ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಭೂತಪೂರ್ವವಾದ ಗೆಲುವನ್ನು ಸಾಧಿಸಿ ಎರಡನೇ ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಶ್ರೀ ಸಿ ಎಸ್ ಷಡಕ್ಷರಿಯವರನ್ನು ಮುಂಡರಗಿ ತಾಲೂಕು ಶಾಖೆಯಿಂದ ತಾಲೂಕಿನ ಸಮಸ್ತ ನೌಕರರ ಪರವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ಕಾರ್ಯದರ್ಶಿ ಶಂಕರ ಸರ್ವದೆ, ಖಜಾಂಚಿ ಶ್ರೀಧರ ದಾನಿ, ರಾಜ್ಯ ಪರಿಷತ್ ಸದಸ್ಯ ಮಲ್ಲಿಕಾರ್ಜುನ ಕಲಕಂಬಿ, ನಿರ್ದೇಶಕ ಸಂತೋಷ ಜಾಧವ ಸೇರಿದಂತೆ ಅನೇಕ ನೌಕರರು ಹಾಜರಿದ್ದರು.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ B.P ಕೃಷ್ಣಗೌಡ ಹಾಗೂ C.S. ಷಡಕ್ಷರಿ ಅವರು ಕಣದಲ್ಲಿದ್ದರು. C.S. ಷಡಕ್ಷರಿ ಅವರು 507 ಮತಗಳನ್ನು ಗಳಿಸಿ ಪ್ರತಿ ಸ್ಪರ್ಧಿ B.P ಕೃಷ್ಣಗೌಡ ವಿರುದ್ಧ ಗೆಲುವು ಸಾಧಿಸಿದ್ದಾರೆ.