Sunday, April 20, 2025
Homeದೇಶಫೆಂಗಲ್ ಚಂಡಮಾರುತ: ಚೆನ್ನೈ ವಿಮಾನ ನಿಲ್ದಾಣವನ್ನು ಇಂದು ಸಂಜೆ 7ರ ವರೆಗೆ ಬಂದ್‍ !

ಫೆಂಗಲ್ ಚಂಡಮಾರುತ: ಚೆನ್ನೈ ವಿಮಾನ ನಿಲ್ದಾಣವನ್ನು ಇಂದು ಸಂಜೆ 7ರ ವರೆಗೆ ಬಂದ್‍ !

ಫೆಂಗಲ್ ಚಂಡಮಾರುತ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ (ನವೆಂಬರ್ 30, 2024) ನಗರದಲ್ಲಿ ಚಾಲ್ತಿಯಲ್ಲಿರುವ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಚೆನ್ನೈ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಮತ್ತು ಎಲ್ಲಾ ಬರುವ ಮತ್ತು ಹೋಗುವ ವಿಮಾನಗಳನ್ನು ಮಧ್ಯಾಹ್ನ 12.30 ರಿಂದ ಸಂಜೆ 7 ರವರೆಗೆ ಸ್ಥಗಿತಗೊಳಿಸಲಾಗಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ), ಹವಾಮಾನ ಇಲಾಖೆ ಮತ್ತು ವಿಮಾನಯಾನ ಸಂಸ್ಥೆಗಳೊಂದಿಗೆ ಚರ್ಚಿಸಿದ  ನಂತರ,  ಅಡ್ಡ ಗಾಳಿಯಿಂದಾಗಿ ಶನಿವಾರ ಸುಮಾರು ಏಳು ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ಮುಂದುವರಿಸುವುದು ಸೂಕ್ತವಲ್ಲ ಎಂದು ನಿರ್ಧರಿಸಲಾಯಿತು.

ಪ್ರತಿಕೂಲ ಹವಾಮಾನದಿಂದಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಎಲ್ಲಾ ಬರುವ ಮತ್ತು ಹೋಗುವ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಇಂಡಿಗೊ ಏರ್ಲೈನ್ಸ್ ತಿಳಿಸಿದೆ. ಹವಾಮಾನ ಸುಧಾರಿಸಿದ ನಂತರ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಆದ್ಯತೆ ನೀಡಿ ಇಂಡಿಗೊ ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಿಸಲಿದೆ ಎಂದು ಚೆನ್ನೈ ವಿಮಾನ ನಿಲ್ದಾಣ ಪ್ರಾಧಿಕಾರ ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಜೊತೆಗೆ ಮುಂದಿನ ಬದಲಾವಣೆಗಳಿಗೆ  ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು  ಪ್ರಯಾಣಿಕರಿಗೆ ಶಿಫಾರಸು ಮಾಡಲಾಗಿದೆ.

ಚೆನ್ನೈನಿಂದ ವಿಮಾನಗಳ ಮಾರ್ಗ ಬದಲಾವಣೆ

ತಿರುಚಿ, ತೂತುಕುಡಿ, ದುಬೈ, ಅಬುಧಾಬಿ, ನವದೆಹಲಿ, ಪೋರ್ಟ್ ಬ್ಲೇರ್, ಕೊಲಂಬೊ ಮತ್ತು ಹೈದರಾಬಾದ್ ಸೇರಿದಂತೆ ಸ್ಥಳಗಳಿಂದ ಬಂದಂತಹ ಒಂಬತ್ತು ವಿಮಾನಗಳನ್ನು ಶನಿವಾರ ಬೆಳಿಗ್ಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಸಲು ಸಾಧ್ಯವಾಗದ ಕಾರಣ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ.

 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments