ಗದಗ: ಲಕ್ಷ್ಮೇಶ್ವರದಿಂದ ಕಲ್ಲಾಗನೂರಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್. ನಂ ಕೆಎ .42 ಎಫ್.1571 ಸಂಖ್ಯೆಯ ಸಾರಿಗೆ ಬಸ್ ದೊಡ್ಡೂರು ಸೂರಣಗಿ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ಜರುಗಿದೆ.
ಘಟನೆಯ ವಿವರ:
ಶಿರಹಟ್ಟಿ ಡಿಫೋಗೆ ಸೇರಿದ ಸಾರಿಗೆ ಸಂಸ್ಥೆಯ ಬಸ್ ಕಲ್ಲಾಗನೂರಿಗೆ ಹೊರಟಿತ್ತು. ದೊಡ್ಡೂರು ದಾಟಿದ ನಂತರ ಏಕಾಏಕಿ ಪಾಟಾ ಕಟ್ಟಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗಕ್ಕೆ ತಿರುಗಿ ಕಂದಕಕ್ಕೆ ಉರುಳಿದೆ.
ಈ ಬಸ್ಸಿನಲ್ಲಿ ಸುಮಾರು 25 ಜನ ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಬಸ್ ಕಂದಕಕ್ಕೆ ಜಾರುತ್ತಿದ್ದಂತೆ ಗಾಬಾರಿಗೊಂಡ ಪ್ರಯಾಣಿಕರು ಚಿರಾಟ, ಕೂಗಾಟ ಮಾಡಿದ್ದಾರೆ. ಆದರೆ ಅಷ್ಟರಲ್ಲಿಯೇ ತುರ್ತು ಬಾಗಿಲು ಮುರಿದು ಪ್ರಯಾಣಿಕರು ಪಾರಾಗಿದ್ದಾರೆ. ಬಸ್ಸಿನಿಂದ ಜಿಗಿಯುವ ಸಂದರ್ಭದಲ್ಲಿ ಸೂರಣಗಿ ಗ್ರಾಮದ ಗಂಗವ್ವ ಲಮಾಣಿ, ಈರಪ್ಪ ಡಾಕಪ್ಪ ಲಮಾಣಿ, ಮತ್ತು ಬಾಲೇಹೊಸೂರಿನ ಶಿವಪ್ಪ ಅರಕೇರಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳಿಗೆ ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ವರದಿ : ಪರಮೇಶ ಎಸ್ ಲಮಾಣಿ
ಸುದೈವದಿಂದ ಬಸ್ ಉರುಳಿದ ಎಡಭಾಗದಲ್ಲಿ ಸಾಕಷ್ಟು ಗಿಡಗಳು ಇರುವದರಿಂದ ಬಸ್ ಪಲ್ಟಿ ಆಗೋದು ತಪ್ಪಿ ಯಾವುದೇ ಪ್ರಾಣಹಾನಿಯಾಗಿಲ್ಲ.
ಲಕ್ಷ್ಮೇಶ್ವರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
