ಗದಗ: ಜೂನ 24: 2025-26 ನೇ ಸಾಲಿಗೆ ಪಿಎಂ- ಎ.ಭಿ.ಎಚ್.ಐ.ಎಮ್ ಯೋಜನೆಯಲ್ಲಿ ಖಾಲಿಇರುವ 13 ಎಮ್.ಬಿ.ಬಿ.ಎಸ್ ವೈದ್ಯಾಧಿಕಾರಿಗಳ ಹುದ್ದೆಗೆ ರೋಸ್ಟರ್ ಹಾಗೂ ಮೇರಿಟ್ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ದಿನಾಂಕ 31-3- 2026 ವರೆಗೆ ನೇರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಪ್ರತಿ ದಿನ ಮಧ್ಯಾಹ್ನ 3:00 ಘಂಟೆಯ ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಗದಗ ಇಲ್ಲಿ ನೇರ ಸಂದರ್ಶನ ಇರುತ್ತದೆ, ರಜಾ ದಿನಗಳನ್ನು ಹೊರತು ಪಡಿಸಿ.
ಸದರಿ ನೇಮಕಾತಿ ಕುರಿತು ಹೆಚ್ಚಿನ ಮಾಹಿತಿಗಾಗಿ ರಜಾ ದಿನಗಳನ್ನು ಹೊರತು ಪಡಿಸಿ ಕಛೇರಿ ಸಮಯದಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರ ಘಟಕ ಎನ್ ಎಚ್ ಎಮ್ , ರೂಮ್ 101, ಗದಗ ಕಛೇರಿ ಅವಧಿಯಲ್ಲಿ ಪಡೆಯಬಹುದು. ಹಾಗೂ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಎಂದು ಉಪಾಧ್ಯಕ್ಷರು ಆಯ್ಕೆ ಸಮಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಗದಗ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.