ಗದಗ: ಚಿಕ್ಕಟ್ಟಿ ಸಂಸ್ಥೆಯ ಕ್ಯಾಂಪಸ್ ಪರಿಸರ, ವಾತಾವರಣ ಮತ್ತು ಇಲ್ಲಿರುವ ಸಂಸ್ಕೃತಿ, ಸಂಸ್ಕಾರವನ್ನು ಗಮನಿಸಿದಾಗ ಒಂದು ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಗೆ ಬಂದಿರುವಂತೆ ಭಾಸವಾಗುತ್ತದೆ ಎಂದು ಹುಬ್ಬಳ್ಳಿಯ ಪ್ರಸಿದ್ಧ ನರವಿಜ್ಞಾನ ತಜ್ಞರಾದ ಡಾ. ಸುರೇಶ ಎಮ್. ದುಗಾಣಿಯವರು ತಮ್ಮ ಅಭಿಪ್ರಾಯ ತಿಳಿಸಿದರು.
ನಗರದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಬಿಪಿನ್ ಹಾಗೂ ವಿನಯ್ ಚಿಕ್ಕಟ್ಟಿ ಪಿಯು ಕಾಲೇಜುಗಳಲ್ಲಿ ನಡೆದ ಪ್ರೇಶರ್ಸ್ ಡೇ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಜಗತ್ತಿನ ಮುಂದುವರೆದ ರಾಷ್ಟ್ರಗಳ ಪಟ್ಟಿಯಲ್ಲಿ ನಮ್ಮ ಭಾರತವು ಈಗ ನಾಲ್ಕನೇಯ ಸ್ಥಾನವನ್ನು ಪಡೆದಿದೆ ಎಂದು ತಿಳಿದಾಗ ಹೆಮ್ಮೆಯಾಗುತ್ತದೆ. ಆ ಹೆಮ್ಮೆಗೆ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಉನ್ನತ ಶಿಕ್ಷಣವನ್ನು ಪಡೆದು ಪ್ರತಿಯೊಬ್ಬರೂ ಉದ್ಯೋಗದಾತರಾಗುವುದರಿಂದ ಮತ್ತು ತಮ್ಮೆಲ್ಲರ ಪರಿಶ್ರಮದಿಂದ ಭಾರತ ಎಲ್ಲ ರಂಗದಲ್ಲೂ ಮುಂದುವರೆಯುತ್ತಿದೆ. ಸರಿಸುಮಾರು ನಲವತ್ತು ವರ್ಷಗಳ ಹಿಂದಿನ ಭಾರತಕ್ಕೂ, ಇಂದಿನ ಭಾರತಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಹಾಗೂ ಬಹಳಷ್ಟು ಮುಂದುವರೆದಿದೆ.
ನಾನು ಇಲ್ಲಿಯವರೆಗೆ ಕನಿಷ್ಟ 40 ದೇಶಗಳನ್ನು ಸುತ್ತಿರುವೆ ಅಲ್ಲಿರುವ ಭಾರತೀಯರ ಪ್ರಾಮಾಣಿಕತೆ, ಸಮಯಪ್ರಜ್ಞೆ, ಕಾರ್ಯ ವೈಖರಿ, ಕೆಲಸದ ಮೇಲಿನ ಶ್ರದ್ಧೆ ತುಂಬಾನೆ ಜಾಸ್ತಿಯಿದೆ, ಹಾಗಾಗಿ ವಿದೇಶಗಳಲ್ಲಿ ಭಾರತೀಯರೆಂದರೆ ತುಂಬಾ ಗೌರವ. ಎಂ.ಬಿ.ಬಿ.ಎಸ್. ಮುಗಿಸಿದವರೆಲ್ಲರೂ ವೈದ್ಯರಾಗುತ್ತಾರೆ, ತಮ್ಮ ಕೌಶಲ್ಯದೊಂದಿಗೆ ನವೀನ ಪ್ರಯೋಗ ಮಾಡುತ್ತಾ ಮುಂದುವರೆಯುತ್ತಾರೋ ಅವರು ಪ್ರಸಿದ್ಧ ವೈದ್ಯರೆಂದೆನಿಸುತ್ತಾರೆ. ‘ಗಡಿಯಾರವನ್ನು ಕೊಂಡುಕೊಳ್ಳಬಹುದು ಆದರೆ ಸಮಯ ಕೊಂಡುಕೊಳ್ಳಲಾಗದು’ಅಂತಹ ಸಮಯವನ್ನು ವಿದ್ಯಾರ್ಥಿಗಳು ವ್ಯರ್ಥವಾಗಿ ಕಳೆಯದೇ ಸಾರ್ಥಕತೆ ಪಡಿಸಿಕೊಂಡು ಓದು-ಬರಹ ಮಾಡುವದರಿಂದ ತಂದೆ-ತಾಯಿಗೆ ಗೌರವ ಹಾಗೂ ದೇಶಕ್ಕೆ ಕೊಡುಗೆ ಕೊಡುತ್ತಾರೆ ಎಂದರು.
ಚಿಕ್ಕಟ್ಟಿ ಸಂಸ್ಥೆಯ ಪ್ರಶಾಂತವಾದ ವಾತಾವರಣವನ್ನು ನೋಡಿದಾಗ ನಾನು ಮತ್ತೆ ವಿದ್ಯಾರ್ಥಿಯಾಗಿ ಈ ಕಾಲೇಜಿಗೆ ಬರಬೇಕೆಂದೆನಿಸುತ್ತಿದೆ. ತಾವುಗಳೆಲ್ಲರೂ ಇಲ್ಲಿರುವ ಫ್ಲೆಕ್ಸ್ ಸಂದೇಶಗಳನ್ನು ಓದಿ ಅರ್ಥೈಸಿಕೊಂಡು ಜೀವಮಾನದಲ್ಲಿ ಪಾಲಿಸಿದರೆ ನಾವ್ಯಾರು ನಿಮಗೆ ಹೇಳುವ ಅವಶ್ಯಕತೆಯಿರುವುದಿಲ್ಲ.ನಾವು ವಿದ್ಯಾರ್ಥಿಗಳಾಗಿದ್ದಾಗ ಓದಿಗೆ ಪೂರಕವಾದ ಸೌಲಭ್ಯಗಳು ತುಂಬಾ ಕಡಿಮೆ, ಆದರೆ ಇವಾಗ ನಿಮಗೆ ಅನೇಕ ಸೌಲಭ್ಯಗಳ ಸಾಗರವೇ ಇದೆ. ಅವುಗಳನ್ನು ನೀವು ಸರಿಯಾಗಿ ಬಳಿಸಿಕೊಂಡು ಅಂದುಕೊಂಡ ಸಾಧನೆಯ ಗುರಿಯನ್ನು ತಲುಪಬಹುದು ಎಂದು ಹೇಳಿದರು.ಈ ಸಂಸ್ಥೆಯವರು ನೀಡಿದ ಅವಿಸ್ಮರಣೀಯವಾದ ಆದರ ಆತಿಥ್ಯಕ್ಕೆ ನಾನು ಮತ್ತು ನನ್ನ ಶ್ರೀಮತಿಯವರು ತುಂಬಾ ಆಭಾರಿಯಾಗಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಮಾತನಾಡಿ, ಶ್ರದ್ಧೆಯಿಂದ ಜ್ಞಾನವನ್ನು ಗಳಿಸಬಹುದು ಅಲ್ಲದೆ ಶ್ರದ್ದೆ ಇದ್ದರೆ ನೀ ಗೆದ್ದೆ ಅನ್ನುವುದನ್ನು ತಿಳಿಸುತ್ತ ಅಭ್ಯಾಸ ಮಾಡಿದವರಿಗೆ ಮಾತ್ರ ಪ್ರತಿಶತ ಅಂಕ ಪಡೆಯಲು ಸಾಧ್ಯ.ಉನ್ನತ ವ್ಯಾಸಂಗಕ್ಕಾಗಿ ದೂರದ ನಗರಗಳಿಗೆ ನಮ್ಮ ವಿದ್ಯಾರ್ಥಿಗಳು ಹೋಗುತ್ತಾರೆ. ಅಲ್ಲಿರುವ ವ್ಯವಸ್ಥೆ ಸೌಲಭ್ಯ ಸೌಕರ್ಯ ಸಲಹೆಗಳನ್ನು ಇಲ್ಲಿಯೇ ನಾವು ಕೊಡೋಣ ಎನ್ನುವ ದೃಷ್ಟಿಯಿಂದ ಹುಬ್ಬಳ್ಳಿಯ ಪ್ರಖ್ಯಾತ ಅಂತರಾಷ್ಟ್ರೀಯ ನರವಿಜ್ಞಾನ ತಜ್ಞರಾದ ಡಾ. ಸುರೇಶ ಎಮ್. ದುಗಾಣಿಯವರನ್ನು ಕರೆಸಿರುವುದು. ಅವರು ನಮ್ಮ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ವೈದ್ಯಕೀಯ ಕ್ಷೇತ್ರದ ಕುರಿತು ಉಪಯುಕ್ತ ಮಾಹಿತಿ ನೀಡಲಿದ್ದಾರೆ ಹಾಗೂ ಮೆಡಿಕಲ್ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದರು.
