ಗದಗ, ಮೇ 27: ಜಿಲ್ಲೆಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗದಗ ವತಿಯಿಂದ ಮೇ 30, 2025 ರಂದು ನೇರ ಸಂದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಂದರ್ಶನವು ಜಿಲ್ಲಾ ಆಡಳಿತ ಭವನ, ಗದಗದ ರೂಮ್ ನಂ. A-215 ರಲ್ಲಿ, ಶುಕ್ರವಾರ ಬೆಳಿಗ್ಗೆ 10:00 ಗಂಟೆಗೆ ಪ್ರಾರಂಭವಾಗಲಿದೆ.
ಈ ನೇರ ಸಂದರ್ಶನದಲ್ಲಿ ದೆಸಾಯಿ ಆಟೋಮೊಟಿವ್ ಪ್ರೈವೆಟ್ ಲಿಮಿಟೆಡ್ (ಗದಗ) ಮತ್ತು ಜೆ.ಕೆ. ಟೈರ್ಸ್ & ಇಂಡಸ್ಟ್ರೀಸ್ ಲಿಮಿಟೆಡ್ (ಮೈಸೂರು) ಎಂಬ ಎರಡು ಪ್ರಮುಖ ಕಂಪನಿಗಳು ಭಾಗವಹಿಸಲಿದ್ದು, ಸ್ಥಳೀಯ ಮತ್ತು ಹೊರಜಿಲ್ಲೆಯ ಉದ್ಯೋಗಾರ್ಥಿಗಳಿಗೆ ಕೆಲಸದ ಅವಕಾಶ ಕಲ್ಪಿಸಲಾಗುತ್ತಿದೆ.
ದೆಸಾಯಿ ಆಟೋಮೊಟಿವ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯಲ್ಲಿ ಸೆಲ್ಸ್ ಎಕ್ಸಿಕ್ಯೂಟಿವ್ ಮತ್ತು ಸರ್ವೀಸ್ ವಿಭಾಗಗಳಲ್ಲಿ ಹುದ್ದೆಗಳು ಖಾಲಿಯಾಗಿದ್ದು, ಅಭ್ಯರ್ಥಿಗಳು ಪಿಯುಸಿ, ಐಟಿಐ, ಡಿಪ್ಲೊಮಾ ಅಥವಾ ಯಾವುದೇ ಪದವಿ ಪಡೆದವರಾಗಿರಬಹುದು. ವಯೋಮಿತಿ 21 ರಿಂದ 30 ವರ್ಷದೊಳಗಿನ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಕೆಲಸದ ಸ್ಥಳಗಳು ಗದಗ, ಗಜೇಂದ್ರಗಡ, ರೋಣ ಹಾಗೂ ಲಕ್ಷೇಶ್ವರಗಳಲ್ಲಿ ಇರುತ್ತವೆ.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಇನ್ನೊಂದು ಕಡೆ, ಜೆ.ಕೆ. ಟೈರ್ಸ್ & ಇಂಡಸ್ಟ್ರೀಸ್ ಲಿಮಿಟೆಡ್, ಮೈಸೂರು ಸಂಸ್ಥೆಯಲ್ಲಿ ನ್ಯಾಪ್ಸ್ ತರಬೇತಿ ಹುದ್ದೆಗಳು ಲಭ್ಯವಿದ್ದು, ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿದವರು ಆಗಿರಬೇಕು. ಈ ಹುದ್ದೆಗಳಿಗೆ ವಯೋಮಿತಿ 18 ರಿಂದ 34 ವರ್ಷದೊಳಗಿನ ಪುರುಷ ಅಭ್ಯರ್ಥಿಗಳು ಮಾತ್ರ ಅನ್ವಯಿಸಬಹುದು. ಈ ಕಂಪನಿಯಲ್ಲಿ ಕೆಲಸ ಮಾಡುವ ಸ್ಥಳ ಮೈಸೂರು ಆಗಿರಲಿದೆ.
ಅಭ್ಯರ್ಥಿಗಳು ಹಾಜರಾಗಬೇಕಾದ ದಾಖಲೆಗಳು:
ವಿದ್ಯಾರ್ಹತೆ ಪ್ರಮಾಣಪತ್ರಗಳ ಝೆರಾಕ್ಸ್ ಪ್ರತಿಗಳು
2 ಪ್ರತಿಗಳ ಬಯೋಡೇಟಾ (ರೆಸ್ಯೂಮೆ)

ಆಧಾರ್ ಕಾರ್ಡ್ ಝೆರಾಕ್ಸ್ ಪ್ರತಿಗಳು
ಗಮನಿಸಿ: ನೇರ ಸಂದರ್ಶನದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಅಭ್ಯರ್ಥಿಗೆ ಅದೇ ದಿನದಂದು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ದೂರವಾಣಿ ಸಂಖ್ಯೆಗಳು 6363330688 ಅಥವಾ 08372-220609 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ್ ಪಿ.ಎನ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ಯುವಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸರಳ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ ಲಭಿಸಬಹುದಾದ ಈ ಸಂದರ್ಶನ ಕಾರ್ಯಕ್ರಮವು, ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಒಂದು ದಾರಿ ಒದಗಿಸಲಿದೆ.
