Home ಸುತ್ತಾ-ಮುತ್ತಾ ಟಿಕೇಟ್ ವಿಚಾರಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ : ಮಹಿಳಾ ಪ್ರಯಾಣಿಕರಿಂದ ರಕ್ಷಣೆ

ಟಿಕೇಟ್ ವಿಚಾರಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ : ಮಹಿಳಾ ಪ್ರಯಾಣಿಕರಿಂದ ರಕ್ಷಣೆ

0
ಟಿಕೇಟ್ ವಿಚಾರಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ : ಮಹಿಳಾ ಪ್ರಯಾಣಿಕರಿಂದ ರಕ್ಷಣೆ

ಗದಗ: ಟಿಕೇಟ್ ಕೊಡಲು ಬಸ್ ನಿಲ್ಲಿಸಿದ್ದಕ್ಕೆ ಕಂಡಕ್ಟರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಶಿವಾಜಿ ತಾಂಡಾದಲ್ಲಿ ನಡೆದಿದೆ.

ಕೆಲ‌ ಪ್ರಯಾಣಿಕರು ಕಂಡಕ್ಟರ್ ಕೃಷ್ಣಾ ನಾಯಕನನ್ನು ಎಳೆದೊಯ್ದು ಕಲ್ಲಿನಿಂದ ತಲೆ ಮತ್ತು ಕತ್ತಿನ ಭಾಗಕ್ಕೆ ಹೊಡೆದು ಗಂಭೀರ ಗಾಯಗೊಳಿಸಿದ್ದಾರೆ. ಆದರೆ ಬಸ್ ತುಂಬಾ ಉಳಿದ ಪ್ರಯಾಣಿಕರಿದ್ರೂ ಸಹ ಜಗಳ ಬಿಡಿಸುವ ಗೋಜಿಗೆ ಹೋಗಿಲ್ಲ. ಬಸ್ಸಿನಲ್ಲಿದ್ದ ಮಹಿಳಾ ಪ್ರಯಾಣಿಕರು ಮಧ್ಯ ಪ್ರವೇಶಿಸಿ ಕಂಡಕ್ಟರ್ ರಕ್ಷಣೆ ಮಾಡಿದ್ದಾರೆ. ಗಾಯಾಳು ಕಂಡಕ್ಟರ್ ಗೆ ಲಕ್ಷ್ಮೇಶ್ವರ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಜಿಲ್ಲೆಯಲ್ಲಿ ಸಾರಿಗೆ‌ ಸಂಸ್ಥೆಯ ಚಾಲಕ ಹಾಗೂ ನಿರ್ವಾಹಕರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸಾರಿಗೆ‌‌ ಸಂಸ್ಥೆಯ ಸಿಬ್ಬಂದಿ ಕಿಡಿ ಕಾರಿದ್ದಾರೆ. ಕಂಡಕ್ಟರ್ ಮೇಲೆ ನಡೆದ ಹಲ್ಲೆಗೆ ಚಾಲಕರು ಹಾಗೂ ನಿರ್ವಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.‌ ಶಿರಹಟ್ಟಿ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

LEAVE A REPLY

Please enter your comment!
Please enter your name here