ಮುಂಡರಗಿ: ಕರ್ನಾಟಕ ಸರ್ಕಾರದ ಕಂದಾಯ ಅದಾಲತ್ ನ ಸಾಮಾಜಿಕ ಭದ್ರತೆಯಡಿ ಸರ್ಕಾರದ ವಿವಿಧ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಆದೇಶ ಪ್ರತಿಗಳನ್ನ ವಿತರಣೆ ಮಾಡಲಾಯಿತು.
ಶಿರಹಟ್ಟಿ ಕ್ಷೇತ್ರದ ಶಾಸಕರಾದ ಡಾ.ಚಂದ್ರು ಲಮಾಣಿ ಅನುಪಸ್ಥಿತಿಯಲ್ಲಿ ಸ್ಥಳಿಯ ವಿವಿಧ ಮುಖಂಡರ ನೇತೃತ್ವದಲ್ಲಿ ಫಲಾನುಭವಿಗಳಿಗೆ ಆದೇಶ ಪ್ರತಿಗಳನ್ನ ವಿತರಿಸಲಾಯಿತು.
ಸಂಧ್ಯಾಸುರಕ್ಷಾ,ವೃದ್ಧಾಪ್ಯ ವೇತನ,ವಿಧವಾ ವೇತನ ಹಾಗೂ ಅಂಗವಿಕಲ ಸೇರಿದಂತೆ ಅನೇಕ ಯೋಜನೆಗಳ ಪ್ರಮಾಣಪತ್ರಗಳನ್ನ 40 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮುಂಡರಗಿ ತಹಶೀಲ್ದಾರರಾದ ಯರ್ರಿಸ್ವಾಮಿ ಬಳ್ಳಾರಿ ಹಾಗೂ ತೋಟಗಾರಿಕೆ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಎಲ್ಲ ಅಧಿಕಾರಿವರ್ಗದವರು ಫಲಾನುಭವಿಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮುಂಡರಗಿ ಮಂಡಲ ಬಿಜೆಪಿ ಅಧ್ಯಕ್ಷರಾದ ಹೇಮಗಿರೀಶ ಹಾವಿನಾಳ, ಶಾಸಕರ ಆಪ್ತ ಸಹಾಯಕರಾದ ರವಿ ಲಮಾಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು