ಲಕ್ಷ್ಮೇಶ್ವರ: ಪಟ್ಟಣದ ಜೀವನಾಡಿ ಎಂದೆ ಕರೆಯಲ್ಪಡುವ ಏಕೈಕೆ ಕೆರೆ ಇಟ್ಟಿಗೆರೆ ಕೆರೆಯು ಅವಸಾನದ ಅಂಚಿಗೆ ಬಂದು ತಲುಪುವ ಹೊತ್ತಲ್ಲಿ ಕರ್ನಾಟಕ ರಾಜ್ಯ ಕೆರೆ ಅಭಿವೃದ್ದಿ ಪ್ರಾಧಿಕಾರವು ಪಟ್ಟಣದ ಇಟ್ಟಿಗೆರೆ ಕೆರೆ ಅಭಿವೃದ್ದಿಗೆ ಮುಂದಾಗಿರುವುದು ಪಟ್ಟಣದ ಪಕೃತಿ ಪ್ರೀಯರಲ್ಲಿ ಸಂತಸ ಮೂಡಿಸಿದೆ.
ಲಕ್ಷ್ನೇಶ್ವರ ವರದಿ: ಪರಮೇಶ ಲಮಾಣಿ
ಕರ್ನಾಟಕ ರಾಜ್ಯ ಕೆರೆ ಅಭಿವೃದ್ದಿ ಪ್ರಾಧಿಕಾರದ ಅಧಿಕಾರಿ ಜಲ ಸಂರಕ್ಷಣಾ ಅಭಿಯಂತರ ರಫೀಕ್ ಹಾಗೂ ಪುರಸಭೆಯ ಮುಖ್ಯಾಧಿಕಾರಿ
ಮಹೇಶ ಹಡಪದ ಅವರು ಶನಿವಾರ ಕೆರೆ ಅಭಿವೃದ್ದಿ ಪ್ರಾಧಿಕಾರವು ಇಟ್ಟಿಗೆರೆ ಅಭಿವೃದ್ದಿಗೆ ಕೈಗೊಂಡಿರುವ ಕುರಿತು ಮಾಹಿತಿಯನ್ನು ಪತ್ರಕರ್ತರೊಂದಿಗೆ ಹಂಚಿಕೊಂಡರು.
ಇಟ್ಟಿಗೆರೆ ಕೆರೆ ಅಭಿವೃದ್ದಿ ಪಡಿಸಿದಲ್ಲಿ ಪಟ್ಟಣದ ನೂರಾರು ಕೊಳವೆ ಬಾವಿಗಳು ರೀಚಾರ್ಜ್ ಆಗುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಕೆರೆ ಅಭಿವೃದ್ದಿ ಪಡಿಸಿದಲ್ಲಿ ನೀರಿನ ಮೂಲಗಳ ಸಂರಕ್ಷಣೆ ಮಾಡುವುದು ಕೆರೆ ಅಭಿವೃದ್ದಿ ಪ್ರಾಧಿಕಾರದ ಮೂಲ ಉದ್ದೇಶವಾಗಿದೆ. ಅಲ್ಲದೆ ಕೆರೆಗೆ ಬರುವ ಕೊಳಚೆ ನೀರನ್ನು ಕೆರೆಗೆ ಬಾರದಂತೆ ನೋಡಿಕೊಳ್ಳುವ ಮೂಲಕ ಕೆರೆಯ ಮಲೀನತೆ ತಪ್ಪಿಸುವುದು ಕೂಡಾ ಪ್ರಾಧಿಕಾರದ ಮೂಲ ಉದ್ದೇಶವಾಗಿದೆ.

ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಪಟ್ಟಣದ ಇಟ್ಟಿಗೆರೆ ಕೆರೆ ಅಭಿವೃದ್ದಿಗೆ ಪ್ರಾಧಿಕಾರವು ಈಗಾಗಲೆ ನೀಲನಕ್ಷೆ ತಯಾರಿಸಿದ್ದು. ಪುರಸಭೆ ಸುಮಾರು ೫೬ ಲಕ್ಷ ರೂಗಳನ್ನು ಮೀಸಲಾಗಿಟ್ಟಿದೆ. ಈ ಹಣದಲ್ಲಿ ಕೆರೆ ಅಭಿವೃದ್ದಿ ಪ್ರಾಧಿಕಾರವು ಕೆರೆ ಸೌಂದರ್ಯಕ್ಕೆ ಒತ್ತು ನೀಡುವ ಕಾರ್ಯಕ್ಕೆ ಮುಂದಾಗಿದೆ. ಪಟ್ಟಣದ ಇಟ್ಟಿಗೆರೆ ಕೆರೆಯ ಒಟ್ಟು ವಿಸ್ತೀರ್ಣ ೧೨.೦೬ ಎಕರೆ ಇದ್ದು, ಈಗಾಗಲೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಒಡ್ಡು ತೆರವುಗೊಳಿಸುವುದು ಹಾಗೂ ಕೆರೆಯ ಒತ್ತುವರಿ ತೆರವುಗೊಳಿಸಿದಲ್ಲಿ ಸುಮಾರು ೨ ಎಕರೆ ಜಮೀನು ಕೆರೆಗೆ ಸಿಗುತ್ತದೆ. ಇದರಿಂದ ಕೆರಯಲ್ಲಿ ನೀರು ನಿಲ್ಲುವ ಪ್ರಮಾಣ ಹೆಚ್ಚಳವಾಗುತ್ತದೆ.
ಪ್ರಸ್ತುತ ಕೆರೆಯಲ್ಲಿ ಸುಮಾರು ೮ ಲಕ್ಷ ಲೀಟರ್ ನೀರು ನಿಲ್ಲುವ ಸಾಮರ್ಥ್ಯ ಇದ್ದು, ಕೆರೆ ಒತ್ತುವರಿ ತೆರವುಗೊಳಿಸಿದಲ್ಲಿ ಕೆರಯಲ್ಲಿ ನೀರು ನಿಲ್ಲುವ ಪ್ರಮಾಣ ೧ ಲಕ್ಷ ಲೀಟರ್ ನೀರು ನಿಲ್ಲುತ್ತದೆ ಎಂದು ಅವರು ಹೇಳಿದರು.
ಸವಣೂರ ರಸ್ತೆಯ ಮೂಲಕ ಕೆರೆಗೆ ಬರುವ ಚರಂಡಿ ನೀರನ್ನು ಮಾನ್ವಿ ಪೆಟ್ರೋಲ್ ಪಂಪ್ ಮೂಲಕ ಹೊರಗೆ ಕಳಿಸುವುದು ಪ್ರಾಧಿಕಾರದ ಉದ್ದೇಶವಾಗಿದೆ. ಅಲ್ಲದೆ ಕೆರೆಯ ಸುತ್ತಲು ೩ ಮೀಟರ ಎತ್ತರದ ಬದು ನಿರ್ಮಾಣ ಮಾಡುವ ಮೂಲಕ ಹೆಚ್ಚು ನೀರು ನಿಲ್ಲುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಅಲ್ಲದೆ ಕೆರೆಯ ಸುತ್ತಲು ವಾಕಿಂಗ್ ಹೋಗುವ ಟ್ರ್ಯಾಕ್ ನಿರ್ಮಾಣ ಮಾಡುವ ಉದ್ದೇಶವನ್ನು ಪ್ರಾಧಿಕಾರ ಹೊಂದಿದೆ. ಅಲ್ಲದೆ ಕೆರೆಗೆ ಒಳ ನೀರು ಬರುವಂತೆ ೩ ಕಡೆಗಳಲ್ಲಿ ದಾರಿ ಮಾಡಲಾಗಿದೆ. ಪೊಲೀಸ್ ಸ್ಟೇಶನ್ ಪಕ್ಕದಲ್ಲಿ ಕೆರೆಗೆ ಹೆಚ್ಚುವರಿ ನೀರು ಬಂದಲ್ಲಿ ಹೊರ ಹೋಗುವ ಔಟ್ ಲೆಟ್ ನಿರ್ಮಿಸಲಾಗಿದೆ. ಒಟ್ಟಾರೆ ಪಟ್ಟಣದ ಸೌಂದರ್ಯತೆ ಹೆಚ್ಚು ಮಾಡುವ ಹಾಗೂ ಇಟ್ಟಿಗೆರೆ ಕೆರೆ ಉಳಿಸಿಕೊಳ್ಳುವ ಕಾರ್ಯ ಮಾಡಲಾಗುವುದು ಎಂದು ಅವರು ತಿಳಿಸಿದರು. ಈ ವೇಳೆ ಶಂಕರ ಬ್ಯಾಡಗಿ, ಮಹೇಶ ಅವರು ಇದ್ದರು.
ಕೋಟ್:
ಪಟ್ಟಣದ ಸೌಂರ್ದಯತೆ ಹೆಚ್ಚಿಸಲು ಪಟ್ಟಣದ ಹಿರಿಯರ ಮಾರ್ಗದರ್ಶನದೊಂದಿದೆ, ಪುರಸಭೆ ಸದಸ್ಯರ ಸಹಕಾರದೊಂದಿಗೆ ಕೆಲಸ ಮಾಡಲು ಕರ್ನಾಟಕ ಕೆರೆ ಅಭಿವೃದ್ಧಿ ಪ್ರಧಿಕಾರ ಮುಂದೆ ಬಂದಿದ್ದು, ಸರ್ಕಾರ ಇದಕ್ಕೆ ಅನೊಮೋದನೆ ನೀಡಿದ್ದು ಖುಷಿ ತಂದಿದೆ. ಆದಷ್ಟು ಬೇಗ ಟೆಂಡರ ಕರೆಯಲಾಗುವುದು ಪಟ್ಟಣದ ಕನಸಿನ ಕೂಸು ಎಂದು ಇಟ್ಟಿಗೆರೆ ಕೆರೆಯು ಪಟ್ಟಣದ ಸೌಂದರ್ಯ ಹೆಚ್ಚಿಸಲು ತಯಾರಿಯಾಗುವುದು.
*ಎಸ್. ಮಹೇಶ – ಪುರಸಭೆ ಮುಖ್ಯಾಧಿಕಾರಿ*