ಗದಗ: ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಕಾರು ಚಾಲಕ, ಸುನೀಲ್ ಚವ್ಹಾಣ (25) ಆತ್ಮಹತ್ಯೆ ಕೇಸ್ ಗೆ ಸಂಬಂಧಿಸಿದಂತೆ, ಆತನ ಕುಟುಂಬಸ್ಥರು ಹಲವು ಅನುಮಾನಗಳನ್ನ ವ್ಯಕ್ತಪಡಿಸಿದ್ದಾರೆ.
ಪೊಲೀಸರ ತನಿಖಾ ವಿಧಾನದ ಬಗ್ಗೆ ಸಂಶಯ ಹೊರಹಾಕಿರುವ ಅವರು, ಚಾಲಕನ ಸಂಬಂಧಿಕರು ಸ್ಥಳಕ್ಕೆ ಬರುವ ಮುನ್ನವೇ ಬಾಡಿ ಕೆಳಗಿಳಿಸಲಾಗಿತ್ತು. ಮುಂಡರಗಿ ತಾಲೂಕಿನ ದಿಂಡೂರಿಂದ ಲಕ್ಷ್ಮೇಶ್ವರಕ್ಕೆ ಬರುವ ಮುನ್ನವೇ ಬಾಡಿ ಕೆಳಗಿಳಿಸಲಾಗಿತ್ತು. ಶಾಸಕರು ಸುನಿಲ್ ನನ್ನ ಮಗನಂತೆ ನೋಡಿ ಕೊಂಡಿದ್ದರು. ಎರಡು ವರ್ಷದಿಂದ ಶಾಸಕರ ಜೊತೆಗೆ ಡ್ರೈವರ್ ಆಗಿ ಸುನೀಲ್ ಕೆಲಸ ಮಾಡ್ತಿದ್ದನು. ಯಾವುದೇ ಹಣದ ವ್ಯವಹಾರ ಇರಲಿಲ್ಲ. ಆದರೆ ಏಕಾಏಕಿ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ ಗೊತ್ತಿಲ್ಲ, ಸೂಕ್ತ ತನಿಖೆ ನಡೆಸಿ ಸಾವಿಗೆ ಕಾರಣ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ.

ಇತ್ತ ಸುನಿಲ್ ಸಹೋದರ ಆನಂದ ಕೂಡ, ಸಾವಿನ ಕುರಿತು ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.
ಇತ್ತ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಅವರು ಹೇಳೋ ಪ್ರಕಾರ, ಚಾಲಕ ಸುನೀಲ್ ಮೂರು ವರ್ಷದಿಂದ ನಮ್ಮ ಜೊತೆಗೆ ಇದ್ದ. ಡ್ರೈವರ್ ಅನ್ನೋದಕ್ಕಿಂತ ಸುನಿಲ್ ನಮ್ಮ ಸಂಬಂಧಿ, ನಮ್ಮ ಕುಟುಂಬದ ಜೊತೆ ಉತ್ತಮ ಬಾಂಧವ್ಯ, ಒಡನಾಟ ಹೊಂದಿದ್ದ. ಬೆಳಗ್ಗೆ 10 :30 ಗಂಟೆಯ ನನಗೆ ಮಾಹಿತಿ ಸಿಕ್ತು. ಬೆಳಗ್ಗೆ ಮನೆ ಹತ್ತಿರ ಹೋಗಿ ನೋಡಿದಾಗ ನಮ್ಮವರಿಗೆ ವಿಷ್ಯ ಗೊತ್ತಾಗಿದೆ.ಆತನಿಗೆ ಯಾರೂ ದುಷ್ಮನ್ ಗಳಿರಲಿಲ್ಲ, ಸದ್ಯಕ್ಕೆ ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೀತಿದೆ.
ತನಿಖೆಯಲ್ಲಿ ಯಾವುದೂ ಲ್ಯಾಪ್ಸ್ ಆಗಿಲ್ಲ.ಈ ಬಗ್ಗೆ ನಾನೂ ಪೊಲೀಸರಿಗೆ ಯಾವುದೇ ಸೂಚನೆ ಸಹ ಕೊಟ್ಟಿಲ್ಲ,ನಿನ್ನೆ ಅಣ್ಣತಮ್ಮ ಇಬ್ಬರೇ ಮಾತ್ನಾಡಿದ್ದಾರೆ ಅಂತಿದಾರೆ. ಏನಿದೆ ಅಂತಾ ಸ್ಪಷ್ಟವಾಗಿ ಗೊತ್ತಿಲ್ಲ. ಜೊತೆಗೆ ಅವನಿಗೆ ಬಯ್ಯೋದಕ್ಕೆ ಯಾರೂ ಹೋಗಿಲ್ಲ. ಮೇಲಾಗಿ ನನ್ನ ಪತ್ನಿಗೆ ಸುನೀಲ್ ಸಹೋದರನಾಗಬೇಕು.ಅವನು ಟ್ರಕ್ ಡ್ರೈವರ್ ಆಗಿದ್ದ, ಪತ್ನಿ ಸರೋಜಾ ಅವರೇ ಆತನನ್ನ ಡ್ರೈವರ್ ಆಗಿ ಕರೆದುಕೊಂಡು ಬಂದಿದ್ದರು.
ಎಂಎಲ್ ಎ ಆಗುವದಕ್ಕಿಂತ ಮೊದಲೇ ನಮ್ಮ ಜೊತೆ ಇದ್ದಾನೆ.ಮನೆ ಕಟ್ಟಿಸಿಕೊಳ್ಳಬೇಕೆಂದು ಹೇಳಿದಾಗ ಪಿಡಿಓ ಅವರಿಗೂ ಹೇಳಿದ್ದೆ. ಅವರ ತಂದೆ ತಾಯಿಗೆ ದುಡ್ಡು ಕೊಡ್ತಾ ಇರ್ತಿದ್ವಿ. ಆದರೆ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದುರ ಬಗ್ಗೆ ತನಿಖೆ ಮೂಲಕ ಗೊತ್ತಾಗಲಿ ಎಂದು ಎಂದು ಹೇಳಿದ್ದಾರೆ.
ಸದ್ಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ನಿಷ್ಪಕ್ಷಪಾತ ತನಿಖೆ ಬಳಿಕ ಸತ್ಯಾಸತ್ಯತೆ ಬಯಲಾಗಬೇಕಿದೆ.