ಮುಂಡರಗಿ:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮುಂಡರಗಿ ತಾಲೂಕು ಶಾಖೆಯ ವತಿಯಿಂದ 06/01/2026 ರಂದು ರಾಜ್ಯ ಕಚೇರಿಯಿಂದ ಮುದ್ರಿತಗೊಂಡ 2026ರ ಅಧಿಕೃತ ಕ್ಯಾಲೆಂಡರ್ ಅನ್ನು ಭವ್ಯವಾಗಿ ಬಿಡುಗಡೆಗೊಳಿಸಲಾಯಿತು.
ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಮುಂಡರಗಿ ತಹಶೀಲ್ದಾರ ಶ್ರೀ ಎರಿಸ್ವಾಮಿ ಪಿ.ಎಸ್. ಅವರು,
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯಾಧ್ಯಕ್ಷರಾದ ಶ್ರೀಯುತ ಷಡಾಕ್ಷರಿ ಅವರ ದಕ್ಷ ನಾಯಕತ್ವದಲ್ಲಿ ನೌಕರ ಪರವಾದ ಅನೇಕ ಮಹತ್ವದ ಆದೇಶಗಳನ್ನು ಸರ್ಕಾರದಿಂದ ಮಾಡಿಸಿಕೊಡುವ ಮೂಲಕ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಿದೆ ಎಂದು ಶ್ಲಾಘಿಸಿದರು. ತಾಲೂಕು ಶಾಖೆಯು ಸಹ ನೌಕರರ ಹಿತಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘದ ಎಲ್ಲಾ ಚಟುವಟಿಕೆಗಳಿಗೆ ಎಲ್ಲ ನೌಕರರ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಅಧ್ಯಕ್ಷ ನಾಗರಾಜ ಹಳ್ಳಿಕೇರಿ ಅವರು, ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸಂಘ ಕೈಗೊಳ್ಳುತ್ತಿರುವ ಕಾರ್ಯಚಟುವಟಿಕೆಗಳ ವಿವರವನ್ನು ನೌಕರರಿಗೆ ತಿಳಿಸುತ್ತಾ,
ಈ ವರ್ಷ ರಾಜ್ಯದಾದ್ಯಂತ ಆರು ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರಿಗೆ ಕ್ಯಾಲೆಂಡರ್ ವಿತರಿಸಲಾಗುತ್ತಿದೆ ಎಂದು ಹೇಳಿದರು. ರಾಜ್ಯಾಧ್ಯಕ್ಷರಾದ ಶ್ರೀ ಷಡಾಕ್ಷರಿ ಅವರು ನುಡಿದಂತೆ ನಡೆಯುವ, ನೌಕರರ ಹಕ್ಕುಗಳಿಗಾಗಿ ಸದಾ ಹೋರಾಡುವ “ನೌಕರರ ಮಹಾ ನಾಯಕ” ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ನಾಗೇಂದ್ರ ಪಟ್ಟಣಶೆಟ್ಟಿ, ಶಂಕರ ಸರ್ವದೆ, ಮಲ್ಲಿಕಾರ್ಜುನ ಕಲಕಂಬಿ, ಉಪ ತಹಶೀಲ್ದಾರರಾದ ಬಸವರಾಜ ಕಣ್ಣೂರು, ಬಳೂಟಗಿ, ಶ್ರೀಧರ ದಾನಿ, ಜಗದೀಶ ಎ, ಅರ್ಜುನ ಮುತ್ತಾನವರ, ಮಹೇಶ ಅಲ್ಲಿಪುರ, ಜಗದೀಶ ಗುಳಾರಿ, ಎಸ್.ಎಸ್. ಮೇಟಿ, ಶಿವಕುಮಾರ ಸಜ್ಜನರ, ಎ.ಡಿ. ಬಂಡಿ, ಬಸವರಾಜ ಪೊಲೂರು, ಎಂ.ಪಿ. ಶೀರನಹಳ್ಳಿ, ಮುತ್ತಪ್ಪ ಭಜಂತ್ರಿ, ಶ್ರೀಕಾಂತ ಅರಹುಣಸಿ, ಮಲ್ಲಿಕಾರ್ಜುನ ಬಾರ್ಕೆರ, ಮೈಲಾರಪ್ಪ ಬೂದಿಹಾಳ, ಹನುಮಂತಪ್ಪ ಹುಡೇದ, ಮೌಲಾಸಾಬ ಬನ್ನಿಕೊಪ್ಪ, ಮೃತ್ಯುಂಜಯ ವಿಭೂತಿ, ಬಿ.ಕೆ. ಸಂಜೀವಪ್ಪನವರ, ಸಂತೋಷ ಜಾಧವ, ಮುದುಕಪ್ಪ ಸಂಸಿ, ವಿಠಲ ನಾವಳ್ಳಿ, ಎಂ.ಕೆ. ಸ್ವಾಮಿ, ಎ.ಎಸ್. ಪಾಟೀಲ, ವಿಶ್ವನಾಥ ಉಳ್ಳಾಗಡ್ಡಿ, ವಿ.ಎಚ್. ಕುಂಬಾರ, ಈರಪ್ಪ ಸೊರಟೂರ, ಮಂಜುಳಾ ಸಜ್ಜನರ, ಸುಮಂಗಲಾ ಬೀಳಗಿ, ಹುಸೇನ ಕವಲೂರ, ಪ್ರಿಯದರ್ಶಿನಿ ಪಾಟೀಲ, ಸೇರಿದಂತೆ ವಿವಿಧ ಇಲಾಖೆಯ ವೃಂದ ಸಂಘಗಳ ಪದಾಧಿಕಾರಿಗಳು ಹಾಗೂ ನಿವೃತ್ತ ನೌಕರರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಶಂಕರ್ ಸರ್ವೋದೇ ಅವರು ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.
