ಲಕ್ಷ್ಮೇಶ್ವರ: ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಿರಹಟ್ಟಿ ಇವರ ವತಿಯಿಂದ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ ೨೦೨೫-೨೬ನೇ ಸಾಲಿನ ತಾಲ್ಲೂಕು ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳನ್ನು ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.
ವರದಿ : ಪರಮೇಶ ಎಸ್ ಲಮಾಣಿ
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ನಾಣಕೀ ನಾಯ್ಕ ಅವರು ಉದ್ಘಾಟಿಸಿ, ಮಾತನಾಡಿ ಶಿಕ್ಷಕರ ದೈನಂದಿನ ಪಾಠ ಪ್ರವಚನ ಒತ್ತಡಗಳಿಂದ ಸ್ವಲ್ಪ ಮಟ್ಟಿಗೆ ಒತ್ತಡವನ್ನು ದೂರ ಮಾಡಲು ಸಹ ಪಠ್ಯ ಚಟುವಟಿಕೆ ಸ್ಪರ್ಧೆಗಳು ಉತ್ತಮ ವೇದಿಕೆ ಎಂದರು.
ಕಾರ್ಯಕ್ರಮದ ನೋಡಲ್ ಅಧಿಕಾರಿ, ಪ್ರೌಢ ವಿಭಾಗದ ಇಸಿಓ ರಾಘವೇಂದ್ರ ಜೋಶಿ ಮಾತನಾಡಿ, ಆಶುಭಾಷಣ, ಭಕ್ತಿಗೀತೆ, ಸ್ಥಳದಲ್ಲಿ ಕಲಿಕೋಪಕರಣ ತಯಾರಿಕೆ, ರಸಪ್ರಶ್ನೆ ಸೇರಿದಂತೆ ೭ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ವಿಜೇತರಾದವರು ರಾಜ್ಯಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ, ತಾಲ್ಲೂಕು ಹಾಗೂ ಜಿಲ್ಲೆಗೆ ಕೀರ್ತಿ ತರಬೇಕೆಂದು ತಿಳಿಸಿದರು.
ನಂತರ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಬಿ ಎಮ್ ಯರಗುಪ್ಪಿ ಸ್ವಾಗತಿಸಿದರು, ಎನ್ ಎ ಮುಲ್ಲಾ ವಂದಿಸಿದರು, ಉಮೇಶ ನೇಕಾರ ನಿರೂಪಿಸಿದರು.
ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ನಾಣಕೀ ನಾಯ್ಕ, ಶಾಲಾ ಪ್ರಧಾನ ಗುರುಗಳಾದ ಎಫ್ ಎನ್ ಗೋಣೆಪ್ಪನವರ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಹಾಲನಗೌಡ ಪಾಟೀಲ, ಉಮೇಶ ಡೊಳ್ಳಿನ, ಪುಟ್ಟಪ್ಪ ಲಮಾಣಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಮುಳಗುಂದ, ಕ ರಾ ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ ಎಸ್ ಹರ್ಲಾಪುರ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ನೇಕಾರ, ಕ ರಾ ಸ ನೌ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಅಶೋಕ ಇಚ್ಚಂಗಿ, ಬಿ ಆರ್ ಪಿ ಗಳಾದ ಈಶ್ವರ ಮೆಡ್ಲೇರಿ, ವಾಸು ದೀಪಾಳಿ, ಎಸ್ ಡಿ ಲಮಾಣಿ, ಎಚ್ ಎಮ್ ಗುತ್ತಲ, ಜಿಲ್ಲಾ ಉಪಾಧ್ಯಕ್ಷರಾದ ಎಮ್ ಎಸ್ ಹಿರೇಮಠ, ಎಫ್ ಎಸ್ ತಳವಾರ,
ಸಿ ಆರ್ ಪಿ ಮಿತ್ರರಾದ ಆರ್ ಮಹಾಂತೇಶ, ಎನ್ ಎನ್ ಸಾವಿರಕುರಿ, ಗಿರೀಶ್ ನೇಕಾರ, ನವೀನ್ ಅಂಗಡಿ, ಡಿ ಡಿ ಲಮಾಣಿ, ಜ್ಯೋತಿ ಗಾಯಕವಾಡ, ಕೆ ಪಿ ಕಂಬಳಿ, ಗೀತಾ ಸರವಿ, ಗಾಯತ್ರಿ ಹಳ್ಳದ, ತಿರಕಪ್ಪ ಪೂಜಾರ, ಸತೀಶ್ ಪಶುಪತಿಹಾಳ ಹಾಗೂ ತಾಲ್ಲೂಕು ಶೈಕ್ಷಣಿಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
