಿ, ಕಾರ್ಯದರ್ಶಿಗಳು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು, ಶ್ರೀ ರಮಣದೀಪ್ ಚೌಧರಿ, ಕಾರ್ಯದರ್ಶಿಗಳು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು,ಶ್ರೀ ಚೇತನ್ ಆರ್. ಆಯುಕ್ತರು ಬೆಂಗಳೂರು, ಗೋವಿಂದರೆಡ್ಡಿ, ಮಾನ್ಯ ಜಿಲ್ಲಾಧಿಕಾರಿಗಳು ಗದಗ, ಭರತ್ ಎಸ್.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗದಗ, ಬಿ. ಎಸ್. ನೇಮಗೌಡ ಮಾನ್ಯ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಗದಗ, ಹಾಗೂ ವಿಶೇಷ ಆಹ್ವಾನಿತರಾಗಿ ಡಾ. ಎಸ್. ಬಾಲಾಜಿ ರಾಜಾಧ್ಯಕ್ಷರು, ಬೆಂಗಳೂರು, ಶ್ರೀ. ಆನಂದ ಪೋತ್ನಿಸ್ ಅಧ್ಯಕ್ಷರು ಲಾಯನ್ಸ್ ಶಿಕ್ಷಣ ಸಂಸ್ಥೆ, ಗದಗ, ಶ್ರೀ. ರವಿಕಾಂತ ಅಂಗಡಿ, ಜಿಲ್ಲಾಧ್ಯಕ್ಷರು ಯುವ ಸಂಘಗಳ ಒಕ್ಕೂಟ ಗದಗ ಇವರುಗಳು ಉಪಸ್ಥಿತರಿರುತ್ತಾರೆ.
ಅಂದು ಜರುಗುವ ಯುವಜನೋತ್ಸವದಲ್ಲಿ ಸಾಂಸ್ಕೃತಿಕ, ಜೀವನ ಕೌಶಲ್ಯ, ಯುವಕೃತಿ ಮುಂತಾದ ಮನರಂಜನಾತ್ಮಕ ಹಾಗೆಯೇ ಸೃಜನಾತ್ಮಕ ಪ್ರತಿಭೆಯನ್ನು ಹೊರಸೂಸುವ ಸ್ಪರ್ಧೆಗಳು ಜರುಗಲಿವೆ. ಆಸಕ್ತರು ಆಗಮಿಸಿ ಶೋಭೆ ತರಬೇಕಾಗಿ ಸ್ಟೂಡೆಂಟ್ಸ್ ಎಜುಕೇಶನ್ ಸೊಸೈಟಿಯ ಚೇರಮನ್ನರಾದ ಪ್ರೊ. ರಾಜೇಶ ಕುಲಕರ್ಣಿ, ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ಉಡುಪಿ ದೇಶಪಾಂಡೆ. ಪ್ರೊ. ಸೈಯದ್ ಮತೀನ್ ಮುಲ್ಲಾ, ಪ್ರೊ. ರಾಹುಲ್ ಒಡೆಯರ್, ಪ್ರಾಚಾರ್ಯರಾದ ಪ್ರೊ. ಪ್ರೇಮಾನಂದ ರೋಣದ, ಆಡಳಿತಾಧಿಕಾರಿಗಳಾದ ಶ್ರೀ. ಎಮ್. ಸಿ. ಹಿರೇಮಠ ಹಾಗೂ ಕಾಲೇಜಿನ ಬೋಧಕ – ಬೋಧಕೇತರ ಸಿಬ್ಬಂದಿಯವರು ವಿನಂತಿಸಿಕೊಂಡಿದ್ದಾರೆ.