ಲಕ್ಷ್ಮೇಶ್ವರ: ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳು ಈ ಬಾರಿಯೂ ಒಟ್ಟೊಟ್ಟಿಗೆ ಬಂದಿದ್ದು, ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ, ಶಾಂತಿಯುತವಾಗಿ ವಿಜೃಂಭಣೆಯಿಂದ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಗದಗ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರೋಹನ ಜಗದೀಶ್ ಹೇಳಿದರು.
ಲಕ್ಷ್ಮೇಶ್ವರ ಸುದ್ದಿ: ಪರಮೇಶ ಲಮಾಣಿ.
ಪಟ್ಟಣದ ತಾಲೂಕ ಪಂಚಾಯತಿ ಸಭಾ ಭವನದಲ್ಲಿ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಅಂಗವಾಗಿ ವಿವಿಧ ಸಮಾಜದ ಮುಖಂಡರನ್ನು ಒಳಗೊಂಡ ಶಾಂತಿ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಶಾಂತಿಯುತವಾಗಿ ಹಬ್ಬವನ್ನು ಆಚರಿಸಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ತಾಲೂಕಿನಲ್ಲಿ 288 ಸಾರ್ವಜನಿಕ, ಶಾಲಾ ಕಾಲೇಜು ಸೇರಿದ ಸ್ಥಳಗಳಲ್ಲಿ ಗಣಪತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ.ಹಲವು ವರ್ಷಗಳಿಂದ ತಾಲೂಕಿನಲ್ಲಿ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಸಂಘಟನೆಗಳು ಸಂಭವಿಸಿಲ್ಲ. ಈ ಬಾರಿಯೂ ಇಂದಿನಂತೆಯೇ ಶಾಂತಿಯುತವಾಗಿ ಹಬ್ಬವನ್ನು ಆಚರಿಸಲು ಎಲ್ಲ ಸಂಘಟಕರು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ವೇಳೆ ಗಣಪತಿ ವಿಗ್ರಹಗಳು ವಿದ್ಯುತ್ ಲೈನಿಗೆ ತಾಕುವಂತಿರುತ್ತವೆ. ಈ ಬಾರಿ ಧಾರಾಕಾರ ಮಳೆಯಿಂದಾಗಿ ವಿದ್ಯುತ್ ಕಂಬಗಳು ವಾಲಿರುವುದರಿಂದ ವಿದ್ಯುತ್ ತಂತಿಗಳು ತಳಭಾಗದಲ್ಲಿಯೇ ಇವೆ. ಹೀಗಾಗಿ ಗಣಪತಿ ಮೆರವಣಿಗೆಗೆ ಮೊದಲು ಆಯೋಜಕರು ಮೆರವಣಿಗೆ ನಡೆಯುವ ಮಾರ್ಗವನ್ನು ಪರಿಶೀಲನೆ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಿಒಪಿ ವಿಗ್ರಹಗಳಿಗಿಲ್ಲ ಅವಕಾಶ
ಗಣೇಶೋತ್ಸವದ ಸಂದರ್ಭದಲ್ಲಿ ಪಿಒಪಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶವಿಲ್ಲ. ಹೀಗಾಗಿ ತಾಲೂಕಿನಲ್ಲಿ ಈ ರೀತಿಯ ಮೂರ್ತಿಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ ಎಂದು ಎಸ್ಪಿ ರೋಹನ ಜಗದೀಶ ತಿಳಿಸಿದರು. ಇದಲ್ಲದೆ ಹಸಿರು ಪಟಾಕಿಗಳನ್ನು ಸಿಡಿಸಲು ಮಾತ್ರ ಅವಕಾಶ ನೀಡಲಾಗಿದೆ. ರಾತ್ರಿ ಎಂಟು ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬಹುದಾಗಿದೆ. ಧ್ವನಿವರ್ಧಕ (ಡಿಜೆ) ಅಳವಡಿಕೆಗೆ ಅವಕಾಶವಿಲ್ಲ. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಪ್ಲೆಕ್ಸ್ ಅಳವಡಿಕೆಗೆ ಅನುಮತಿ ಕಡ್ಡಾಯ
ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಕ್ಕೆ ಪ್ಲೆಕ್ಸ್ ಬಂಟಿಂಗ್ ಬ್ಯಾನರ್ ಕಟ್ಟಲು ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ ಎಂದು ಎಸ್ಪಿ ತಿಳಿಸಿದರು.
ಸಿಂಗಲ್ ವಿಂಡೋ ಸಿಸ್ಟಮ್
ಗಣೇಶೋತ್ಸವ ಹಾಗೂ ಈ ಆಚರಣೆಗೆ ಅನುಮತಿ ನೀಡಲು ಸಿಂಗಲ್ ವಿಂಡೋ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಅರ್ಜಿ ಸಲ್ಲಿಸುವ ಮೂಲಕ ಹಬ್ಬ ಆಚರಣೆಗೆ ಪರವಾನಗಿ ಪಡೆಯಬೇಕು. ಸಾರ್ವಜನಿಕರು ಒಂದೊಂದು ಅನುಮತಿ ಪಡೆಯಲು ಒಂದೊಂದು ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಈ ಏಕ ಕಿಂಡಿ ವ್ಯವಸ್ಥೆ ಮಾಡಲಾಗಿದೆ ಎಂದರಲ್ಲದೇ, ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಪೋಲಿಸ್ ಠಾಣೆಯಿಂದ ತಿಳಿಸಿದ ದಿನಾಂಕದಿಂದ ಅನುಮತಿ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಸ್ವಯಂ ಸೇವಕರ ನೇಮಕಕ್ಕೆ ಸೂಚನೆ
ಗಣೇಶೋತ್ಸವದ ಮೆರವಣಿಗೆ ಹಾಗೂ ಈದ್ ಮಿಲಾದ್ ಮೆರವಣಿಗೆ ವೇಳೆ ಸಂಬಂಧಿಸಿದವರು ಸ್ವಯಂಸೇವಕರನ್ನು ನೇಮಿಸಿಕೊಳ್ಳುವುದರಿಂದ ಮೆರವಣಿಗೆ ಸಂದರ್ಭದಲ್ಲಿ ಆಗುವ ಸಣ್ಣಪುಟ್ಟ ಗೊಂದಲಗಳನ್ನು ಶೀಘ್ರವೇ ಸರಿ ಪಡಿಸಲು ಸಾಧ್ಯವಾಗುತ್ತದೆ
ಪೊಲೀಸರೊಂದಿಗೆ ಸ್ವಯಂಸೇವಕರು ಇದ್ದಾಗ ಮೆರವಣಿಗೆಯನ್ನು ಸರಿಯಾಗಿ ನಿಯಂತ್ರಿಸುವ ಜೊತೆಗೆ, ಸ್ಥಳೀಯರೇ ಸ್ವಯಂಸೇವಕರು ಆಗಿರುವುದರಿಂದ ಯಾವುದೇ ಗೊಂದಲಕ್ಕೂ ಅವಕಾಶವಿರುವುದಿಲ್ಲ ಎಂದರು ಅಭಿಪ್ರಾಯ ಪಟ್ಟರು.
ಈಶ್ವರ ಮೇಡ್ಲೇರಿ ನಿರೂಪಣೆ ಮಾಡಿದರು, ಪಿಎಸ್ಐ ನಾಗರಾಜ ಗಡದ ಪ್ರಾಸ್ತಾವಿಕವಾಗಿ ಮಾತನಾಡಿದರು..
ಸಭೆಯಲ್ಲಿ ಎಸ್ಪಿ ರೋಹನ ಜಗದೀಶ, ಡಿವಾಯ್ಎಸ್ಪಿ ಮೂರ್ತುಜಾ ಖಾದ್ರಿ, ಡಿಆರ್ ಡಿಎಸ್ಪಿ ಪಿ ವಿದ್ಯಾನಂದ್ ನಾಯಕ್. ಮಂಜುನಾಥ ಅಮಾಸಿ, ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್ಐ ನಾಗರಾಜ ಗಡದ, ಯಲ್ಲವ್ವ ದುರ್ಗಣ್ಣವರ್, ಮಂಜುನಾಥ ಮುದಗಲ್, ಗುರುರಾಜ, ಪಿ.ಬಿ.ಕರಾಟೆ, ಚಂಬಣ್ಣ ಬಾಳಿಕಾಯಿ, ನೀಲಪ್ಪ ಕರ್ಜೆಕ್ಕಣ್ಣವರ್, ಜಯಕ್ಕ ಕಳ್ಳಿ, ಕರೀಂ ಖಾನ ಕರೀಮಖಾನ್ನವರ್, ಎಸ್.ಕೆ.ಹವಾಲ್ದಾರ್,ಈರಣ್ಣ ಪೂಜಾರ,ಶಿವಣ್ಣ ಡಂಬಳ, ಮಂಜುನಾಥ ಮಾಗಡಿ, ಗಂಗಾಧರ ಮೇನಸಿನಕಾಯಿ, ಮಹೇಶ ಕಲಘಟಗಿ, ಸೋಮೇಶ ಉಪನಾಳ, ಥಾವರಪ್ಪ ಲಮಾಣಿ, ಬಸವರಾಜ ಹೋಗೆಸೋಪ್ಪಿನ, ಫಕ್ಕೀರೇಶ, ದಾದಾಫೀರ್ ಮುಚ್ಚಾಲೆ, ಸದಾನಂದ ನಂದೇಣ್ಣವರ್, ಪ್ರಕಾಶ ಮಾದನೂರ, ತಿಪ್ಪಣ್ಣ ಸಂಶಿ, ಜಗದೀಶಗೌಡ ಪಾಟೀಲ್, ಮಹೇಶ ಹೊಗೆಸೊಪ್ಪಿನ್, ಹೊನ್ನಪ್ಪ ವಡ್ಡರ, ಜಾಕೀರ ಹವಾಲ್ದಾರ, ಫಕ್ಕೀರೇಶ ಭಜಕ್ಕನವರ, ಇಸ್ಮಾಯಿಲ್ ಆಡೂರ, ಖಲಂದರ ಸೂರಣಗಿ, ನೀಲಪ್ಪ ಶರಸೂರಿ, ಶರಣು ಗೋಡಿ ಮತ್ತಿತರಿದ್ದರು.