Home » News » ತಹಶಿಲ್ದಾರರಿಂದ ಒಕ್ಕಲೆಬ್ಬಿಸುವ ಕೆಲಸ:ಜಮೀನುಗಳನ್ನು ಸಕ್ರಮಗೊಳಿಸಿ ಹಕ್ಕು ನೀಡುವಂತೆ ಒತ್ತಾಯ

ತಹಶಿಲ್ದಾರರಿಂದ ಒಕ್ಕಲೆಬ್ಬಿಸುವ ಕೆಲಸ:ಜಮೀನುಗಳನ್ನು ಸಕ್ರಮಗೊಳಿಸಿ ಹಕ್ಕು ನೀಡುವಂತೆ ಒತ್ತಾಯ

by CityXPress
0 comments

ಲಕ್ಷ್ಮೇಶ್ವರ: ತಾಲೂಕಿನ ಯಲ್ಲಾಪೂರ ತಾಂಡಾದ ಅತೀ ಕಡುಬಡವರಾದ ಲಂಬಾಣಿ ಸಮಾಜd 1941-42ನೇ ಸಾಲಿನ ಗುಡಗೇರಿ ಸಂಸ್ಥಾನದ ಕಾಲದಿಂದಲೂ ಸಾಗುವಳಿ, ಉಳಿಮೆ ಮಾಡಿಕೊಂಡು ಬಂದಿರುವ ಜಮೀನುಗಳನ್ನು ಸಕ್ರಮಗೊಳಿಸಿ ಮಾಲೀಕತ್ವದ ಹಕ್ಕನ್ನು ನೀಡಬೇಕೆಂದು ವಕೀಲ ಹಾಗೂ ಕರ್ನಾಟಕ ಪ್ರದೇಶ ಲಂಬಾಣಿ ಬಂಜಾರ ಶ್ರೀ ಸೇವಾಲಾಲ ಕಲ್ಯಾಣ ಸಂಘದ ಜಿಲ್ಲಾ ಅಧ್ಯಕ್ಷ ರವಿಕಾಂತ ಅಂಗಡಿ ಮತ್ತು ತಾಲೂಕ ಅಧ್ಯಕ್ಷ ದೀಪಕ ಲಮಾಣಿ ಆಗ್ರಹಿಸಿದರು.

ಲಕ್ಷ್ಮೇಶ್ವರ ಸುದ್ದಿ:ಪರಮೇಶ ಎಸ್ ಲಮಾಣಿ.

ತಹಶಿಲ್ದಾರಗೆ ಮನವಿ ನೀಡಿ ಮಾತನಾಡಿದ ಅವರು,ಕರ್ನಾಟಕ ರಾಜ್ಯದಲ್ಲಿ ಲಂಬಾಣಿಗಳು ಎಂದು ಕರೆಸಿಕೊಳ್ಳುವ ನಾವುಗಳು ಸರಿ ಸುಮಾರು 1800 ವರ್ಷಗಳ ಇತಿಹಾಸ ಹೊಂದಿದ್ದು,ಗುಡಿಸಲು ಕಟ್ಟಿಕೊಂಡು ಸಾಮಾಜಿಕ ಮುಖ್ಯ ವಾಹಿನಿಯಿಂದ ದೂರವಾಗಿ ತಾಂಡಾ ಹಟ್ಟಿಗಳಲ್ಲಿ ಜೀವಿಸುತ್ತಿರುವುದನ್ನು ಈಗಲೂ ನೋಡಬಹುದಾಗಿದೆ.

ಅದರಂತೆ ಲಕ್ಷೇಶ್ವರ ತಾಲೂಕಿನ ವ್ಯಾಪ್ತಿಗೆ ಒಳಪಡುವ ಯಲ್ಲಾಪೂರ ತಾಂಡಾದ ಅತೀ ಕಡುಬಡವರು,ಯಾವುದೇ ಮೂಲಸೌಲಭ್ಯಗಳಿಲ್ಲದೇ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು  ಜನಾಂಗಕ್ಕೆ ಸೇರಿದ ಬಡ ಜನಾಂಗದವರು,  ಬಾಲೇಹೊಸೂರ ಗ್ರಾಮದ ಸರಹದ್ದಿನಲ್ಲಿನ ಗಾಯರಾಣಾವ ಹುಲ್ಲುಗಾಡಿನ ಗೋಮಾಳ ಗಳಲ್ಲಿನ ರಿ.ಸ.ನಂ. 364 ರಿಂದ 416 ರವರೆಗಿನ ಸರ್ವೆ ನಂಬರಿನಲ್ಲಿ ತಮ್ಮ ಕೃಷಿ ಉಪಜೀವನಕ್ಕಾಗಿ ಸರಿಸಮಾರು 1941-42ನೇ ಸಾಲಿನ ಗುಡಗೇರಿ ಸಂಸ್ಥಾನದ ಕಾಲದಿಂದಲೂ ಸಾಗುವಳಿ, ಉಳಿಮೆ ಮಾಡಿಕೊಂಡು ಬಂದಿರುವ ಜಮೀನುಗಳನ್ನು ಸಕ್ರಮಗೊಳಿಸಿ ಮಾಲೀಕತ್ವದ ಹಕ್ಕನ್ನು ಕೊಟ್ಟು ಅನೇಕ ಶತಮಾನಗಳಿಂದ ಗುಡ್ಡಗಾಡು ಪದೇಶದಲ್ಲಿ ವಾಸವಾಗಿದ್ದುಕೊಂಡು ಸಂಪೂರ್ಣ ಆರಣ್ಯವನ್ನೇ ಅವಲಂಬಿಸಿಕೊಂಡು ಬಂದಿರುತ್ತೇವೆ.

banner

ಆದ್ದರಿಂದ ನಮ್ಮ ಜೀವನೋಪಾಯಕ್ಕೆ ಸದರ ಅರಣ್ಯ ಭೂಮಿಯ ಮೇಲೆಯೇ ಅವಲಂಬಿತರಾಗಿರುತ್ತೇವೆ. ಸದರ ಕೃಷಿ ಭೂಮಿಯಲ್ಲಿ ಸಾಗುವಳಿ ಮಾಡಿ ಅದರಲ್ಲಿ ಬಂದಂತಹ ಫಸಲಿನಿಂದ ನಮ್ಮ ಜೀವನೋಪಾಯವನ್ನು ನಡೆಸುತ್ತಾ ಬಂದಿದ್ದೇವೆ. ಆದ್ದರಿಂದ ಮಾನ್ಯ ಸರ್ವೋಚ್ಚ ನ್ಯಾಯಾಲಯವು ನಮ್ಮಂತಹ ಗುಡ್ಡಗಾಡು ಪ್ರದೇಶ ಮತ್ತು ಅರಣ್ಯವನ್ನು ಅವಲಂಬಿತ ಬುಡಕಟ್ಟು, ಅಲೆಮಾರಿ, ಅರಣ್ಯವಾಸಿ, ಗುಡ್ಡಗಾಡು ಪ್ರದೇಶಗಳಲ್ಲಿ, ಅರಣ್ಯದು ಅವಲಂಬಿತ ಜನಾಂಗಗಳಿಗೆ ಕೃಷಿಯ ಉದ್ದೇಶಕ್ಕಾಗಿ ಸಾಗುವಳಿ ಮಾಡಿದ ಅರಣ್ಯ ಪ್ರದೇಶದ ಆಸ್ತಿ ಹಕ್ಕು ಪತ್ರ ಕೊಡಲು ಆದೇಶಿಸಿದ್ದು ಇದ್ದು, ಅದರಂತೆ ಕರ್ನಾಟಕ ಘನ ಸರಕಾರವು 2022-23ನೇ ಸಾಲಿನಲ್ಲಿ ರಾಜ್ಯದಲ್ಲಿನ ಅರಣ್ಯವಾಸಿ ಹಾಗೂ ಗುಡ್ಡಗಾಡು ಪ್ರದೇಶದಲ್ಲಿನ ಬುಡಕಟ್ಟು ಅರಣ್ಯವಾಸಿ ಜನಾಂಗದವರು ಗಾಯಾಣದ ಮತ್ತು ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕೃಷಿಗಾಗಿ ಸಾಗುವಳಿ ಮಾಡಿ ಜೀವನೋಪಾಯ ಮಾಡುತ್ತಿರುವ ಎಲ್ಲರೂ ತಮ್ಮ ಸಂಪೂರ್ಣ ಮಾಹಿತಿಯೊಂದಿಗೆ ನಮೂನೆ-57 2: 28-03-2023 0 ನಾವು ಸಾಗುವಳಿದಾರರು ಅರ್ಜಿ ಮಾಡಿಕೊಂಡಿದ್ದು ಇದೆ.

ಆದರೆ ನಮಗೆ ಘನ ಸರಕಾರದ ಅದೇಶದ ಅನುಸಾರವಾಗಿ ನಾವು ಸಾಗುವಳಿ ಮಾಡಿರುವ ಜಮೀನುಗಳನ್ನು ಸರ್ವೇಯರ್ ರವರಿಂದ ಅಳತೆ ಮಾಡಿಸಿ,ಜಿಲ್ಲಾಧಿಕಾರಿಗಳ ಮುಖಾಂತರ ಅರಣ್ಯ ಹಕ್ಕು ಸಮೀತಿಯಲ್ಲಿ ನಮ್ಮ ಅರ್ಜಿಗಳನ್ನು ಕಳುಹಿಸದೇ ಅನೇಕ ಶತಮಾನಗಳಿಂದ ಉಳುಮೆ ಮಾಡುತ್ತಿರುವ ನಮಗೆ ಹಕ್ಕುಪತ್ರಗಳನ್ನು ಕೊಟ್ಟು, ನ್ಯಾಯ ದೊರಕಿಸಿಕೊಡದೇ ಯಾವುದೇ ಬಲವಾದ ಕಾರಣಗಳಿಲ್ಲದೇ ಮಾನ್ಯ ಲಕ್ಷೇಶ್ವರ ತಾಲೂಕಾ ದಂಡಾಧಿಕಾರಿಗಳು ನಮ್ಮ ಅರ್ಜಿಗಳನ್ನು ತಿರಸ್ಕರಿಸಿದ್ದೇವೆ ಅಂತಾ ಹೇಳಿದ್ದಾರೆ.

ನಾವು ಸುಮಾರು 84-85 ವರ್ಷಗಳಿಂದ ಸಾಗುವಳಿ ಜಮೀನುಗಳ ಮೇಲೆ ಅವಲಂಬಿತರಾಗಿ ಜೀವನ ಸಾಗಿಸುತ್ತಾ ಬಂದಿದ್ದೇವೆ. ನಮಗಿಂತ ಹಿಂದೆ ಸಾಗುವಳಿ ಮಾಡಿದಂತಹ ಬಾಲೇಹೊಸೂರ ಗ್ರಾಮದ ಸರಹದ್ದಿನಲ್ಲಿಯೇ ಅನೇಕ ಸಾಗುವಳಿದಾರರಿಗೆ ಸಾಗುವಳಿ ಹಕ್ಕುಪತ್ರ ಕೊಟ್ಟಿದ್ದು ಇದೆ. ಅಲ್ಲದೇ ಗದಗ ಜಿಲ್ಲೆಯ ಇತರೆ ತಾಲೂಕು ಗಳಲ್ಲಿಯೂ ಕೂಡಾ ಅನೇಕ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲಾಗಿದೆ. ಆದರೆ ಹತ್ತಾರು ದಶಕಗಳಿಂದ ಸದರ ಭೂಮಿಯ ಮೇಲೆ ಅವಲಂಬಿತರಾದ ನಮಗೆ ಹಕ್ಕು ಪತ್ರ ನೀಡದೇ ಉದ್ದೇಶಪೂರ್ವಕವಾಗಿ ನಮ್ಮನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವುದು ವಿಷಾದನೀಯ ಎಂದರು.

ನಮಗೆ ಸದರ ಸಾಗುವಳಿ ಕೃಷಿ ಜಮೀನು ಬಿಟ್ಟರೆ ಬೇರೆ ಯಾವುದೇ ಜಮೀನು ಆಸ್ತಿ ಇರುವುದಿಲ್ಲ. ನಾವು ಸದರ ಜಮೀನಿನ ಮೇಲೆ ಅವಲಂಬಿತರಾಗಿದ್ದೇವೆ. ನಮಗೆ ಕೃಷಿಯನ್ನು ಹೊರತುಪಡಿಸಿ ಬೇರೆ ಯಾವ ಉದ್ಯೋಗವೂ ಬರುವುದಿಲ್ಲ. ಒಂದು ವೇಳೆ ನಮಗೆ ಸದರ ಜಮೀನಿನಿಂದ ಒಕ್ಕಲೆಬ್ಬಿಸಿ ಸಾಗುವಳಿ ಜಮೀನನ್ನು ಸಕ್ರಮಗೊಳಿಸಿ ನಮಗೆ ಹಕ್ಕು ಪತ್ರವನ್ನು ನೀಡದಿದ್ದರೆ ನಾವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂದರ್ಭದಲ್ಲಿ ಕಿರಣ ಲಮಾಣಿ, ಶೇಖಪ್ಪ ಲಮಾಣಿ ( ಅಕ್ಕಿಗುಂದ ) ಗಣೇಶ ಲಮಾಣಿ, ಸೋಮಣ್ಣ ಲಮಾಣಿ, ಮಹಾದೇವಪ್ಪ , ಚನ್ನಪ್ಪ, ತಿಪ್ಪಣ್ಣ ಲಮಾಣಿ, ಶೇಖಪ್ಪ ಲಮಾಣಿ, ಕೃಷ್ಣ ಲಮಾಣಿ, ಬಾಮಣವ್ವ ಲಮಾಣಿ, ಗಂಗವ್ವ ಲಮಾಣಿ, ಶಾಂತವ್ವ ಲಮಾಣಿ ಮತ್ತಿತರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb