ಹಾಸನ: ಸದ್ಯ ರಾಜ್ಯ ರಾಜಕೀಯದಲ್ಲಿ ಸಮಾವೇಶಗಳ ಜಿದ್ದಾ ಜಿದ್ದಿ ನಡೆಯುವಂತೆ ಕಾಣಲಿದೆ. ಯಾಕಂದ್ರೆ, ಉಪಚುನಾವಣೆ ಗೆಲವು ಬೆನ್ನಲ್ಲೇ ಉತ್ಸಾಹಗೊಂಡಿರೋ ಕಾಂಗ್ರೆಸ್, ಸಿಎಂ ಸಿದ್ಧರಾಮಯ್ಯರ ಮೂಡಾ ಹಗರಣ ಎತ್ತಿಹಿಡಿಯುತ್ತಿರುವ ರಾಜಕೀಯ ವಿರೋಧಿಗಳಿಗೆ ಟಕ್ಕರ್ ಕೊಡೋಕೆ ಮುಂದಾಗಿತ್ತು.ಆದರೆ ಇದು ಸಿದ್ಧರಾಮಯ್ಯರ ವರ್ಚಸ್ಸಿನ ಸಮಾವೇಶ ಆಗುತ್ತೆ ಅಂತ ಅರಿತ ಅವರದೇ ಪಕ್ಷದ ಸದಸ್ಯರ ಕಾಣದ ಕೈಗಳಿಂದ ಕಾಂಗ್ರೆಸ್ ಪಕ್ಷವಾಗಿ ಬದಲಾಯಿತು.
ಹಾಸನದಲ್ಲಿ ಬೃಹತ್ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ಮಾಡಲಾಯಿತು. ಇದರ ಬೆನ್ನಲ್ಲೇ ಇದೀಗ, ಕಾಂಗ್ರೆಸ್’ಗೆ ಕೌಂಟರ್ ಕೊಡಲು JDS ಮುಂದಾಗಿದೆ. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅಭಿನಂದನಾ ಕಾರ್ಯಕ್ರಮದ ಹೆಸರಿನಲ್ಲಿ ಡಿಸೆಂಬರ್ 15 ರಂದು ಮಂಡ್ಯದಲ್ಲಿ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಚನ್ನಪಟ್ಟಣ ಸೋಲಿನಿಂದ ಕಂಗೆಟ್ಟಿರುವ ಕಾರ್ಯಕರ್ತರನ್ನು ಹುರಿದುಂಬಿಸಲು ಈ ಬೃಹತ್ ಸಮಾವೇಶ ನಡೆಸಲು JDS ಚಿಂತನೆ ನಡೆಸಿದೆ ಎನ್ನಲಾಗಿದೆ.