12
ರೋಣ:ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ಸಾಹಸ ಸಿಂಹ ದಿ ಡಾ.ವಿಷ್ಣುವರ್ಧನ್ ಅವರ 15 ನೇಯ ಪುಣ್ಯ ಸ್ಮರಣೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಆಚರಿಸಲಾಯಿತು.
ಅಭಿಮಾನಿಗಳು ಡಾ.ವಿಷ್ಣುವರ್ಧನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಅನ್ನಸಂತರ್ಪಣೆ ಮೂಲಕ ಪುಣ್ಯ ಸ್ಮರಣೆಯನ್ನ ಆಚರಿಸಿದರು.ಗ್ರಾಮದ ಅಲ್ಲಾಸಾಬ ಸೋಟಕನಾಳ, ರಜಬ್ ಮೇಲಿನಮನಿ, ಈಶ್ವರಪ್ಪ ಜೋಗರಡ್ಡಿ, ದಾವಲಸಾಬ ನೇತೃತ್ವದಲ್ಲಿ ಅನ್ನ ಸಂತರ್ಪಣೆ ಜರುಗಿತು.
ಈ ಸಂದರ್ಭದಲ್ಲಿ ರಾಮನಗೌಡ ಅರಹುಣಷಿ, ಕುಬೇರಪ್ಪ ಸೇರಿದಂತೆ ಬೂದಗೇರಿ ಓಣಿಯ ನಿವಾಸಿಗಳು ಹಾಗೂ ಗ್ರಾಮದ ನಿವಾಸಿಗಳು ಪಾಲ್ಗೊಂಡಿದ್ದರು.