Sunday, April 20, 2025
Homeರಾಜ್ಯನಾಳೆ ಸಿಎಂ‌‌ ಸಿದ್ಧರಾಮಯ್ಯ ದಾಖಲೆ ಬಜೆಟ್: ಯಾವ ಸಿಎಂ ಎಷ್ಟು‌ ಸಾಲ?

ನಾಳೆ ಸಿಎಂ‌‌ ಸಿದ್ಧರಾಮಯ್ಯ ದಾಖಲೆ ಬಜೆಟ್: ಯಾವ ಸಿಎಂ ಎಷ್ಟು‌ ಸಾಲ?

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಾಳೆ ತಮ್ಮ ದಾಖಲೆಯ 16 ನೇ ಬಜೆಟ್‌ ಮಂಡನೆಗೆ ರೆಡಿ ಆಗಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಅತಿಹೆಚ್ಚು ಬಜೆಟ್‌ ಮಂಡನೆ ಮಾಡಿದ ಸಿಎಂ ಅನ್ನೋ ದಾಖಲೆಯನ್ನು‌ ಸಿದ್ಧರಾಮಯ್ಯ ತಮ್ಮ ಮುಡಿಗೇರಿಸಿಕೊಳ್ಳಲಿದ್ದಾರೆ.

ಅವರು, ಹಣಕಾಸು ಸಚಿವರಾಗಿದ್ದಾಗ 1995-96 ರಲ್ಲಿ ಮೊದಲ ಮುಂಗಡ ಪತ್ರ ಮಂಡನೆ ಮಾಡಿದ್ದರು. ಮೊದಲ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು, ಕೇವಲ 10,859 ಕೋಟಿ ಗಾತ್ರ ಬಜೆಟ್ ಮಂಡಿಸಿದ್ದರು. ನಾಳೆಯ ಮಂಡನೆ ಮಾಡಲಿರುವ 16 ನೇ ಬಜೆಟ್ 4 ಲಕ್ಷ ಕೋಟಿ ರೂ ದಾಟುವ ನಿರೀಕ್ಷೆ ಇದೆ. ಇನ್ನು ಈ ಬಜೆಟ್‌ನ ಸಾಲದಲ್ಲೂ ದಾಖಲೆ ಸೃಷ್ಟಿಸಲಿದೆ.

೧) ಎಸ್ ಎಂ ಕೃಷ್ಣ – 3,590 ಕೋಟಿ ರೂ

೨) ಎನ್ ಧರ್ಮಸಿಂಗ್ – 15,635 ಕೋಟಿ ರೂ

೩) ಎಚ್ ಡಿ ಕುಮಾರಸ್ವಾಮಿ – 3,545 ಕೋಟಿ ರೂ

೪) ಬಿ ಎಸ್ ಯಡಿಯೂರಪ್ಪ – 25,653 ಕೋಟಿ ರೂ

೫) ಡಿ ವಿ ಸದಾನಂದ ಗೌಡ – 9,464 ಕೋಟಿ ರೂ

೬) ಜಗದೀಶ್ ಶೆಟ್ಟರ್ – 13,464 ಕೋಟಿ ರೂ

೭) ಸಿದ್ದರಾಮಯ್ಯ – 3.75 ಲಕ್ಷ ಕೋಟಿ ರೂ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments