ಮುಂಡರಗಿ: ರಾಜ್ಯದ ಮೂರುಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಬೆನ್ನಲ್ಲೆ, ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ.ಮೋರನಾಳ ನೇತೃತ್ವದಲ್ಲಿ, ಹಲವು ಕಾಂಗ್ರೆಸ್ ಮುಖಂಡರ ಉಪಸ್ಥಿತಿಯಲ್ಲಿ, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಡಿ.ಮೋರನಾಳ, ಮಾತನಾಡಿ, ಉಪ ಚುನಾವಣೆಯಲ್ಲಿ ವಿರೋಧ ಪಕ್ಷದ ಸುಳ್ಳು ಆರೋಪಕೆ ಮತದಾರರು ಸೊಪ್ಪು ಹಾಕಿಲ್ಲ.ಮುಡಾ ಹಗರಣ, ವಕ್ಫ್ ಹಗರಣ, ವಾಲ್ಮೀಕಿ ಹಗರಣ ಎಂದು ವಿರೋಧ ಪಕ್ಷದವರು ಸುಳ್ಳು ಆರೋಪಗಳ ಬೆನ್ನುಹತ್ತಿದರು. ಆದರೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹೇಳಿದರು.
ಈ ವೇಳೆ, ಧ್ರುವಕುಮಾರ ದೊಡ್ಮನಿ. ಜ್ಯೋತಿ ಕುರಿ, ವಿನೋದ್ ವಡ್ಡರ್, ಲಕ್ಷ್ಮಣ್ ತಗಡಿಮನಿ, ದೂದಪೀರ ಕಾತರಕಿ, ಮಂಜುನಾಥ್ ಗೌಡರ್, ದಸಗೀರಸಾಬ್ ಹೊಸಮನಿ, ಲೋಕೇಶ್ ದೊಡ್ಮನಿ, ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.