Home » News » ತಹಶಿಲ್ದಾರ ಕಚೇರಿಯಲ್ಲಿ ಸಂತ ಸೇವಾಲಾಲರ ಜಯಂತಿ ಆಚರಣೆ…! ಶರಣ, ಸಂತರ ಜಯಂತಿ ಆಚರಣೆಗೆ ಸೀಮಿತವಾಗದಿರಲಿ….!

ತಹಶಿಲ್ದಾರ ಕಚೇರಿಯಲ್ಲಿ ಸಂತ ಸೇವಾಲಾಲರ ಜಯಂತಿ ಆಚರಣೆ…! ಶರಣ, ಸಂತರ ಜಯಂತಿ ಆಚರಣೆಗೆ ಸೀಮಿತವಾಗದಿರಲಿ….!

by CityXPress
0 comments

ಶರಣ, ಸಂತರ ಜಯಂತಿ ಆಚರಣೆಗೆ ಸೀಮಿತವಾಗದಿರಲಿ….!

ಲಕ್ಷ್ಮೇಶ್ವರ: ಪಟ್ಟಣದ ತಹಶಿಲ್ದಾರ ಕಚೇರಿಯಲ್ಲಿ ಸಂತ ಸೇವಾಲಾಲರ 287ನೇ ಜಯಂತಿ ಆಚರಿಸಲಾಯಿತು.

ಸಂತ ಸೇವಾಲಾಲ್‌ ಮಹಾರಾಜರ ಭಾವಚಿತ್ರಕ್ಕೆ ತಹಶಿಲ್ದಾರ ಧನಜಂಯ ಎಂ. ಮತ್ತು ಬಂಜಾರ ಸಮಾಜದ ಮುಖಂಡರು ಪುಷ್ಪಾರ್ಚನೆ ಮಾಡಿದರು.

ವರದಿ : ಪರಮೇಶ ಎಸ್ ಲಮಾಣಿ.

banner

ಬಳಿಕ ಮಾತನಾಡಿ,‘ಸೇವಾಲಾಲರ ಆದರ್ಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ನಿರಂತರವಾಗಿ ಅವರನ್ನು ಸ್ಮರಿಸಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು’ ಎಂದರು.

ತಹಶಿಲ್ದಾರ ಧನಂಜಯ ಎಂ, ದೀಪಕ ಲಮಾಣಿ, ಥಾವರಪ್ಪ ಲಮಾಣಿ, ರಾಮಣ್ಣ ಲಮಾಣಿ ಮಾತನಾಡಿ,‘ಸಂತರು, ಶರಣರು ನಡೆದಾಡಿದ ಭಾರತ ದೇಶ ಸಂಸ್ಕಾರದ ಕಾರಣಕ್ಕೆ ಜಗತ್ತಿಗೆ ಹೆಸರು ವಾಸಿವಾಗಿದೆ. ಅಂಥ ಮಹಾನ್ ವ್ಯಕ್ತಿಗಳ ಜಯಂತಿಯನ್ನು ನಾವುಗಳು ಕೇವಲ ಆಚರಣೆಗೆ ಮಾತ್ರ ಸಿಮೀತ ಮಾಡಬಾರದು’ ಎಂದು ಹೇಳಿದರು.

ಸಂತ ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಸಂತ ಸೇವಾಲಾಲ್ ಮಹಾರಾಜರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು.

ಶರಣರ, ಸಂತರ ಸಂದೇಶಗಳು ಶಾಂತಿ, ಸಾಮರಸ್ಯದ ನಾಡು ಕಟ್ಟಬೇಕೆಂಬುದಾಗಿದೆ. ಅವರ ಜಯಂತಿಗಳು ಆಚರಣೆಗೆ ಸೀಮಿತವಾಗಬಾರದು. ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜಯಂತಿ ಆಚರಣೆಗೆ ಅರ್ಥ ಬರುತ್ತದೆ. ಸರ್ಕಾರಿ ಸೌಲಭ್ಯಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳುವವರು ಬಂಜಾರ ಸಮುದಾಯದವರು. ಹೀಗಾಗಿಯೇ ತಾಂಡದಲ್ಲಿ ಮನೆಗೊಬ್ಬ ಶಿಕ್ಷಣ ಪಡೆದು ಬದುಕು ರೂಪಿಸಿಕೊಂಡಿದ್ದಾರೆ ಎಂದರು.

ಸಂದರ್ಭದಲ್ಲಿ ತಹಶಿಲ್ದಾರ ಧನಂಜಯ. ಎಂ, ಉಪ ತಹಶಿಲ್ದಾರ ಮಂಜುನಾಥ ಅಮಾಸಿ, ಕಾಟೇವಾಲ್, ದೀಪಕ ಲಮಾಣಿ, ರಾಮಣ್ಣ ಲಮಾಣಿ, ಗಣೇಶ ಲಮಾಣಿ, ಧರ್ಮಣ್ಣ ಲಮಾಣಿ, ಗಣೇಶ ಲಮಾಣಿ, ಕೀರಣ ಲಮಾಣಿ, ತುಕಾರಾಮ ಪೂಜಾರ , ಗೇಮಪ್ಪ ಲಮಾಣಿ,ಶೇಖಪ್ಪ ಲಮಾಣಿ, ಸುರೇಶ ಮಾಳಗಿಮನಿ, ಪರಮೇಶ ಲಮಾಣಿ, ಮಂಜುನಾಥ ವಾಲ್ಮೀಕಿ, ಭೀಮಣ್ಣ ಯಂಗಾಡಿ, ಶ್ರೀಕಾಂತ , ಪ್ರವೀಣ ಬೋಮಲೆ ಮತ್ತಿತರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb