Home » News » ಮಣ್ಣಿನ ಕ್ವಾರಿಯ ನೀರಿನಲ್ಲಿ ಈಜಲು ತೆರಳಿದ್ದ ಬಾಲಕರು ನಾಪತ್ತೆ..!ಬೇಸಿಗೆ ಹೆಸರಲ್ಲಿ ಮಕ್ಕಳನ್ನು ಹೊರಗೆ ಕಳುಹಿಸುವ ಮುನ್ನ ಎಚ್ಚರ ಅಗತ್ಯ..!

ಮಣ್ಣಿನ ಕ್ವಾರಿಯ ನೀರಿನಲ್ಲಿ ಈಜಲು ತೆರಳಿದ್ದ ಬಾಲಕರು ನಾಪತ್ತೆ..!ಬೇಸಿಗೆ ಹೆಸರಲ್ಲಿ ಮಕ್ಕಳನ್ನು ಹೊರಗೆ ಕಳುಹಿಸುವ ಮುನ್ನ ಎಚ್ಚರ ಅಗತ್ಯ..!

by CityXPress
0 comments

ಗದಗ:
ಗದಗ ಜಿಲ್ಲೆಯ ಮುಳಗುಂದ ಪಟ್ಟಣದ ಹೊರವಲಯದಲ್ಲಿರುವ ಮಣ್ಣಿನ ಕ್ವಾರಿಯೊಂದರಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

🖋ವರದಿ:ಮಹಲಿಂಗೇಶ ಹಿರೇಮಠ.ಗದಗ

ಮೃತ ವಿದ್ಯಾರ್ಥಿಗಳನ್ನು ಗದಗ ತಾಲೂಕಿನ ಬೆಳದಡಿ ಗ್ರಾಮದ ಬಸವರಾಜ್ ಬಡಿಗೇರ್ (15) ಹಾಗೂ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಪರಶುರಾಮ ವಡ್ಡರ್ (15) ಎಂದು ಗುರುತಿಸಲಾಗಿದೆ. ಇವರು ಮುಳಗುಂದ ಪಟ್ಟಣದ ಸಂಯುಕ್ತ ಕಿರಿಯ ಮಹಾವಿದ್ಯಾಲಯದಲ್ಲಿ (SJJM) ವ್ಯಾಸಂಗ ಮಾಡುತ್ತಿದ್ದು, ಪಟ್ಟಣದಲ್ಲಿರುವ ಅಂಬೇಡ್ಕರ್ ವಸತಿ ನಿಲಯದಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಶನಿವಾರ ಶಾಲೆ ಮುಗಿಸಿಕೊಂಡ ಬಳಿಕ ಹಾಸ್ಟೆಲ್‌ಗೆ ತೆರಳುವ ಮುನ್ನ, ಅಂಬೇಡ್ಕರ್ ವಸತಿ ನಿಲಯದ ಆರು ವಿದ್ಯಾರ್ಥಿಗಳು ಸಮೀಪದ ಮಣ್ಣಿನ ಕ್ವಾರಿಗೆ ಈಜಲು ತೆರಳಿದ್ದರು ಎನ್ನಲಾಗಿದೆ. ಈ ವೇಳೆ ನೀರಿನ ಆಳ ಹಾಗೂ ಕ್ವಾರಿಯ ಅಸಮತೋಲನದ ಕಾರಣ ಆರು ವಿದ್ಯಾರ್ಥಿಗಳ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಉಳಿದ ವಿದ್ಯಾರ್ಥಿಗಳು ಸಹಾಯಕ್ಕಾಗಿ ಕೂಗಿಕೊಂಡ ಬಳಿಕ ಸ್ಥಳೀಯರಿಗೆ ವಿಷಯ ತಿಳಿದಿದೆ.

banner

ತಕ್ಷಣವೇ ಸ್ಥಳೀಯರು ಹಾಗೂ ಮುಳಗುಂದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶೋಧ ಕಾರ್ಯದ ಮೂಲಕ ಮೃತ ವಿದ್ಯಾರ್ಥಿಗಳ ಶವಗಳನ್ನು ಶೋಧಿಸಲಾಗುತ್ತಿದೆ.

ಈ ಘಟನೆ ಮುಳಗುಂದ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ತೀವ್ರ ಶೋಕದ ವಾತಾವರಣವನ್ನುಂಟುಮಾಡಿದೆ.

ಘಟನೆ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ವಾರಿಗಳ ಬಳಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು ಕೈಗೊಳ್ಳಲಾಗಿಲ್ಲವೇ ಎಂಬುದರ ಕುರಿತು ತನಿಖೆ ಮುಂದುವರೆದಿದೆ.

ಪಾಲಕರಿಗೆ ಎಚ್ಚರಿಕೆ ಸಂದೇಶ..

ಬೇಸಿಗೆ ರಜೆ ಹಾಗೂ ಶಾಲೆ ಸಮಯದ ಬಳಿಕ ಮಕ್ಕಳು ಈಜಲು ತೆರಳುವ ಘಟನೆಗಳು ಹೆಚ್ಚಾಗುತ್ತಿವೆ.
ಮಣ್ಣಿನ ಕ್ವಾರಿಗಳು, ಕೆರೆಗಳು, ಹೊಂಡಗಳು ಹಾಗೂ ನದಿಗಳಲ್ಲಿ ನೀರಿನ ಆಳ, ತಳಭಾಗದ ಮಣ್ಣು ಮತ್ತು ಅಕಸ್ಮಾತ್ ಕುಸಿತಗಳು ಜೀವಕ್ಕೆ ಭಾರೀ ಅಪಾಯಕಾರಿಯಾಗಿರುತ್ತವೆ.ಹೀಗಾಗಿ

➡️ ಪಾಲಕರು ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು.

➡️ ಅಪಾಯಕರ ಸ್ಥಳಗಳಿಗೆ ತೆರಳದಂತೆ ಸ್ಪಷ್ಟ ಸೂಚನೆ ನೀಡಬೇಕು.

➡️ ಶಾಲಾ ಆಡಳಿತ ಹಾಗೂ ವಸತಿ ನಿಲಯಗಳು ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ಮೂಡಿಸಬೇಕು.

➡️ ಸಂಬಂಧಪಟ್ಟ ಇಲಾಖೆ ಹಾಗೂ ಪಂಚಾಯತ್‌ಗಳು ಕ್ವಾರಿಗಳ ಸುತ್ತ ಎಚ್ಚರಿಕೆ ಫಲಕ ಹಾಗೂ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

ಒಂದು ಕ್ಷಣದ ಅಜಾಗರೂಕತೆ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂಬುದನ್ನು ಎಲ್ಲರೂ ಅರಿತು, ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb