ಮುಂಡರಗಿ:ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯನ್ನ ತಾಲೂಕ ದಂಡಾಧಿಕಾರಿಗಳಾದ ಪಿ.ಎಸ್.ಎರ್ರಿಸ್ವಾಮಿ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ರೈತ ಮುಖಂಡ ಸುರೇಶ್ ಹಲವಾಗಲಿ ಮಾತನಾಡಿ, ರಾಷ್ಟ್ರ ಪ್ರೇಮ ಮತ್ತು ರಾಷ್ಟ್ರ ಧರ್ಮದಿಂದ ಗಣರಾಜ್ಯೋತ್ಸವವನ್ನು ನಾವೆಲ್ಲರೂ ಆಚರಿಸಬೇಕಾಗಿದೆ. ಐತಿಹಾಸಿಕ ಸಂವಿಧಾನ ನಮ್ಮದಾಗಿದ್ದು, ರಾಷ್ಟ್ರ ಧ್ವಜಾರೋಹಣ ಮಾಡುವಂಥ ಸಂದರ್ಭದಲ್ಲಿ ಪ್ರತಿಯೊಂದು ಶಾಲೆಗಳಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ಆಗುವ ರೀತಿ ಆಗದಂತೆ ನೋಡಿಕೊಳ್ಳಬೇಕು.

ಆ ನಿಟ್ಟಿನಲ್ಲಿ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಜೊತೆಗೆ ತಾಲೂಕ ಆಡಳಿತದಿಂದ ರೈತರು ಮತ್ತು ಸಾಧಕರು ಹಾಗೂ ತಾಲೂಕಿನ ಅಭಿವೃದ್ಧಿಗಾಗಿ ಹೋರಾಟ ಮಾಡಿದ ಸಾಧಕರನ್ನ ಆಯ್ಕೆ ಮಾಡಿ ಗೌರವಿಸುವಂತೆ ಸಲಹೆ ನೀಡಿದರು.
ತಹಶೀಲ್ದಾರರಾದ ಪಿ.ಎಸ್.ಎರ್ರಿಸ್ವಾಮಿ ಮಾತನಾಡಿ, ತಾಲೂಕಿನ ಎಲ್ಲ ಇಲಾಖೆ ಮುಖ್ಯ ಅಧಿಕಾರಿಗಳು ಮತ್ತು ಶಾಲಾ ಕಾಲೇಜುಗಳ ಅಧಿಕಾರಿಗಳು ರಾಷ್ಟ್ರ ಧ್ವಜದ ಶಿಷ್ಟಾಚಾರಕ್ಕೆ ಧಕ್ಕೆ ತರದಂತೆ ನಿಯಮಗಳನ್ನು ಪಾಲಿಸಬೇಕು. ರಾಷ್ಟ್ರಧ್ವಜಕ್ಕೆ ಅಪಮಾನವಾಗುವಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಧ್ವಜಾರೋಹಣ ಮಾಡುವಾಗಲೂ ಯಾವುದೇ ರೀತಿಯ ಲೋಪದೋಶ ಆಗದಂತೆ ನೋಡಿಕೊಳ್ಳಬೇಕು. ಅಂಥಹ ಅವಘಡ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ, ರೈತ ಮುಖಂಡ, ಬಸವರಾಜ್ ದೆಸಾಯಿ, ಲಕ್ಷ್ಮಣ್ ತಗಡಿನಮನಿ, ಬಸವರಾಜ್ ನವಲಗುಂದ, ಅಡಿವಪ್ಪ ಚಲವಾದಿ, ಮಂಜುಳಾ ಇಟಗಿ, ಮಂಜುನಾಥ್ ಮುಧೋಳ, ಅಶ್ವಿನಿಗೌಡ ಬಿಡನಾಳ, ಸೋಮಣ್ಣ ಹೈತಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.