ಗದಗ: ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಭಾರತೀಯ ರಿಸರ್ಜ ಬ್ಯಾಂಕ್ ವತಿಯಿಂದ ಶ್ರೀ ವೆಂಕಟರಮಣ ಎ.ಜಿ.ಎಂ. ಆರ್.ಬಿ.ಐ. ಬೆಂಗಳೂರು ಇವರು ದೃಷ್ಟಿವಿಕಲಾಂಗ ವ್ಯಕ್ತಿಗಳಿಗೆ ಬ್ರೈಲ್ ಲಿಪಿ ಪುಸ್ತಕ ಹಾಗೂ ಬ್ಯಾಗ ವಿತರಣೆ ಮಾಡಿ ಬ್ಯಾಂಕಿನ ಎಲ್ಲ ಸೌಲಭ್ಯಗಳನ್ನು ತಿಳಿಸಿ ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳ ಲಾಭ ಪಡೆಯಲು ತಿಳಿಸಿದರು.
ದೃಷ್ಟಿವಿಕಲಾಂಗ ವ್ಯಕ್ತಿಗಳಿಗೆ ಬ್ಯಾಂಕಿನ ಜಿಲ್ಲಾ ಲೀಡ್ ಬ್ಯಾಂಕ ಮ್ಯಾನೇಜರ್ ಆಗಿರುವ ಶ್ರೀ ಸಂತೋಷ ಎಂ. ವಿವಿಧ ಸೌಲಭ್ಯಗಳನ್ನು ಮನಮುಟ್ಟುವಂತೆ ತಿಳಿಸಿದರು. ಸಾಮಾನ್ಯ ನಾಗರಿಕರಿಗೆ ಸಿಗುವ ಎಲ್ಲ ಬ್ಯಾಂಕಿನ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ತಾವು ಆರ್ಥಿಕವಾಗಿ ಸಬಲರಾಗಲು ತಿಳಿಸಿದರು. ಇದೇ ಸಂದರ್ಭದಲ್ಲಿ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡಿದರು.

ಆರ್ಥಿಕ ಸಾಕ್ಷರತಾ ಸಲಹೆಗಾರ ಮಲ್ಲಿಕಾರ್ಜುನ ಕುಲಕರ್ಣಿ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನಜ್ಯೋತಿ ಭೀಮಾ ಯೋಜನೆ, ಜೀವನ ಸುರಕ್ಷಾ ಭೀಮಾ ಯೋಜನೆ, ಅಟಲ್ ಪೆನ್ಶನ್ ಯೋಜನೆಗಳ ಪ್ರಯೋಜನೆ ಪಡೆಯುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಡಿ.ಡಿ.ಎಂ ಶ್ರೀ ಕೀರ್ತಿ ಮಹಾದೇವನ, ಹೇಮಗಿರಿ ಶಾಸ್ತ್ರೀಗಳು, ಎಸ್.ಬಿ.ಐ.ನ ವಿಶಾಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.