ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕಳೆದ ಹದಿನಾಲ್ಕು ದಿನಗಳಿಂದ ಸಮಗ್ರ ಹೋರಾಟ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಅಹೋರಾತ್ರಿ ಧರಣಿ ಸತ್ಯಾಗ್ರಹದ ವೇದಿಕೆಯ ಮೇಲೆ ಕಿತ್ತೂರು ರಾಣಿ ಚೆನ್ನಮ್ಮ ಜೀ ಯ ೨೦೧ ನೇ ವಿಜಯೋತ್ಸವ ಹಾಗೂ ೨೪೭ ನೇ ಜಯಂತ್ಯೋತ್ಸವವನ್ನು ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಆಚರಿಸಲಾಯಿತು.
ವರದಿ : ಪರಮೇಶ ಎಸ್ ಲಮಾಣಿ
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ ಸುಭೀಕ್ಷೆಯ ನಾಡಿನಲ್ಲಿ ಅನ್ನದಾತರು ನಿರಾಶ್ರಿತರಾಗಿದ್ದಾರೆ. ಯಾವ ಸರ್ಕಾರ ಸಂಕಷ್ಟದಲ್ಲಿರುವ ರೈತರು ಬೆಳೆದ ಮೆಕ್ಕೆಜೋಳವನ್ನು ಖರೀದಿ ಮಾಡಬೇಕಾಗಿದ್ದ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದ್ದು, ಎಷ್ಟು ಬೇಗ ಈ ಸರ್ಕಾರ ಪತನವಾಗುತ್ತದೆಯೋ ಅಷ್ಟು ರೈತರಿಗೆ ಅನುಕೂಲವಾಗುತ್ತದೆ ಎಂದರಲ್ಲದೇ,
ಸರ್ಕಾರ ನಡೆಸುತ್ತಿರುವವರ ಚರ್ಮ ದಪ್ಪವಾಗಿದ್ದು, ರೈತರ ಗೋಳು ಕೇಳುತ್ತಿಲ್ಲ ಎಂದ ಅವರು ವೀರ ರಾಣಿ ಕಿತ್ತೂರು ಚೆನ್ನಮ್ಮ ಬ್ರಿಟಿಷ್ ರ ವಿರುದ್ಧ ರಣಕಹಳೆ ಉದಿದ ದೇಶದ ಏಕೈಕ ಮಹಿಳೆ. ಇಂತಹ ವೇದಿಕೆಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಜಯ ಸಿಕ್ಕೆ ಸಿಗುತ್ತದೆ ಎಂದರು.
ತಾವು ಕೃಷಿ ಸಚಿವರಿಗೆ ಈಗಾಗಲೇ ಪತ್ರ ಬರೆದಿದ್ದು, ನವದೆಹಲಿಗೆ ತೆರಳಿ ಕೃಷಿ ಸಚಿವರಿಂದ ಸ್ಪಷ್ಟನೆ ಕೊಡಿಸುವದಾಗಿ ರೈತರಿಗೆ ಭರವಸೆ ನೀಡಿದರು.
ಸಾನಿಧ್ಯ ವಹಿಸಿದ್ದ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳು ವೀರ ರಾಣಿ ಕಿತ್ತೂರು ಚೆನ್ನಮ್ಮ ತೆರಿಗೆ ವಿಷಯದಲ್ಲಿ ಸಿಡಿದೆದ್ದು ಬ್ರಿಟಿಷ್ ರ ವಿರುದ್ಧ ಕತ್ತಿ ಝಳಪಿಸಿ ರಣಕಹಳೆ ಉದಿದ ಧೀರ ಮಹಿಳೆ.
ರೈತರು ನಡೆಸುತ್ತಿರುವ ನ್ಯಾಯಯುತ ಹಾಗೂ ರೈತಪರ ಹೋರಾಟಕ್ಕೆ ತಾವು ಸದಾ ಬೆಂಬಲ ನೀಡುವದಾಗಿ ಹೇಳಿದರು.
ವೇದಿಕೆ ಮೇಲೆ ಹೂವಿನ ಶಿಗ್ಲಿ, ಹತ್ತಿಮತ್ತೂರು, ಆದರದಹಳ್ಳಿ, ಕುಂದಗೋಳದ ಕಲ್ಯಾಣಪುರ ಮಠದ ಮತ್ತು ಶಿವಕುಮಾರಪುರದ ಹಾಗೂ ಬಟಕುರ್ಕಿ ಶ್ರೀ ಗಳು ಇದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಸೋಮನಗೌಡ ಮಾಲಿಪಾಟೀಲ್, ಗದಗ ಜಿಲ್ಲಾ ಅದ್ಯಕ್ಷ ವೀರಣ್ಣ ಕರಿಬಿಷ್ಠ, ಸುಜಾತಾ ದೊಡ್ಡಮನಿ, ರವಿಕಾಂತ ಅಂಗಡಿ , ನಾಗರಾಜ ಚಿಂಚಲಿ, ಮಹಿಳಾ ಘಟದ ಅಧ್ಯಕ್ಷೆ ವಸಂತಾ ಹುಲ್ಲತ್ತಿ, ಉಪಾಧ್ಯಕ್ಷೆ ಮಲಾದೇವಿ ದುಂದರಗಿ, ಪೂರ್ಣಾಜಿ ಕರಾಟೆ, ದಾದಾಫೀರ ಮಚ್ಚಾಲೆ, ನೀಲಪ್ಪ ಸರಸೂರಿ, ಶರಣು ಗೋಡಿ, ಹೊನ್ನಪ್ಪ ವಡ್ಡರ, ಮಲ್ಲೆಶಪ್ಪ ವಡ್ಡರ, ಬಸವರಾಜ ಹೀರೆಮನಿ, ಬಸವರಾಜ ಹಂಜಿ, ಡಿ.ವಾಯ್.ಹುನಗುಂದ, ಪರಮೇಶ ನಾಯಕ ಸೇರಿದಂತೆ ಅನೇಕರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಾ ವೀರಶೈವ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ ವಹಿಸಿದ್ದರು.
ನ್ಯಾಯವಾದಿ ಎಂ.ಎಸ್.ದೊಡ್ಡಗೌಡರ ಮತ್ತು ಚಂದ್ರು ಮಾಗಡಿ ಕಾರ್ಯಕ್ರಮ ನಿರ್ವಹಿಸಿದರು.
