ನರೇಗಲ್ಲ: ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಭಾಗದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದ ಕಡಲೆ ಬೆಳೆ ಸಂಪೂರ್ಣ ಸಿಡಿ ರೋಗಕ್ಕೆ ತುತ್ತಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಸಮೀಪದ ಅಬ್ಬಿಗೇರಿಯ ರೈತ, ಪ್ರಕಾಶ ಪಾಟೀಲ ಅನ್ನೋರ ಜಮೀನಿನಲ್ಲಿ ನಮ್ಮ ಕಂಪನಿ ಯ ರಾಸಾಯನಿಕ ಬಳಸಿ ಬೀಜೋಪಚಾರ ಮಾಡಿದ್ದಾರೆ.ಕಡಲೆ ಬೆಳೆಗೆ ಸಿಡಿ ರೋಗ ಬರುವುದಿಲ್ಲ ಎಂದು ಹೇಳಿ ಬೀಜೋಪಚಾರ ಮಾಡಿದ್ದ ಬೆಳೆ ಈಗ ಸಂಪೂರ್ಣ ಸಿಡಿ ರೋಗಕ್ಕೆ ತುತ್ತಾಗಿದ್ದು, ಕಂಪನಿಯ ಮಾತು ಕೇಳಿಕೊಂಡು ಸುಮಾರು 20 ಎಕರೆ ಪ್ರದೇಶದಲ್ಲಿ ಬೇಳೆದಿದ್ದ ಕಡಲೆ ಸಂಪೂರ್ಣ ನಾಶವಾಗಿದೆ. ಈ ಬಗ್ಗೆ ಕಂಪನಿಯವರಿಗೆ ಹಾಗೂ ಕೃಷಿ ಇಲಾಖೆಗೂ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ಪ್ರಕಾಶ ಪಾಟೀಲ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಬ್ಬಿಗೇರಿ ಗ್ರಾಮದ ಸರ್ವೆ ನಂ: 614/210.22 ಎಕರೆ ಹಾಗೂ 616/28.20 ಎಕರೆ ಪ್ರದೇಶದಲ್ಲಿ ಸಿಜೆಂಟಾ ಕಂಪನಿಯ ಬೀಜೋಪಚಾರ ಮಾಡಿದ ಕಡಲೆಯನ್ನು ಬಿತ್ತನೆ ಮಾಡಲಾಗಿತ್ತು. ಕಂಪನಿಯ ಸಿಬ್ಬಂದಿ ಬೀಜೋಪಚಾರ ಮಾಡಿದಲ್ಲಿ ಸಿಡಿ ರೋಗ ಬರುವುದಿಲ್ಲ ಎಂದಿದ್ದರು. ಆದರೆ, ಪ್ರಾರಂಭದಲ್ಲಿ ಹುಲುಸಾಗಿ ಬೆಳೆದ ಕಡಲೆ ಈಗ ಸಂಪೂರ್ಣ ಸಿಡಿ ರೋಗಕ್ಕೆ ತುತ್ತಾಗಿದೆ. ಈ ಬಗ್ಗೆ ಕಂಪನಿಯವರಿಗೆ ಕರೆ ಮಾಡಿದರೆ ಕರೆ ಸ್ವಿಕರಿಸುತ್ತಿಲ್ಲ. ಕೃಷಿ ಅಧಿಕಾರಿಗಳು ನಾಮಕೇವಾಸ್ತೆ ಬಂದು ಶೇ. 40 ರಷ್ಟು ಬೆಳೆ ಹಾನಿಯಾಗಿದೆ ಎಂದು ವರದಿ ನೀಡಿ ಕೈ ತೊಳೆದುಕೊಂಡಿದ್ದಾರೆ. ಬೆಳೆ ಹಾನಿಗೆ ಯಾವುದೇ ಪರಿಹಾರ ನೀಡುತಿಲ್ಲ. ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಕಡಲೆ ಬೆಳೆಗೆ ಲಕ್ಷಾಂತರ ರೂ. ಖರ್ಚಾಗಿದ್ದು, ಈ ವರ್ಷದ ಹಿಂಗಾರಿನ ಸಂಪೂರ್ಣ ಬೇಳೆ ಹಾಳಾಗಿದೆ. ಅದಕ್ಕೆ , ಕಂಪನಿಯವರು ಬೆಳೆ ಹಾನಿ ಭರಸಬೇಕು ಎಂದು ರೈತ ಪ್ರಕಾಶ ಪಾಟೀಲ ಆಗ್ರಹಿಸಿದ್ದಾರೆ.