ನಾವು ನಮ್ಮ ಮಕ್ಕಳಿಗೆ ಅವರಂತಾಗಿ ಇವರಂತಾಗಿ ಎಂದು ಹೇಳದೇ ನಮ್ಮ ಮಧ್ಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಾಧಕರಾದ ಡಾ. ಸುರೇಶ ಎಮ್. ದುಗಾಣಿಯವರ ನುಡಿಗಳನ್ನಾಲಿಸಿ ಅವರಂತಾಗಿ ನೀವು ಸಾಧಕರಾಗಿ ಎಂದು ಹೇಳಿದರು. ವೈದ್ಯರ ಆದರ್ಶ ಆಚಾರ ವಿಚಾರಗಳನ್ನು ನಮ್ಮ ವಿದ್ಯಾರ್ಥಿಗಳು ಅರಿತು ಪಾಲಿಸುತ್ತ ನೀವು ಸಹ ಆದರ್ಶ ವ್ಯಕ್ತಿಗಳಾಗಿ ಹೆಸರುವಾಸಿಯಾಗಿರಿ ಎಂದರು.
ಬಿಪಿನ್ ಚಿಕ್ಕಟ್ಟಿ ಬಿ.ಸಿ.ಎ. ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಬಿಪಿನ್ ಎಸ್. ಚಿಕ್ಕಟ್ಟಿಯವರು ಮಾತನಾಡಿ, ಮೊದಲನೆಯದಾಗಿ ವಿದ್ಯಾರ್ಥಿಗಳು ಮುಂದಿನ ದಿನಮಾನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆ.ಇ.ಇ. ನೀಟ್, ಕೆಸೆಟ್ ನಂತಹ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ತಮ್ಮನ್ನು ತಾವು ಅನುಗೊಳಿಸಿಕೊಳ್ಳಬೇಕು ಮತ್ತು ಅದಕ್ಕಾಗಿ ಈಗಿನಿಂದಲೆ ಓದಿನಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ವಿದ್ಯಾಭ್ಯಾಸ ಮಾಡಬೇಕು.ಎರಡನೆಯದಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ವಿದ್ಯಾರ್ಜನೆಯಲ್ಲಿ ಆರೋಗ್ಯದ ಕುರಿತು ಯಾವುದೇ ತೊಂದರೆಗಳು ಬರದಂತೆ ಕಾಪಾಡಿಕೊಳ್ಳಬೇಕು. ಮೂರನೆಯದಾಗಿ ತಾವು ಕಲಿಯುತ್ತಿರುವ ಕಾಲೇಜಿಗಾಗಲಿ ಮತ್ತು ಕಲಿಸುವ ಗುರುಗಳಿಗಾಗಲಿ ಗೌರವ ತರುವಂತೆ ವಿಧೇಯಕರಾಗಿರಬೇಕು ಮತ್ತು ಅವರು ದಿನಿನಿತ್ಯ ಹೇಳುವ ಪಠ್ಯಕ್ರಮಗಳ ಬಗ್ಗೆ ಆಸಕ್ತಿವಹಿಸಿ ಸರಿಯಾಗಿ ಅಭ್ಯಾಸ ಮಾಡಿದಲ್ಲಿ ನೀವು ಅಂದುಕೊಂಡ ಫಲಿತಾಂಶವನ್ನು ಪಡೆದು ಓದಿದ ಕಾಲೇಜಿಗೂ ಮತ್ತು ಜನ್ಮ ನಿಡಿದ ತಂದೆ ತಾಯಿಗಳಿಗೂ ಗೌರವವನ್ನು ತಂದು ಕೊಡಬಹುದು ಎಂದರು.
ಕಾಲೇಜಿನ ಆಂಗ್ಲ ಭಾಷಾ ಬೋಧಕರಾದ ಪ್ರೊ. ಬಿ. ವಿ. ಜೋಶಿಯವರು ಮಾತನಾಡುತ್ತ, ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ತರಗತಿಯ ಬೋಧನೆಯಲ್ಲಿ ಆನಂದ ಪಡೆಯುವ ನನಗೆ ಈ ವೇದಿಕೆಯ ಮೇಲೆ ಮಾತಾಡಿ ಪ್ರಥಮ ಪಿ.ಯು ತರಗತಿಯ ಹೊಸ ಮುಖಗಳಿಗೆ ಸ್ವಾಗತ ಕೋರುವುದು ಕೂಡಾ ಸಂತೋಷವೆನಿಸಿದೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿನ ಎಲ್ಲ ಪ್ರಾಧ್ಯಾಪಕವೃಂದ, ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತಂದು, ಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಮಾರ್ಗದರ್ಶನ ನೀಡಲು ಸದಾ ಸಿದ್ಧ ಎಂದರು.
ಡಾ. ಸುರೇಶ ಎಮ್. ದುಗಾಣಿ ಮತ್ತು ಅವರ ಶ್ರೀಮತಿಯಾದ ಸವಿತಾ ಎಸ್. ದುಗಾಣಿ ದಂಪತಿಗಳನ್ನು ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿಯರಾದ ದಿವ್ಯಾ ಮುರಗೋಡ, ನಿಸರ್ಗ ವಸ್ತ್ರದ, ದೀಪಾ ಎಸ್. ಕೆ., ಪ್ರೀತಿ ಎಳವತ್ತಿ, ಸಿಂಚನಾ ತಟ್ಟಿ, ವಹೀದಾಬಾನು ಕೊಟ್ಟುರ, ಮದೀಯಾ ಎಸ್. ಭಾಗವಾನ್, ಮತ್ತು ಶೀತಲ ಉದಿ ರವರ ನಿರೂಪಣೆಗೈದರು.
ವಿದ್ಯಾರ್ಥಿನಿಯರಾದ ಕುಮಾರಿ ರಕ್ಷಿತಾ ವೆರ್ಣೇಕರ ಗಾಯನ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಾಲಾ ಬಸ್ ಚಾಲಕರಾದ ಶೇಖಪ್ಪನವರ ಪ್ರಾರ್ಥನೆ ಗೈದರು.ಕು.ಪ್ರತಿಭಾ ಮುಳಗುಂದ ಹಾಗೂ ಕು.ಇರ್ಶಾದ ಮಸೀದ ಗಣ್ಯಮಾನ್ಯರಿಗೆ ಸ್ವಾಗತಗೈದರು. ಕು.ಅಪೂರ್ವಾ ಆರ್. ವೆರ್ಣೇಕರ ಮತ್ತು ಕು.ಅನಿಷ್ ತೋಫಿ ಮ. ಮುಲ್ಲಾ ಅತಿಥಿಗಳ ಪರಿಚಯ ಮಾಡಿಕೊಟ್ಟರು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಥಮ ವರ್ಷದ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಜ್ಞಾನದ ಮೂಲವಾದ ಪುಸ್ತಕಗಳನ್ನು ಕೊಡುವುದರ ಮೂಲಕ ಗೌರವ ಪೂರ್ವಕವಾಗಿ ಸ್ವಾಗತಿಸಲಾಯಿತು.
ಕುಮಾರ ಮೋಸಸ್ ಎಮ್. ಸಂಗಳದ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿವರ್ಗದವರು ಹಾಗೂ ಪಾಲಕರು ಪಾಲ್ಗೊಂಡಿದ್ದರು.