ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ನಂಬರ್ 1 ಶೋ ಬಿಗ್‌ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಸದ್ಯಕ್ಕೆ ಹೊರಬಂದಿದ್ದಾರೆ. ಹೌದು, ಈ ಹಿಂದೆ ಟಿಕೆಟ್ ವಂಚನೆ ಪ್ರಕರಣದಲ್ಲಿ ಅವರನ್ನ ಬಂಧಿಸಲಾಗಿತ್ತು. ಅದಾದ ಬಳಿಕ ಜಾಮೀನಿನ ಮೇಲೆ ಅವರು ಹೊರಗಡೆ ಬಂದಿದ್ದರು. ಅಷ್ಟೇ ಅಲ್ಲದೇ ಬಿಗ್ ಬಾಸ್ ನಲ್ಲಿ ಕೂಡ ಅವರು ಪ್ರಮುಖ ಸ್ಪರ್ಧಿಯಾಗಿದ್ದಾರೆ. ಆದರೆ ಇದೀಗ ಅವರು ದೊಡ್ಮನೆಯಿಂದ ಹೊರಗಡೆ ಬಂದಿದ್ದು, ತಮ್ಮ ಮೇಲಿನ ಪ್ರಕರಣದ ಕುರಿತಾದ ವಿಚಾರಣೆ ಎದುರಿಸಲು ಹೊರಗೆ ಬಂದಿದ್ದಾರೆ.
ಮಂಗಳವಾರ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದು, ವಿಚಾರಣೆಗೆ ನೇರವಾಗಿ ಹಾಜರಾಗಬೇಕೆಂಬ ವಾರಂಟ್ ಹಿನ್ನೆಲೆಯಲ್ಲಿ ಚೈತ್ರಾ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್‌ಗೆ ಆಗಮಿಸಿದ್ದಾರೆ.ಚೈತ್ರಾ ಅವರ ವಿಚಾರಣೆಯನ್ನು ಮತ್ತೇ ಕೋರ್ಟ್ ಜನವರಿ 13ಕ್ಕೆ ಮುಂದೂಡಿದೆ. ಉದ್ಯಮಿಯೊಬ್ಬರಿಗೆ ಎಂಎಲ್‌ಎ ಟಿಕೆಟ್ ನೀಡುವುದಾಗಿ ಐದು ಕೋಟಿ ವಂಚಿಸಿದ ಪ್ರಕರಣದಲ್ಲಿ ಚೈತ್ರಾ ಆರೋಪಿಯಾಗಿದ್ದಾರೆ.