ಗದಗ, ಮೇ 3:ಗದಗ ಜಿಲ್ಲೆಯ ಹೆಸರಾಂತ ಬಿಪಿನ್ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಈ ವರ್ಷದ ಎಸ್.ಎಸ್.ಎಲ್.ಸಿ (SSLC) ಪರೀಕ್ಷೆಯಲ್ಲಿ ಶ್ಲಾಘನೀಯ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ. ಒಟ್ಟು 33 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಶಾಲೆಗೆ ಒಟ್ಟಾರೆ ಶೇಕಡಾ 91% ಫಲಿತಾಂಶ ದೊರೆತಿದೆ.
ಈ ವಿದ್ಯಾರ್ಥಿಗಳ ಪೈಕಿ ಪ್ರಣವ ಕೆ. ಸೊರಟೂರು ಅತ್ಯುತ್ತಮ ಸಾಧನೆ ಮಾಡಿ 578 ಅಂಕಗಳು (92.48%) ಪಡೆದು ಶಾಲೆಯ ಪ್ರಥಮ ಸ್ಥಾನ ಪಡೆದಿದ್ದಾನೆ. ಇದೇ ರೀತಿಯಾಗಿ, ಶ್ರೀಗಿರಿ ಶ್ರೀಕಾಂತ ಉಮ್ಮಣ್ಣವರ ಅವರು 574 ಅಂಕ (91.84%) ಗಳಿಸಿ ದ್ವಿತೀಯ ಸ್ಥಾನ ಪಡೆದು ಮೆರೆದಿದ್ದಾರೆ. ಮಂಜುನಾಥ ರಮೇಶ ನರಗುಂದ ಅವರು 552 ಅಂಕಗಳು (88.32%) ಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ.
ಇದರೊಂದಿಗೆ, ಶಾಲೆಯ 6 ಮಂದಿ ವಿದ್ಯಾರ್ಥಿಗಳು 85%ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ವಿಶಿಷ್ಟ ಸಾಧನೆ (Distinction) ಪಡೆದಿದ್ದಾರೆ. 20 ವಿದ್ಯಾರ್ಥಿಗಳು 60% ರಿಂದ 84% ನಡುವಿನ ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಲ್ಲದೆ 3 ವಿದ್ಯಾರ್ಥಿಗಳು 50% ರಿಂದ 59% ಅಂಕಗಳೊಂದಿಗೆ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಈ ಸಾಧನೆಗೆ ಪ್ರತಿಕ್ರಿಯಿಸಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಎಸ್.ವಾಯ್. ಚಿಕ್ಕಟ್ಟಿ, ಶಾಲೆಯ ಪ್ರಾಚಾರ್ಯರು ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳಿಗೆ ಹಾರೈಕೆ ಸಲ್ಲಿಸಿದ್ದು, ಅವರ ಈ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಸಾಧನೆಯ ಮೂಲಕ ಶಾಲೆಯ ಶೈಕ್ಷಣಿಕ ಮಟ್ಟ ಹಾಗೂ ಶ್ರದ್ಧೆಯ ಪ್ರತಿಬಿಂಬವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಪಿನ್ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಪ್ರತಿ ವರ್ಷವೂ ಉತ್ತಮ ಶೈಕ್ಷಣಿಕ ಫಲಿತಾಂಶದೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನವನ್ನು ಖಚಿತಪಡಿಸಿಕೊಳ್ಳುತ್ತಿದ್ದು, ಈ ವರ್ಷವೂ ಅದನ್ನು ಮತ್ತೆ ಸಾಬೀತುಪಡಿಸಿದೆ.
