ಲಕ್ಷ್ಮೇಶ್ವರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗ್ರಾಮಗಳಲ್ಲಿ ಸಿಸಿ ರಸ್ತೆ, ಅಂಗನವಾಡಿ, ಶಾಲಾ ಕಟ್ಟಡಗಳು, ಶಾಲಾ ಕಂಪೌಂಡ್, ಸಿಡಿ ನಿರ್ಮಾಣದಂತಹ ಕಾಮಗಾರಿಗಳ ನಿರ್ಮಾಣದಿಂದ ಗ್ರಾಮಗಳಲ್ಲಿ ಅಭಿವೃದ್ಧಿಯಾಗಿದೆ ಎಂದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ತಿಳಿಸಿದರು.
ತಾಲೂಕಿನ ಸೂರಣಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುವರ್ಣಗಿರಿ ಗ್ರಾಮದಲ್ಲಿ ಜರುಗಿದ ಗ್ರಾಮಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ವರದಿ : ಪರಮೇಶ ಎಸ್ ಲಮಾಣಿ
ತೆರಿಗೆ ಪಾವತಿಗೆ ವಿನಂತಿ:
ಗ್ರಾಮದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ನರೇಗಾ ಹಾಗೂ ವಿವಿಧ ಯೋಜನೆಗಳ ಅನುದಾನಗಳ ಬಳಕೆಯ ಜೊತೆಗೆ ಜನರು ಸೂಕ್ತ ಸಮಯದಲ್ಲಿ ತೆರಿಗೆ ಪಾವತಿ ಮಾಡಬೇಕು ಸುವರ್ಣಗಿರಿ ಗ್ರಾಮದಲ್ಲಿ ಏಳು ಲಕ್ಷ ತೆರಿಗೆ ಪಾವತಿಯಾಗಬೇಕಾಗಿದೆ. ಈ ತೆರಿಗೆಯ ಹಣದಿಂದ ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ದೀಪಗಳ ರಿಪೇರಿಗಳಿಗೆ ಅನುಕೂಲವಾಗುತ್ತದೆ. ಕೂಡಲೇ ಸಾರ್ವಜನಿಕರು ತೆರಿಗೆ ಪಾವತಿಸಿಬೇಕೆಂದು ಸಾರ್ವಜನಿಕರಲ್ಲಿ ವಿನಂತಿಸಿದರು.
ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಶಂಕ್ರಪ್ಪ ಶಿರನಹಳ್ಳಿ, ಗ್ರಾಪಂ ಸದಸ್ಯರಾದ, ತುಕಪ್ಪ ಪೂಜಾರ್, ಮಲ್ಕಜ್ಜ ನಾಗಣ್ಣನವರ್, ಪಿಡಿಒ ಎಂ ಜಿ ರೋಣದ್, ಕಾರ್ಯದರ್ಶಿ, ಎಸ್ಎಫ್ ಹಳ್ಳಿಯಾಳ, ಟಿ ಐ ಇ ಸಿ ಮಂಜುನಾಥ ಸ್ವಾಮಿ ಹೆಚ್ ಎಂ, ತಾಲೂಕು ಮಟ್ಟದ ಅಧಿಕಾರಿಗಳು, ಎನ್ ಆರ್ ಎಲ್ ಎಮ್ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತರು,ಡಿ ಇ ಓ,ಗ್ರಾಮ ಪಂಚಾಯತ್ ಸಿಬ್ಬಂದಿ ಸಾರ್ವಜನಿಕರು ಉಪಸ್ಥಿತರಿದ್ದರು.
