Home » News » ಮಕ್ಕಳು ಮನುಕುಲದ ಕ್ರಿಯಾಶೀಲ ವಾರಸುದಾರ: ಕೃಷ್ಣಪ್ಪ ಧರ್ಮರ

ಮಕ್ಕಳು ಮನುಕುಲದ ಕ್ರಿಯಾಶೀಲ ವಾರಸುದಾರ: ಕೃಷ್ಣಪ್ಪ ಧರ್ಮರ

by CityXPress
0 comments

ಗದಗ ( ಲಕ್ಷ್ಮೇಶ್ವರ ): ಮಕ್ಕಳು ಮನುಕುಲದ ಕ್ರಿಯಾಶೀಲ ವಾರಸುದಾರರು ಅವರ ಸರ್ವಾಂಗೀಣ ಪ್ರಗತಿಗಾಗಿ ಸರಕಾರ,ಸಮುದಾಯ,ಶಾಲಾಡಳಿತ,ಪಾಲಕರು,ಶಿಕ್ಷಕರು ಸಮನ್ವಯ ಸಾಧಿಸಿ ಸಮರ್ಪಣಾ ಭಾವದಿಂದ ಶ್ರಮಿಸಬೇಕು ಆ ಕಾರಣಕ್ಕಾಗಿಯೇ ಕರ್ನಾಟಕ ಘನ ಸರ್ಕಾರ ರಾಜ್ಯದಾದ್ಯಂತ ಮಕ್ಕಳ ದಿನಾಚರಣೆಯ ಈ ದಿನದಂದು ವಿಶೇಷವಾಗಿ ಪೋಷಕ ಶಿಕ್ಷಕರ ಮಹಾಸಭೆಯನ್ನು ಸಂಘಟಿಸಿದೆ ” ಎಂದು ಲಕ್ಷ್ಮೇಶ್ವರ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಅಭಿಪ್ರಾಯ ಪಟ್ಟರು.

ವರದಿ : ಪರಮೇಶ ಎಸ್ ಲಮಾಣಿ.

ಅವರು ಸರಕಾರಿ ಪ್ರೌಢಶಾಲೆ ಹುಲ್ಲೂರಿನಲ್ಲಿ ಹಮ್ಮಿಕೊಳ್ಳಲಾದ ಪೋಷಕ ಶಿಕ್ಷಕರ ಮಹಾಸಭೆಯ ಲಕ್ಷ್ಮೇಶ್ವರ ತಾಲೂಕಾ ಮಟ್ಟದ ಸಾಂಕೇತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಕೆ.ವೈ. ಮೇಲಿನಮನಿ “ಹುಲ್ಲೂರಿನ ಗ್ರಾಮ ಪಂಚಾಯಿತಿ, ಎಸ್.ಡಿ.ಎಂ.ಸಿ ಹಾಗೂ ಪಾಲಕರ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆಯನ್ನು ಪೋಷಕ ಶಿಕ್ಷಕರ ಮಹಾಸಭೆ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಗ್ರಾಮದ ಮಕ್ಕಳ ಶಿಕ್ಷಣದ ಪ್ರಗತಿಗೆ ಇಲ್ಲಿನ ಸಮುದಾಯದ ಸಮರ್ಥ ಸಹಭಾಗಿತ್ವ ಮಾದರಿ ಯಾದುದು” ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೌಢಶಾಲಾ ವಿಭಾಗದ ಬಿ.ಆರ್.ಪಿ ಈಶ್ವರ ಮೆಡ್ಲೇರಿ ಮಾತನಾಡಿ “ಪೋಷಕ ಶಿಕ್ಷಕರ ಇಂದಿನ ಮಹಾಸಭೆಯಲ್ಲಿ ಸಂವಿಧಾನ ಪೀಠಿಕೆಯ ಓದು , ಪೋಷಕರಿಗೆ ಮಕ್ಕಳ ಕಲಿಕಾ ಪ್ರಗತಿ ಹಾಗೂ ಹಾಜರಾತಿ ಮಾಹಿತಿ, ಕಲಿಕಾ ಉಪಕ್ರಮಗಳು,ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ,ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಅಭಿನಂದನೆ, ಫೋಷಕರಿಗೆ ಆರ್‌ಟಿಇ ಕಾಯ್ದೆ, ಮಕ್ಕಳ ಹಕ್ಕುಗಳು,ಮಕ್ಕಳ ರಕ್ಷಣಾ ನೀತಿ,ಪೋಸ್ಕೋ ಕಾಯ್ದೆ, ಬಾಲ್ಯವಿವಾಹ ನಿಷೇಧ,ಬಾಲಕಾರ್ಮಿಕ ನಿಷೇಧ ಮುಂತಾದ ವಿಚಾರಗಳ ಬಗ್ಗೆ ಪಾಲ್ಗೊಂಡ ಎಲ್ಲಾ ಪೋಷಕರಿಗೆ ಅರಿವು ಮೂಡಿಸಲಾಗುತ್ತದೆ” ಎಂದು ಮಾಹಿತಿ ನೀಡಿದರು.

banner

ಶಾಲೆಯ ಆರಂಭದಲ್ಲಿ ತಾಲೂಕ ಆಡಳಿತದ ಪರವಾಗಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಹುಲ್ಲೂರು ಗ್ರಾಮ ಪಂಚಾಯಿತಿಯ ಸದಸ್ಯರು, ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸದಸ್ಯರು, ಊರಿನ 50ಕ್ಕೂ ಹೆಚ್ಚು ಪಾಲಕರು-ಪೋಷಕರು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಎಲ್ಲರೂ ಸಾಲಾಗಿ ನಿಂತು ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತ ಮಾಡಿಕೊಂಡಿದ್ದು ವಿಶೇಷವಾಗಿತ್ತು ಹಾಗೂ ಅರ್ಥಪೂರ್ಣ ಎನಿಸಿತು. ಸಭೆಯಲ್ಲಿ ತಾಲೂಕ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಶಾಲಾ ತಂಡ, ಕ್ರೀಡಾಕೂಟಗಳಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳು ಹಾಗೂ ಉತ್ತಮ ಪರಿಸರ ಶಾಲೆ ಪ್ರಶಸ್ತಿ ಪಡೆದ ಕಾರಣಕ್ಕಾಗಿ ಶಾಲೆಯ ಮುಖ್ಯೋಪಾಧ್ಯಾಯರನ್ನು ಗೌರವಿಸಲಾಯಿತು.

ಗ್ರಾಮ ಪಂಚಾಯಿತಿ ಹುಲ್ಲೂರಿನ ಮಾಜಿ ಅಧ್ಯಕ್ಷ ಮಹಬೂಬಅಲಿ ಗಾಡಗೋಳಿ, ಗ್ರಾಮದ ಹಿರಿಯರಾದ ನಾಗಪ್ಪ ಮೂಕಿ,ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕ್ರಣ್ಣ ಮಾಗಡಿ, ಉಪಾಧ್ಯಕ್ಷರಾದ ರಜಿಯಾ ಬೇಗಂ ನದಾಫ, ಪಾಲಕ-ಪೋಷಕರ ಪರವಾಗಿ ಮಾತನಾಡಿದರು.
ಶಾಲೆಯ ಶಿಕ್ಷಕ ಬಿ.ಎಸ್.ಕೊಪ್ಪದರವರು ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲಕಾರ್ಮಿಕ ನಿಷೇಧ ಕಾಯ್ದೆ, ಮಕ್ಕಳ ಹಕ್ಕುಗಳು, ಆರ್ ಟಿ ಇ ಕಾಯ್ದೆ ಮುಂತಾದವುಗಳ ಬಗ್ಗೆ ವಿವರಿಸಿ ಪೋಷಕರಿಗೆ ಅರಿವು ಮೂಡಿಸಿದರು. ಪಾಲ್ಗೊಂಡಿದ್ದ ಪಾಲಕ-ಪೋಷಕರು ಮೇಲಿನ ವಿಷಯಗಳ ಕುರಿತು ಮುಕ್ತವಾಗಿ ಚರ್ಚಿಸಿದರು.

ವೇದಿಕೆಯಲ್ಲಿ ಮುಖ್ಯಅತಿಥಿಗಳಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ವೀಣಾ ಅಕ್ಕಿ, ಗ್ರಾಮದ ಹಿರಿಯರಾದ ಸಿದ್ದಯ್ಯ ಅಮೋಘಿಮಠ,ಶೇಖಣ್ಣ ಸಾಸಲವಾಡ,ವಿರೂಪಾಕ್ಷಪ್ಪ ಮೂಕಿ, ಉಮೇಶ ರಗಟಿ,ಚೆನ್ನಪ್ಪಗೌಡ ಪಾಟೀಲ,ಮಂಜುನಾಥ ರಗಟಿ, ಶಂಕ್ರಪ್ಪ ಮೂಕಿ,ನಿಂಗಪ್ಪ ಹೊಸೂರ,ಭರಮಜ್ಜ ಹಳ್ಳಿಗೊರವರ,ಕಬೀರ ನದಾಫ,ಬಸಣ್ಣ ಮಾಗಡಿ, ಲಕ್ಷ್ಮಣ ಅತ್ತಿಗೇರಿ,ನೀಲಪ್ಪ ಹಳ್ಳಿಗೊರವರ ಮುಂತಾದವರು ಉಪಸ್ಥಿತರಿದ್ದರು.

ಶಾಲೆಯ ಶಿಕ್ಷಕ ಎಸ್.ಪಿ.ಹಲಸೂರು ಕಾರ್ಯಕ್ರಮ ನಿರೂಪಿಸಿದರು. ಪು.ಬಡ್ನಿ ಸಿ.ಆರ್.ಪಿ ಗಿರೀಶ ನೇಕಾರ ವಂದಿಸಿದರು. ಶಿಕ್ಷಕರಾದ ಪಿ.ಟಿ.ಲಮಾಣಿ, ನಾಗರಾಜ ಭಜಂತ್ರಿ,ಸಲ್ಮಾ.ಪಿ, ರೇಖಾ ರಗಟಿ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb