ಜಾತಿ ಜನಗಣತಿ ವರದಿ ಸೋರಿಕೆಯಾಗಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜ್ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, “ಜಾತಿ ಜನಗಣತಿ ಕುರಿತಾಗಿ ಕಾಂತರಾಜ್ ವರದಿ ಅವೈಜ್ಞಾನಿಕವಾಗಿದೆ ಎಂಬ ಆರೋಪಗಳು ನಿಖರವಾದದ್ದಲ್ಲ. ಸಮೀಕ್ಷೆ ಎಲ್ಲಾ ಆಯಾಮಗಳಿಂದಲೂ ವಿಜ್ಞಾನಪೂರ್ಣವಾಗಿ ಮತ್ತು ಸಮಗ್ರವಾಗಿ ನಡೆಸಲಾಗಿದೆ,” ಎಂದು ತಿಳಿಸಿದರು.

ಮೇಲಿನ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣಮಾಹಿತಿ ಒದಗುತ್ತದೆ.
ಸರ್ಕಾರ ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಆಯೋಗ ನೀಡಿದ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂಬ ಹಂಬಲವಿದೆ ಎಂದರು. “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವರದಿಯನ್ನು ಜಾರಿಗೆ ತರಲಿದ್ದಾರೆಂಬ ನಂಬಿಕೆ ನನಗೆ ಇದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
