ಬೆಳಗಾವಿ, ಎಪ್ರಿಲ್ 28:ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆ ವೇಳೆ, ಧಾರವಾಡ ಎಎಸ್ಪಿ ನಾರಾಯಣ ಭರಮನಿ ವಿರುದ್ಧ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲೆ ಗರಂ ಆದ ಘಟನೆಯೊಂದು ನಡೆದಿದೆ. ಸಮವಸ್ತ್ರದಲ್ಲಿದ್ದ ಎಎಸ್ಪಿ ಭರಮನಿ ಮೇಲೆ ಸಿಎಂ ಕೈ ಎತ್ತಿದ್ದಾರೆ. ಸದ್ಯ ಸಿಎಂ ಕೋಪಿಸಿಕೊಂಡು ಕೈ ಎತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದ್ದು,ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ, ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಕೂಡಾ ಪ್ರತ್ಯುತ್ತರವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದರು. ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪ್ರತಿಭಟನಾ ಸ್ಥಳದ ಬಳಿ ನುಗ್ಗಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲೆ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಮಾತನಾಡುತ್ತಿದ್ದರು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಇದೇ ವೇಳೆ ಬಿಜೆಪಿ ಪ್ರತಿಭಟನಾ ನಿರತ ಮಹಿಳೆಯರು ಕಾರ್ಯಕ್ರಮದಲ್ಲಿ ಎಂಟ್ರಿ ಕೊಟ್ಟಿದ್ದಕ್ಕೆ, ಭಾಷಣ ಮಾಡುವದನ್ನ ನಿಲ್ಲಿಸಿದ ಸಿಎಂ ಗರಂ ಆಗಿ, ಹೇ ಯಾರು ಇಲ್ಲಿ ಎಸ್ಪಿ, ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಈ ವೇಳೆ, ವೇದಿಕೆ ಪಕ್ಕದಲ್ಲಿದ್ದ, ಧಾರವಾಡ ಎಎಸ್ಪಿ, ನಾರಾಯಣ ಭರಮನಿ ಅವರನ್ನ ವೇದಿಕೆ ಮೇಲೆ ತಮ್ಮ ಬಳಿ ಕರೆದು, ಏನು ಮಾಡ್ತಿದ್ದೀರಿ ನೀವು ಎಂದು, ಕೋಪಿಸಿಗೊಂಡು, ಸಮವಸ್ತ್ರದಲ್ಲಿದ್ದ ಅಧಿಕಾರಿ ಮೇಲೆಯೇ ಕೈ ಎತ್ತೋಕೆ ಮುಂದಾದರು. ತಕ್ಷಣ ಹಿಂದೆ ಸರಿದ ಪೊಲೀಸ್ ಅಧಿಕಾರಿ, ಸಿಎಂ ಅವರಿಗೆ ಉತ್ತರಿಸುತ್ತಾ ನಿಂತರು.
ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿವಿಧ ರಾಜಕೀಯ ಮುಖಂಡರಿಂದ ಪ್ರತಿಕ್ರಿಯೆಗಳನ್ನು ಹಮ್ಮಿಕೊಳ್ಳುತ್ತಿದೆ.

ಘಟನೆಯ ಬಳಿಕ, ಧಾರವಾಡ ಎಎಸ್ಪಿ ಭರಮನಿ ತಾವು ಕೇವಲ ಬಂದೋಬಸ್ತ್ ಕಾಯಕದಲ್ಲಿದ್ದೇ ಭಾಗಿಯಾಗಿದ್ದೆವು ಎಂದು ಸ್ಪಷ್ಟನೆ ನೀಡಿದರೂ, ಸಿಎಂ ಸಿಡಿಮಿಡಿ ಮುಂದುವರಿಸಿದರು.
