ಮಂಡ್ಯ: ಮಾಜಿ ಬಾಡಿಗಾರ್ಡ್, ಚಾಲಕ ಹಾಗೂ ಸತ್ಯ ನಿಷ್ಠೆಯಿಂದ ನಟ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಸೇವೆ ಸಲ್ಲಿಸಿದ್ದ ಛಲಪತಿ ಅವರ ಪುತ್ರಿ ಅಮೂಲ್ಯ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶೈಲಿಯಲ್ಲಿ ಉತ್ತೀರ್ಣಳಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಹುಲ್ಲಹಳ್ಳಿ ಕ್ರೈಸ್ಟ್ ಅಕಾಡೆಮಿಯಲ್ಲಿ ವ್ಯಾಸಂಗ ಮಾಡಿದ ಅಮೂಲ್ಯ, ಈ ಬಾರಿ ಒಟ್ಟು 600 ಅಂಕಗಳಿಗೆ 566 ಅಂಕ ಗಳಿಸಿ 94.33% ಶೇಕಡಾ ಫಲಿತಾಂಶದೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾರೆ. ಕನ್ನಡದಲ್ಲಿ 98, ಎಕನಾಮಿಕ್ಸ್‌ನಲ್ಲಿ 97, ಇಂಗ್ಲೀಷ್ 90, ಬ್ಯುಸಿನೆಸ್ ಸ್ಟಡೀಸ್ 90, ಅಕೌಂಟೆನ್ಸಿಯಲ್ಲಿ 96 ಹಾಗೂ ಸ್ಟಾಟಿಸ್ಟಿಕ್ಸ್‌ನಲ್ಲಿ 95 ಅಂಕಗಳನ್ನೂ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಅಮೂಲ್ಯ ಮುಂದಿನ ದಿನಗಳಲ್ಲಿ ಬಿಕಾಂ ಓದಿ ನಂತರ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗುವ ಕನಸನ್ನು ಹೊಂದಿದ್ದು, ಅದಕ್ಕಾಗಿ ಈಗಲೇ ಸಿದ್ಧತೆ ಆರಂಭಿಸಿದ್ದಾರೆ.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಮಾಧ್ಯಮದೊಂದಿಗೆ ಮಾತನಾಡಿದ ಛಲಪತಿ, “ನನ್ನ ಮಗಳ ಸಾಧನೆಯ ಹಿಂದೆ ನಮ್ಮ ಯಜಮಾನ ಪುನೀತ್ ರಾಜ್‌ಕುಮಾರ್ ಅವರ ಆಶೀರ್ವಾದವಿದೆ. ಮಗಳು ಶಾಲೆಯಲ್ಲಿ ಓದುತ್ತಿದ್ದಾಗಿನಿಂದಲೇ ಅವಳನ್ನು ಓದಿಸಿದ್ದೇ ಅವರೇ. ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ಅವರು ಹೊತ್ತಿದ್ದರು. ಅವರ ಮಾರ್ಗದರ್ಶನವಿಲ್ಲದೆ ನಾವು ಈ ಮಟ್ಟಕ್ಕೆ ಬಾರದಿರುತ್ತೆವು,” ಎಂದು ಭಾವುಕತೆ ವ್ಯಕ್ತಪಡಿಸಿದರು.
ಅಮೂಲ್ಯ ಕೂಡ, “ಪುನೀತ್ ಅಪ್ಪು ಅಂಕಲ್ ಅವರ ಸಹಾಯ ಮತ್ತು ಪ್ರೇರಣೆಯಿಂದ ನಾನು ಈ ಮಟ್ಟಕ್ಕೆ ಬಂದಿದ್ದೇನೆ. ನಾನು ಓದಿದ ಪ್ರತಿಯೊಂದು ಪಾಠ, ಸಾಧಿಸಿದ ಪ್ರತಿ ಅಂಕವೂ ಅವರಿಗೆ ಸಲ್ಲುವ ಧನ್ಯವಾದ” ಎಂದು ಹೇಳಿದರು.

ಛಲಪತಿ ಸುಮಾರು 11 ವರ್ಷಗಳ ಕಾಲ ಪುನೀತ್ ರಾಜ್‌ಕುಮಾರ್ ಅವರ ಜೊತೆ ನಿಕಟ ವ್ಯವಸ್ಥೆಯಲ್ಲಿದ್ದು, ಕುಟುಂಬದ ಸದಸ್ಯರಂತೆ ಇರುತ್ತಿದ್ದರು. ಅಪ್ಪು ನಿಧನದ ಬಳಿಕ ಇತರ ವೃತ್ತಿಯತ್ತ ಮುಖಮಾಡಿದ ಛಲಪತಿ, ಪ್ರತೀ ವರ್ಷದ ಹುಟ್ಟುಹಬ್ಬ ಹಾಗೂ ಸ್ಮರಣಾ ದಿನಗಳಲ್ಲಿ ಪುನೀತ್ ಅವರ ಸಮಾಧಿಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸುತ್ತಾರೆ.