ಗದಗ: ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಗದಗ ವತಿಯಿಂದ ನೇರ ಸಂದರ್ಶನವಿದ್ದು ಜನೆವರಿ 29 ರಂದು ಬೆಳೆಗ್ಗೆ 9-30 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ರೂಮ ನಂ 215 ಎರಡನೇ ಮಹಡಿ ಜಿಲ್ಲಾಡಳಿತ ಭವನ ಹುಬ್ಬಳ್ಳಿ ರೋಡ ಗದಗ. ಇಲ್ಲಿ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ.
ಸದರಿ ನೇರ ಸಂರ್ದಶನದಲ್ಲಿ ಎಎಚ್ ಪಿ ಅಪೇರಲ್ ಪ್ರೈವೇಟ್ ಲಿಮಿಟೆಡ್ , ಹಾಸನ ಈ ಕಂಪನಿ ಭಾಗವಹಿಸಲಿದೆ.
* ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ, ಪಿ,ಯು.ಸಿ, ಐಟಿಐ, ಡಿಪ್ಲೋಮೊ ಮತ್ತು ಪದವಿ.
* ಹುದ್ದೆ : ಆಪರೇಟರ, ಹೇಲ್ಪರ್, ಸೂಪರವೈಜರ್.
* ವಯಸ್ಸು : 18 ರಿಂದ 45.
* ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದು.
* ಮಹಿಳಾ ಅಭ್ಯರ್ಥಿಗಳಿಗೆ ಟೈಲರಿಂಗ್ ಹುದ್ದೆಗಳಿಗೆ ಮಾತ್ರ ಅವಕಾಶವಿರುತ್ತದೆ.

ನೇರ ಸಂರ್ದಶನದಲ್ಲಿ ಪಾಲ್ಗೊಳುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, 2 ರೆಸ್ಯೂಮೆ (ಬಯೋಡಾಟಾ) ಪ್ರತಿಗಳು, ಮತ್ತು ಆಧಾರ ಕಾರ್ಡ್ ಝೆರಾಕ್ಸ್ನೊಂದಿಗೆ ಭಾಗವಹಿಸಬಹುದು. ನೇರ ಸಂರ್ದಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೊಂದಣಿ ಕಡ್ಡಾಯವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ, 08372220609, 6363330688, 9901230339, 7022261812. ಕ್ಕೆ ಸಂಪರ್ಕಿಸಲು ಕೋರಲಾಗಿದೆಯೆಂದು ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ ಪಿ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇರ ಸಂರ್ದಶನದಲ್ಲಿ
ಭಾಗವಹಿಸುವ ಅಭ್ಯರ್ಥಿಗಳು ನೋಂದಣಿಯನ್ನು ನೇರ ಸಂರ್ದಶನದ ದಿನದಂದೇ ಮಾಡಿಸಬೇಕಾಗಿರುತ್ತದೆ.