ಗದಗ: ಮಹಾರಾಷ್ಟ್ರದ ಚುನಾವಣೆಗೆಂದು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ತೆರಳಿರುವ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲದ ಗೃಹರಕ್ಷಕರು ಕನಕ ಜಯಂತಿ ಆಚರಣೆ ಮಾಡುವ ಮೂಲಕ ಕನ್ನಡತನವನ್ನು ಮೆರೆದಿದ್ದಾರೆ ಎಂದು ಕಮಾಂಡೆಂಟ್ ಸುರೇಶ ಹಳ್ಳಿಕೇರಿ ಹೇಳಿದರು.
ಜಿಲ್ಲಾ ಬೋಧಕ ಕಿರಣಕುಮಾರ ಮಾತನಾಡಿ, ಸಂತ ಶ್ರೇಷ್ಠ ಕನಸಕದಾಸರು ಸಮಾಜದಲ್ಲಿನ ಮೇಲು-ಕೀಳು, ಉಚ್ಛ-ನೀಚ ಎಂಬಿತ್ಯಾದಿ ಅಸಮಾನತೆಗಳನ್ನು ಹೋಗಲಾಡಿಸಲು ಬಹಳಷ್ಟು ಶ್ರಮಿಸಿದರು. ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ? ಎಂಬ ಕೀರ್ತನೆಯನ್ನು ರಚಿಸುವ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದರು ಎಂದರು.
ಗೃಹರಕ್ಷಕ ಜಗದೀಶ ಬಂಡಿವಡ್ಡರ, ಶರಣಪ್ಪ ಬೇಲೇರಿ, ಪರಶುರಾಮ ಸಾಬಳೆ, ಪಿ. ಕೆ. ಹಡಪದ, ವಿ. ಎಸ್. ಇಟಗಿ, ಎಸ್.ವಿ. ಮುಶಿಗೇರಿ, ಎಂ. ಬಿ. ಕಡೆತೋಟದ, ತೋಫಿಕ್ ಮುಲ್ಲಾ, ಎಸ್. ಬಿ. ಮಡಿವಾಳರ, ಬಿ. ಬಿ. ನೆಲ್ಲೂರ, ಎಸ್. ಐ. ತಳವಾರ, ಎ. ಎಸ್. ಲಕ್ಷ್ಮೇಶ್ವರ ಸೇರಿದಂತೆ ಇತರರಿದ್ದರು.