ಸಾಮಾನ್ಯವಾಗಿ ಆನೆ,ಒಂಟೆ,ಕುದುರೆ ಮೇಲೆ ಮಾನವ ಸವಾರಿ ಮಾಡೋದನ್ನ ನೋಡಿದ್ದೀರಿ. ಆದರೆ ಇಲ್ಲೊಂದು ವಿಚಿತ್ರ ಘಟನೆ ಅಂದ್ರೆ, ಒಂಟೆಯೇ ಬೈಕ್ ಮೇಲೆ ಸವಾರಿ ಮಾಡಿ ಅಚ್ಚರಿ ಮೂಡಿಸಿದೆ.
ಹೌದು, ಇಬ್ಬರು ಯುವಕರು ಒಂಟೆಯನ್ನೇ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಂಟೆಯ ಕಾಲುಗಳನ್ನು ಕಟ್ಟಿ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದಿದೆ. 50 ಸಾವಿರಕ್ಕೂ ಅಧಿಕ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆಂದು ತಿಳಿದು ಬಂದಿದೆ. ಜೊತೆಗೆ ವಿಡಿಯೋ ನೋಡಿದ ನೆಟ್ಟಿಗರು “ಇದು ಕಲಿಯುಗ, ಕಣ್ರಿ ಇಲ್ಲಿ ಏನು ಬೇಕಾದರೂ ಆಗಬಹುದು ಎಂದು ತಮ್ಮ ಅನಿಸಿಕೆ ತಿಳಿಸಿದ್ದಾರೆ.ಕೆಲವೊಮ್ಮೆ ದೋಣಿಯಲ್ಲಿ ಕಾರಿದ್ದರೆ ಮತ್ತೆ ಕೆಲವೊಮ್ಮೆ ಕಾರಿನಲ್ಲಿ ದೋಣಿ ಇರುತ್ತದೆ,” ಎಂದು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು ಪ್ರಾಣಿಗಳಿಗೆ ಈ ರೀತಿ ಹಿಂಸೆ ಮಾಡುವದು ತಪ್ಪು ಎಂದಿದ್ದಾರೆ